ಕರ್ನಾಟಕ

karnataka

ಕೋಯಿಕ್ಕೋಡ್​ನಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ.. ಮೂವರು ಪೊಲೀಸರ ವಶಕ್ಕೆ

By

Published : Oct 20, 2021, 6:30 PM IST

ಅಕ್ಟೋಬರ್ 3ರಂದು ಈ ಘಟನೆ ನಡೆದಿದೆ. ಯುಪಿ ಶಾಲಾ ವಿದ್ಯಾರ್ಥಿನಿಯಾಗಿರುವ ಈ ಹುಡುಗಿ ತನ್ನ ಪೋಷಕರಿಗೆ ಘಟನೆಯ ಬಗ್ಗೆ ಹೇಳಿದ್ದಾಳೆ. ನಂತರ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ..

Minor girl gang-raped at Kozhikode
ಕೋಯಿಕ್ಕೋಡ್​ನಲ್ಲಿ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ

ಕೋಯಿಕ್ಕೋಡ್ (ಕೇರಳ) :ಅಪ್ರಾಪ್ತೆಯ ಮೇಲೆ ನಾಲ್ವರು ಪುರುಷರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಕೋಯಿಕ್ಕೋಡ್ ಸಮೀಪದ ಕಾಯಕ್ಕೋಡಿಯಲ್ಲಿ ಈ ಘಟನೆ ನಡೆದಿದೆ.

ಕಾಯಕ್ಕೋಡಿಯ ಇಬ್ಬರು ಸ್ಥಳೀಯರನ್ನು ಮತ್ತು ಕುಟ್ಟಿಯಾಡಿ ಮೂಲದ ಓರ್ವ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆಯ ನಂತರ ಅವರನ್ನು ಬಂಧಿಸಲಾಗುವುದು ಎನ್ನಲಾಗಿದೆ.

ಅಪ್ರಾಪ್ತೆ ನೀಡಿದ ಹೇಳಿಕೆಯ ಪ್ರಕಾರ, ಯುವಕನೊಬ್ಬ ಆಕೆಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿ ಜಾನಕಿಕಾಡು ಪ್ರದೇಶಕ್ಕೆ ಕರೆದೊಯ್ದು, ಇತರ ಮೂವರ ಜತೆ ಸೇರಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ಟೋಬರ್ 3ರಂದು ಈ ಘಟನೆ ನಡೆದಿದೆ. ಯುಪಿ ಶಾಲಾ ವಿದ್ಯಾರ್ಥಿನಿಯಾಗಿರುವ ಈ ಹುಡುಗಿ ತನ್ನ ಪೋಷಕರಿಗೆ ಘಟನೆಯ ಬಗ್ಗೆ ಹೇಳಿದ್ದಾಳೆ. ನಂತರ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.

ABOUT THE AUTHOR

...view details