ಕರ್ನಾಟಕ

karnataka

ಇಸ್ಲಾಂಗೆ ಮತಾಂತರ ಆಗುವಂತೆ ಬಲವಂತ.. ಮುಸ್ಲಿಂ ವಕೀಲರ ವಿರುದ್ಧ ಹಿಂದೂ ಮಹಿಳೆ ದೂರು

By

Published : Nov 15, 2022, 5:35 PM IST

ಮುಸ್ಲಿಂ ವಕೀಲರೊಬ್ಬರು ನನ್ನನ್ನು ಬೆದರಿಸಿ ಇಸ್ಲಾಂಗೆ ಮತಾಂತರಗೊಂಡು ವಿವಾಹವಾಗಲು ಬಲವಂತ ಮಾಡುತ್ತಿದ್ದಾರೆ ಎಂದು ಮಧ್ಯಪ್ರದೇಶದ ಹಿಂದು ಮಹಿಳೆಯೊಬ್ಬರು ದೂರು ನೀಡಿದ್ದಾರೆ.

MP Hindu woman allegedly Forced to convert to Islam
ಇಸ್ಲಾಂಗೆ ಮತಾಂತರಕ್ಕೆ ಬಲವಂತ

ಇಂದೋರ್ (ಮಧ್ಯಪ್ರದೇಶ):ಬಲವಂತದ ಮತಾಂತರದ ವಿರುದ್ಧ ಕ್ರಮಕ್ಕೆ ಸುಪ್ರೀಂಕೋರ್ಟ್​ ಸೂಚಿಸಿದ ಬೆನ್ನಲ್ಲೇ, ಮುಸ್ಲಿಂ ವಕೀಲರೊಬ್ಬರು ತನ್ನನ್ನು ಮತಾಂತರಗೊಂಡು ವಿವಾಹವಾಗಲು ಬಲವಂತ ಮಾಡುತ್ತಿದ್ದಾರೆ ಎಂದು ಹಿಂದು ಮಹಿಳೆಯೊಬ್ಬರು ದೂರಿದ್ದಾರೆ. ಈ ಬಗ್ಗೆ ಪೊಲೀಸರು ಸೂಕ್ತ ಕಲಂನಡಿ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ. ಇನ್ನೊಂದೆಡೆ, ಈ ಆರೋಪಗಳನ್ನು ಆಪಾದಿತ ವಕೀಲ ತಳ್ಳಿಹಾಕಿದ್ದಾರೆ.

ಮಧ್ಯಪ್ರದೇಶದ ಗಾಂಧಿನಗರ ನಿವಾಸಿಯಾದ ವಿವಾಹಿತ ಹಿಂದು ಮಹಿಳೆ, ಮುಸ್ಲಿಂ ವಕೀಲ ಅಫ್ತಾಬ್​ ಪಠಾಣ್​ ಎಂಬುವರ ವಿರುದ್ಧ ಕೇಸ್​ ನೀಡಿದ್ದಾರೆ. ವಕೀಲರು ತನ್ನನ್ನು ಇಸ್ಲಾಂಗೆ ಮತಾಂತರಗೊಳ್ಳುವಂತೆ ಬೆದರಿಸಿ ಹಾಕಿದ್ದಾರೆ. ಮದುವೆಯಾಗುವಂತೆಯೂ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕಳೆದ 2 ವರ್ಷಗಳಿಂದ ಅಫ್ತಾಬ್​ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ಜಾರಿ ಮಾಡದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಆತಮ್ಹತ್ಯೆ ಮಾಡಿಕೊಳ್ಳುವೆ ಎಂದು ಮಹಿಳೆ ಎಚ್ಚರಿಕೆ ನೀಡಿದ್ದಾರೆ.

ಮಾನ ಹಾನಿಗಾಗಿ ಕೇಸ್​:ಇತ್ತ ವಕೀಲ ಅಫ್ತಾಬ್​ ಆರೋಪಗಳನ್ನು ನಿರಾಕರಿಸಿದ್ದು, ಮಹಿಳೆಯ ಮೇಲೆ ಪ್ರಾಣಿ ಕಳ್ಳಸಾಗಣೆ ದೂರು ನೀಡಿದ್ದೆ. ಇದನ್ನೇ ನೆಪವಾಗಿಟ್ಟುಕೊಂಡ ನನ್ನ ಮೇಲೆ ಇಲ್ಲದ ಆರೋಪ ಮಾಡಿದ್ದಾರೆ. ನನ್ನ ಮಾನ ಹಾನಿ ಮಾಡಲು ಮಹಿಳೆ ಮತಾಂತರದ ದೂರು ನೀಡಿದ್ದಾರೆ. ಇವರ ವಿರುದ್ಧ ನಾನೇ ಹಲವೆಡೆ ದೂರು ದಾಖಲಿಸಿದ್ದೇನೆ ಎಂದು ಹೇಳಿದ್ದಾನೆ.

ಮಹಿಳೆ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಎರಡೂ ಕಡೆಯವರು ಪರಸ್ಪರ ದ್ವೇಷದ ಪ್ರಕರಣ ದಾಖಲಿಸಿದ್ದಾರೆ. ಬಳಿಕ ಇಬ್ಬರೂ ಯಾವುದೇ ಹೆಚ್ಚಿನ ತನಿಖೆಯನ್ನು ಬಯಸುವುದಿಲ್ಲ ಎಂದು ಒಪ್ಪಂದ ಮಾಡಿಕೊಂಡಿದ್ದಾರೆ. ಆದರೂ ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಓದಿ:ಕಬ್ಬು ತುಂಬಿದ ಟ್ರ್ಯಾಕ್ಟರ್​ ಹರಿದು ಗರ್ಭಿಣಿ ಸ್ಥಳದಲ್ಲೇ ಸಾವು: ತಾಯಿ ಹೊಟ್ಟೆಯಲ್ಲೇ ಪ್ರಾಣ ಕಳೆದುಕೊಂಡ ಶಿಶು

ABOUT THE AUTHOR

...view details