ETV Bharat / science-and-technology

ಗೂಗಲ್​​ನ Med-PaLM 2: ಇದು ವೈದ್ಯಕೀಯ ಪ್ರಶ್ನೆಗಳಿಗೆ ಉತ್ತರಿಸುವ ವಿಶೇಷ AI

author img

By

Published : Jul 9, 2023, 5:30 PM IST

ಆರೋಗ್ಯ ವಿಷಯಕ್ಕೆ ಸಂಬಂಧಿಸಿದ ವೈದ್ಯಕೀಯ ಪ್ರಶ್ನೆಗಳಿಗೆ ನಿಖರವಾಗಿ ಉತ್ತರ ನೀಡಬಲ್ಲ Med-PaLM 2 ಹೆಸರಿನ AI ಸಾಫ್ಟವೇರ್​ ಅನ್ನು ಗೂಗಲ್ ಈಗಾಗಲೇ ಪರೀಕ್ಷಿಸುತ್ತಿದೆ.

ಗೂಗಲ್​​ನ Med-PaLM 2: ಇದು ವೈದ್ಯಕೀಯ ಪ್ರಶ್ನೆಗಳಿಗೆ ಉತ್ತರಿಸುವ ವಿಶೇಷ AI
Google testing AI chatbot to expertly answer medical questions

ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ) : ವೈದ್ಯಕೀಯ ಮಾಹಿತಿ ಕುರಿತಾದ ಪ್ರಶ್ನೆಗಳಿಗೆ ನಿಖರವಾಗಿ ಉತ್ತರಿಸುವಂಥ ಕೃತಕ ಬುದ್ಧಿಮತ್ತೆ (artificial intelligence -AI) ಪ್ರೋಗ್ರಾಂ ಅನ್ನು ಗೂಗಲ್ ಪರೀಕ್ಷಿಸುತ್ತಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಗೂಗಲ್​ನ AI ಸಾಫ್ಟವೇರ್ Med-PaLM 2 (PALM 2 ನ ರೂಪಾಂತರ) ಅನ್ನು ಯುಎಸ್​ ಮೂಲದ ಲಾಭರಹಿತ ಸಂಸ್ಥೆಯಾದ ಮೇಯೊ ಕ್ಲಿನಿಕ್ ಸಂಶೋಧನಾ ಆಸ್ಪತ್ರೆ ಸೇರಿದಂತೆ ಇನ್ನೂ ಕೆಲವೆಡೆ ಏಪ್ರಿಲ್​ನಿಂದ ಪರೀಕ್ಷಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ.

PaLM 2 ಎಂಬುದು ಗೂಗಲ್‌ನ ಬಾರ್ಡ್‌ಗೆ ಆಧಾರವಾಗಿರುವ ಭಾಷಾ ಮಾದರಿಯಾಗಿದೆ. ತನ್ನ ಸುಧಾರಿತ AI ಮಾಡೆಲ್ ವೈದ್ಯಕೀಯ ಸೇವೆ ಸುಲಭವಾಗಿ ಲಭ್ಯವಿಲ್ಲದ ಸ್ಥಳಗಳಲ್ಲಿ ವಿಶೇಷವಾಗಿ ಉಪಯುಕ್ತವಾಗಿದೆ ಎಂದು ಗೂಗಲ್ ನಿರೀಕ್ಷಿಸಿದೆ. ಬಾರ್ಡ್, ಬಿಂಗ್ ಮತ್ತು ಚಾಟ್‌ಜಿಪಿಟಿಯಂತಹ ಸಾಮಾನ್ಯ ಬಳಕೆಯ ಚಾಟ್‌ಬಾಟ್‌ಗಳಿಗಿಂತ ಆರೋಗ್ಯ ಸಂಬಂಧಿತ ಸಂವಾದಗಳಲ್ಲಿ Med-PaLM 2 ಉತ್ತಮವಾಗಿ ಕೆಲಸ ಮಾಡಲಿದೆ ಎಂದು ಗೂಗಲ್ ಹೇಳಿದೆ. Med-PaLM 2 ಗೆ ವೈದ್ಯಕೀಯ ತಜ್ಞರ ಕ್ಯುರೇಟೆಡ್ ಸೆಟ್‌ನಲ್ಲಿ ತರಬೇತಿ ನೀಡಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಗೂಗಲ್​ನ ಹಿರಿಯ ಸಂಶೋಧನಾ ನಿರ್ದೇಶಕ ಗ್ರೆಗ್ ಕೊರಾಡೊ- Med-PaLM 2 ಇನ್ನೂ ಆರಂಭಿಕ ಹಂತದಲ್ಲಿದೆ. ಇದನ್ನು ನನ್ನ ಸ್ವಂತ ಕುಟುಂಬದ ಆರೋಗ್ಯ ರಕ್ಷಣೆಯ ಭಾಗವಾಗಿಸಲು ನಾನು ಬಯಸುವುದಿಲ್ಲ. ಆದರೆ Med PaLM 2 ಆರೋಗ್ಯ ರಕ್ಷಣೆಯಲ್ಲಿ ಪ್ರಯೋಜನಕಾರಿಯಾಗಲಿದೆ ಮತ್ತು ಈ ವಿಷಯದಲ್ಲಿ AIನ ಸಾಮರ್ಥ್ಯಗಳನ್ನು 10 ಪಟ್ಟು ವಿಸ್ತರಿಸುತ್ತದೆ ಎಂದು ಹೇಳಿದರು.

ಏತನ್ಮಧ್ಯೆ, ಗೂಗಲ್ ತನ್ನ ಗೌಪ್ಯತಾ ನೀತಿಯನ್ನು ಅಪ್ಡೇಟ್ ಮಾಡಿದೆ. ತನ್ನ ಕೃತಕ ಬುದ್ಧಿಮತ್ತೆ (AI) ಮಾದರಿಗಳಿಗೆ ತರಬೇತಿ ನೀಡಲು ಸಾರ್ವಜನಿಕವಾಗಿ ಲಭ್ಯವಿರುವ ಡೇಟಾವನ್ನು ಬಳಸಿಕೊಳ್ಳಬಹುದು ಎಂದು ಅದು ಹೇಳಿದೆ. ಅಲ್ಲದೆ ಗೂಗಲ್ ತನ್ನ ಕೆಲ ನೀತಿ ನಿಯಮಗಳಲ್ಲಿರುವ ಶಬ್ದಗಳನ್ನು ಕೂಡ ಬದಲಾಯಿಸಿದೆ. language models ಎಂಬ ಪದವನ್ನು AI models ಎಂದು ಬದಲಾಯಿಸಲಾಗಿದೆ.

ಗೂಗಲ್​​ನ Med-PaLM 2 ಒಂದು ದೊಡ್ಡ ಭಾಷಾ ಮಾದರಿಯಾಗಿದೆ (LLM). ಇದು ವೈದ್ಯಕೀಯ ಪಠ್ಯ ಮತ್ತು ಕೋಡ್‌ನ ಬೃಹತ್ ಡೇಟಾಸೆಟ್‌ನಲ್ಲಿ ತರಬೇತಿ ಪಡೆದಿದೆ. ಇದು ಪ್ರಶ್ನೆಗಳಿಗೆ ಉತ್ತರಿಸಬಹುದು, ಪಠ್ಯವನ್ನು ರಚಿಸಬಹುದು, ಭಾಷೆಗಳನ್ನು ಅನುವಾದಿಸಬಹುದು ಮತ್ತು ವಿವಿಧ ರೀತಿಯ ವಿಷಯವನ್ನು ಬರೆಯಬಹುದು. Med-PaLM 2 ಇನ್ನೂ ಅಭಿವೃದ್ಧಿ ಹಂತದಲ್ಲಿದ್ದರೂ, ಈಗಾಗಲೇ ಅನೇಕ ರೀತಿಯ ಕಾರ್ಯಗಳನ್ನು ನಿರ್ವಹಿಸಲು ಕಲಿತಿದೆ.

ಹೆಚ್ಚಿನ ಪ್ರಮಾಣದ ವೈದ್ಯಕೀಯ ಮಾಹಿತಿಯನ್ನು ನೋಡುವ ಮತ್ತು ಪ್ರಕ್ರಿಯೆಗೊಳಿಸುವ ಸಾಮರ್ಥ್ಯದೊಂದಿಗೆ Med-PaLM 2 ಹೆಚ್ಚು ನಿಖರವಾಗಿ ರೋಗನಿರ್ಣಯ ಮಾಡಲು ವೈದ್ಯರಿಗೆ ಸಹಾಯ ಮಾಡುತ್ತದೆ. ಇದು ರೋಗಗಳ ಆರಂಭಿಕ ಪತ್ತೆ ಮತ್ತು ಚಿಕಿತ್ಸೆಗೆ ಸಹಕಾರಿಯಾಗಲಿದೆ. ಇದು ರೋಗಿಯು ಗುಣಮುಖರಾಗುವ ಸಾಧ್ಯತೆಗಳನ್ನು ಸುಧಾರಿಸುತ್ತದೆ ಮತ್ತು ಜೀವಗಳನ್ನು ಉಳಿಸುತ್ತದೆ.

ಇದನ್ನೂ ಓದಿ : Israel Palestine Conflict: ವೆಸ್ಟ್​ ಬ್ಯಾಂಕ್​ ಮೇಲೆ ಇಸ್ರೇಲ್ ದಾಳಿ; ಹಾನಿ ಪರಿಶೀಲಿಸಿದ ರಾಜತಾಂತ್ರಿಕರ ನಿಯೋಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.