ಕರ್ನಾಟಕ

karnataka

ಎನ್​ಸಿಪಿ ಬಂಡಾಯ ಹುಟ್ಟಿದ್ದು ಪವಾರ್ ಮನೆಯಲ್ಲಿ, ನನ್ನಿಂದಲ್ಲ: ಸಚಿವ ಛಗನ್ ಭುಜಬಲ್

By

Published : Jul 9, 2023, 7:30 PM IST

ಎನ್​​ಸಿಪಿಯಲ್ಲಿ ಬಂಡಾಯ ಆರಂಭವಾಗಿದ್ದು ಶರದ್ ಪವಾರ್ ಕುಟುಂಬದಿಂದಲೇ ಹೊರತು ತಮ್ಮಿಂದಲ್ಲ ಎಂದು ಸಚಿವ ಛಗನ್ ಭುಜಬಲ್ ಹೇಳಿದ್ದಾರೆ.

Maharashtra: Chhagan Bhujbal attacks Sharad Pawar,
Maharashtra: Chhagan Bhujbal attacks Sharad Pawar

ಮುಂಬೈ : ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ವಿರುದ್ಧ ಛಗನ್ ಭುಜಬಲ್ ಭಾನುವಾರ ವಾಗ್ದಾಳಿ ನಡೆಸಿದ್ದಾರೆ. ನಾಸಿಕ್​ನ ಯೋಲಾದಲ್ಲಿ ಶರದ್ ಪವಾರ್ ನಡೆಸಿದ ರ್ಯಾಲಿಯ ಔಚಿತ್ಯತೆಯನ್ನು ಪ್ರಶ್ನಿಸಿದ ಅವರು, ಪಕ್ಷದಲ್ಲಿ ಬಂಡಾಯ ಎದ್ದಿರುವುದು ಪವಾರ್ ಕುಟುಂಬದಿಂದಲೇ ಹೊರತು ತನ್ನಿಂದಲ್ಲ ಎಂದಿದ್ದಾರೆ.

ಶನಿವಾರ ಭುಜಬಲ್‌ ಅವರ ವಿಧಾನಸಭಾ ಕ್ಷೇತ್ರವಾದ ನಾಸಿಕ್‌ನ ಯೋಲಾದಲ್ಲಿ ಪವಾರ್ ರ‍್ಯಾಲಿ ನಡೆಸಿದ್ದರು. ಇದನ್ನು ಉಲ್ಲೇಖಿಸಿದ ಛಗನ್, ತಾನು ಕೆಲವರನ್ನು ನಂಬಿ ಕೆಟ್ಟೆ ಎಂದು ಹೇಳಿದರು. "ಶರದ್ ಪವಾರ್ ಸಾಹೇಬ್, ನೀವು ಯೋಲಾಗೆ ಏಕೆ ಬಂದಿದ್ದೀರಿ ಎಂಬುದು ನನಗೆ ಅರ್ಥವಾಗಲಿಲ್ಲ. ಪಕ್ಷದಲ್ಲಿನ ಬಂಡಾಯಕ್ಕೆ ನಾನು ಜವಾಬ್ದಾರನಲ್ಲ. ಇದು ನಿಮ್ಮ ಕುಟುಂಬದಲ್ಲಿ ನಡೆದಿದೆ" ಎಂದು ಭುಜಬಲ್ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

"ಈ ಬಂಡಾಯವನ್ನು ನಾನು ಸೃಷ್ಟಿಸಿದ್ದೇನೆ ಎಂದು ಪವಾರ್ ಸಾಹೇಬರು ಅಂದುಕೊಂಡಿದ್ದಾರೆ. ಆದರೆ ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಇದು ಅವರ ಕುಟುಂಬದಲ್ಲಿ ನಡೆದಿದೆ. ಪ್ರಫುಲ್ ಪಟೇಲ್ ದೆಹಲಿಯಲ್ಲಿ ಅವರ ಸಹೋದ್ಯೋಗಿ, ಅಜಿತ್ ಪವಾರ್ ಅವರ ಕುಟುಂಬದವರು ಮತ್ತು ದಿಲೀಪ್ ವಾಲ್ಸೆ-ಪಾಟೀಲ್ ಅವರ ಆಪ್ತ ಸಹಾಯಕ" ಎಂದು ಭುಜಬಲ್ ಹೇಳಿದರು. ಪವಾರ್ ಯೋಲಾಗೆ ಬಂದರು, ಆದರೆ ವಾಲ್ಸೆ ಪಾಟೀಲ್ ಕ್ಷೇತ್ರದಲ್ಲಿ ಎನ್‌ಸಿಪಿ ಆಯೋಜಿಸಿದ್ದ ರ್ಯಾಲಿಗೆ ಅವರು ಹೋಗದಿರುವುದು ಬೇಜಾರು ತರಿಸಿದೆ ಎಂದು ಅವರು ತಿಳಿಸಿದರು.

ನನ್ನನ್ನು ಈ ಕ್ಷೇತ್ರದ ಅಭ್ಯರ್ಥಿಯನ್ನಾಗಿಸಿರುವುದಕ್ಕೆ ಕ್ಷೇತ್ರದ ಜನತೆಯ ಕ್ಷಮೆ ಕೇಳುವುದಾಗಿ ಪವಾರ್ ಹೇಳಿದ್ದಾರೆ. ಆದರೆ ನನ್ನಿಂದಾಗಿ ಯೋಲಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಹೀಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದರು. ಇಷ್ಟಾಗಿ ನೀವು ಇನ್ನೂ ಅದೆಷ್ಟು ಸ್ಥಳಗಳಲ್ಲಿ ಕ್ಷಮೆ ಕೇಳಲಿರುವಿರಿ ಎಂದು ಭುಜಬಲ್ ಪವಾರ್​ಗೆ ಪ್ರಶ್ನೆ ಹಾಕಿದರು.

ನಾಸಿಕ್ ಜಿಲ್ಲೆಯ ಜನರು ಶರದ್ ಪವಾರ್ ಅವರನ್ನು ಪ್ರೀತಿಸುತ್ತಿದ್ದರೆ, 2019 ರ ಲೋಕಸಭೆ ಚುನಾವಣೆಯಲ್ಲಿ ಇಬ್ಬರೂ ಎನ್‌ಸಿಪಿ ಅಭ್ಯರ್ಥಿಗಳು ಸೋತಿದ್ದು ಏಕೆ ಎಂದು ಭುಜಬಲ್ ಪ್ರಶ್ನೆ ಎಸೆದರು. ಅಜಿತ್ ಪವಾರ್ ಸೇರಿದಂತೆ ಎಂಟು ಎನ್‌ಸಿಪಿ ನಾಯಕರೊಂದಿಗೆ ಭುಜಬಲ್ ಅವರು ಜುಲೈ 2 ರಂದು ಶರದ್ ಪವಾರ್ ನೇತೃತ್ವದ ಎನ್‌ಸಿಪಿಯಿಂದ ಬೇರ್ಪಟ್ಟು ಏಕನಾಥ್ ಶಿಂಧೆ ಸರ್ಕಾರಕ್ಕೆ ಸೇರಿದ್ದರು.

ಬಿಜೆಪಿ ವಿರುದ್ಧ ಶರದ್ ಪವಾರ್ ಆಕ್ರೋಶ:ಭಾರತೀಯ ಜನತಾ ಪಕ್ಷವು ರಾಜ್ಯ ಮಟ್ಟದ ಪಕ್ಷಗಳನ್ನು ನಾಶಗೊಳಿಸುವ ಮತ್ತು ಪ್ರತಿಪಕ್ಷಗಳನ್ನು ದುರ್ಬಲಗೊಳಿಸುವ ಯೋಜನೆಗಳನ್ನು ಹೊಂದಿರುವಂತೆ ತೋರುತ್ತಿದೆ ಎಂದು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ. ನಾಸಿಕ್ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ ಮತ್ತು ಪಿವಿ ನರಸಿಂಹರಾವ್ ಅವರ ರಾಜಕೀಯವನ್ನು ನಾನು ನೋಡಿದ್ದೇನೆ, ಅವರೆಲ್ಲರೂ ವಿರೋಧ ಪಕ್ಷಗಳ ಬಗ್ಗೆ ವಿಮರ್ಶಾತ್ಮಕವಾಗಿ ಮಾತನಾಡಿದ್ದಾರೆ. ಆದರೆ ವಿರೋಧ ಪಕ್ಷಗಳ ಬಾಯಿ ಮುಚ್ಚಿಸಲು ಅವರು ಎಂದಿಗೂ ಪ್ರಯತ್ನಿಸಲಿಲ್ಲ ಎಂದರು.

ಇದನ್ನೂ ಓದಿ : ಗೂಗಲ್​​ನ Med-PaLM 2: ಇದು ವೈದ್ಯಕೀಯ ಪ್ರಶ್ನೆಗಳಿಗೆ ಉತ್ತರಿಸುವ ವಿಶೇಷ AI

ABOUT THE AUTHOR

...view details