ಕರ್ನಾಟಕ

karnataka

Maharashtra Political Crisis: ಮುಂಬೈ, ಥಾಣೆಯಲ್ಲಿ ನಿಷೇಧಾಜ್ಞೆ ಜಾರಿ

By

Published : Jun 25, 2022, 5:02 PM IST

ಮಹಾರಾಷ್ಟ್ರದಲ್ಲಿ ಉಂಟಾದ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ಹಿಂಸಾಚಾರಕ್ಕೆ ತಿರುಗದಂತೆ ತಡೆಯಲು ಜುಲೈ 10ರವರೆಗೆ ಮುಂಬೈ ನಗರ ಮತ್ತು ಥಾಣೆಯಲ್ಲಿ 144 ಸೆಕ್ಷನ್ ಜಾರಿ ಮಾಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಮುಂಬೈ, ಥಾಣೆಯಲ್ಲಿ ನಿಷೇಧಾಜ್ಞೆ ಜಾರಿ
ಮುಂಬೈ, ಥಾಣೆಯಲ್ಲಿ ನಿಷೇಧಾಜ್ಞೆ ಜಾರಿ

ಮುಂಬೈ:ಶಿವಸೇನೆ ನಾಯಕತ್ವದ ವಿರುದ್ಧವೇ ಬಂಡಾಯ ಎದ್ದಿರುವ ರೆಬೆಲ್​ ನಾಯಕ ಏಕನಾಥ್​ ಶಿಂದೆ ಬಣದ ವಿರುದ್ಧ ಶಿವಸೈನಿಕರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಂದೆ ಮತ್ತು ಸಿಎಂ ಠಾಕ್ರೆ ನಡುವೆ ಜಟಾಪಟಿ ಸಂಘರ್ಷಕ್ಕೆ ಕಾರಣವಾಗಿದೆ. ಶಿವಸೈನಿಕರು ಶಾಸಕರ ಕಚೇರಿಗಳಿಗೆ ತೆರಳಿ ದಾಂಧಲೆ ಸೃಷ್ಟಿ ಮಾಡುತ್ತಿದ್ದಾರೆ. ಹೀಗಾಗಿ ಮುಂಬೈ ಪೊಲೀಸರು ಥಾಣೆ ಮತ್ತು ಮುಂಬೈನಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.

ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಂಘರ್ಷ ಮತ್ತು ಗಲಭೆ ಉಂಟಾಗುತ್ತಿರುವುದರಿಂದ ಜುಲೈ 10 ರವರೆಗೆ ಮುಂಬೈ ನಗರ ಮತ್ತು ಥಾಣೆಯಲ್ಲಿ ಕರ್ಫ್ಯೂ ಹೇರಲಾಗಿದೆ. ಹಾಗಾಗಿ ಜನರು ಒಂದೆಡೆ ಸೇರಬಾರದು ಎಂದು ಪೊಲೀಸರು ಸೂಚಿಸಿದ್ದಾರೆ.

ಶುಕ್ರವಾರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರನ್ನು ಭೇಟಿ ಮಾಡಿದ್ದ ಪೊಲೀಸ್ ಆಯುಕ್ತರು, ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಅಲ್ಲದೇ ಶಾಸಕರು, ಸಂಸದರು ಹಾಗೂ ವಿವಿಧ ನಾಯಕರಿಗೆ ಭದ್ರತೆಯನ್ನೂ ಹೆಚ್ಚಿಸಲಾಗಿದೆ. ಹಿಂಸಾಚಾರ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏಕನಾಥ್ ಶಿಂದೆ ಬಂಡಾಯದ ನಂತರ ಮಹಾರಾಷ್ಟ್ರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ಉಂಟಾಗಿವೆ. ಶಿವಸೈನಿಕರು ಬಂಡಾಯ ಶಾಸಕರ ಕಚೇರಿಗಳಿಗೆ ನುಗ್ಗಿ ದಾಂಧಲೆ ಮಾಡುತ್ತಿದ್ದಾರೆ.

ಓದಿ:Maharashtra political crisis.. 16 ಜನ ಬಂಡಾಯ ಶಾಸಕರಿಗೆ ಅನರ್ಹತೆಯ ನೋಟಿಸ್

ABOUT THE AUTHOR

...view details