ETV Bharat / bharat

Maharashtra political crisis.. 16 ಜನ ಬಂಡಾಯ ಶಾಸಕರಿಗೆ ಅನರ್ಹತೆಯ ನೋಟಿಸ್

author img

By

Published : Jun 25, 2022, 3:58 PM IST

Updated : Jun 25, 2022, 4:04 PM IST

ಎಲ್ಲ 16 ಶಾಸಕರು ಜೂನ್ 27ರ ಸೋಮವಾರದೊಳಗೆ ನೋಟಿಸ್​ಗೆ ತಮ್ಮ ಲಿಖಿತ ಉತ್ತರಗಳನ್ನು ಸಲ್ಲಿಸಬೇಕೆಂದು ಉಪ ಸ್ಪೀಕರ್ ಸೂಚಿಸಿದ್ದಾರೆ.

Deputy Speaker of Maharashtra Assembly issues disqualification notice to 16 rebel Shiv Sena MLAs
ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: 16 ಜನ ಬಂಡಾಯ ಶಾಸಕರಿಗೆ ಅನರ್ಹತೆ ನೋಟಿಸ್ ಜಾರಿ

ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಮತ್ತಷ್ಟು ರೋಚಕ ಘಟ್ಟಕ್ಕೆ ತಿರುಗಿದೆ. ಶಿವಸೇನೆಯ 16 ಜನ ಬಂಡಾಯ ಶಾಸಕರಿಗೆ ವಿಧಾನಸಭೆಯ ಉಪ ಸ್ಪೀಕರ್ ಅನರ್ಹತೆಯ ನೋಟಿಸ್ ಜಾರಿ ಮಾಡಿದ್ದಾರೆ.

  • #MaharashtraPolitcalCrisis | Deputy Speaker of Maharashtra Assembly issues disqualification notice to 16 rebel Shiv Sena MLAs of Eknath Shinde camp currently staying in Guwahati, Assam

    — ANI (@ANI) June 25, 2022 " class="align-text-top noRightClick twitterSection" data=" ">

ಶಿವಸೇನೆ ಮುಖ್ಯಸ್ಥ, ಸಿಎಂ ಉದ್ಧವ್​ ಠಾಕ್ರೆ ವಿರುದ್ಧ ಬಂಡಾಯ ಸಾರಿರುವ ಏಕನಾಥ ಶಿಂದೆ ನೇತೃತ್ವದ ಸುಮಾರು 38 ಶಾಸಕರು ಬಿಜೆಪಿ ಆಡಳಿತದ ಅಸ್ಸೋಂನ ಗುವಾಹಟಿಯಲ್ಲಿ ಬೀಡು ಬಿಟ್ಟಿದ್ದಾರೆ. ಇದೀಗ ಈ ಬಣದಲ್ಲಿರುವ 16 ಶಾಸಕರಿಗೆ ಮಹಾರಾಷ್ಟ್ರ ಉಪ ಸ್ಪೀಕರ್ ಅನರ್ಹತೆಯ ನೋಟಿಸ್ ಜಾರಿಗೊಳಿಸಿದ್ದಾರೆ. ಅಲ್ಲದೇ, ಎಲ್ಲ 16 ಶಾಸಕರು ಜೂನ್ 27ರ ಸೋಮವಾರದೊಳಗೆ ನೋಟಿಸ್​ಗೆ ತಮ್ಮ ಲಿಖಿತ ಉತ್ತರಗಳನ್ನು ಸಲ್ಲಿಸಬೇಕೆಂದು ಸೂಚಿಸಿದ್ದಾರೆ.

ಏಕನಾಥ ಬಣಕ್ಕೆ ಪ್ರತ್ಯೇಕ ಹೆಸರು: ಜೊತೆಗೆ ಶಿವಸೇನೆಯ ಬಣಗಳ ಕಿತ್ತಾಟ ಕೂಡ ತಾರಕಕ್ಕೇರಿದೆ. ಇದು ಪಕ್ಷವೇ ವಿಭಜನೆಯಾಗುವ ಹಂತಕ್ಕೆ ಬಂದು ತಲುಪಿದೆ. ಗುವಾಹಟಿಯಲ್ಲಿ ಬೀಡು ಬಿಟ್ಟಿರುವ ಬಂಡಾಯ ನಾಯಕ ಏಕನಾಥ ಶಿಂದೆ ನೇತೃತ್ವದ ಗುಂಪು ತಮ್ಮದೇ ಪ್ರತ್ಯೇಕ ಬಣವನ್ನು ಹುಟ್ಟು ಹಾಕಿದೆ. ಇದಕ್ಕೆ 'ಶಿವಸೇನೆ ಬಾಳಾಸಾಹೇಬ್​' ಎಂದು ಹೆಸರಿಟ್ಟಿದ್ದಾರೆ. ಈ ಬಗ್ಗೆ ಮಾಜಿ ಸಚಿವ, ರೆಬೆಲ್ ಶಾಸಕ ದೀಪಕ್​ ಕೇಸರಕರ್​​ ಮಾಹಿತಿ ನೀಡಿದ್ದಾರೆ.

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು

ಬಾಳಾಸಾಹೇಬ್ ಠಾಕ್ರೆ ಹೆಸರು ಬಳಸುವಂತಿಲ್ಲ: ಇತ್ತ, ಸಿಎಂ ಉದ್ಧವ್​ ಠಾಕ್ರೆ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸಭೆ ನಡೆಸಿದ್ದಾರೆ. ಇದೇ ವೇಳೆ ಬೇರೆ ಯಾರೂ ಕೂಡ ಬಾಳಾಸಾಹೇಬ್ ಠಾಕ್ರೆ ಅವರ ಹೆಸರನ್ನು ಬಳಸುವಂತಿಲ್ಲ ಎಂದು ಎಚ್ಚರಿಕೆ ರವಾನಿಸಿದ್ದಾರೆ.

ಬಂಡಾಯ ಶಾಸಕರು ತಮಗೆ ಏನು ಮಾಡಬೇಕು ಅನ್ಸತ್ತೋ ಅದನ್ನು ಮಾಡಲಿ ಎಂದು ಈಗಾಗಲೇ ನಾನು ಹೇಳಿದ್ದೇವೆ. ಅವರ ವಿಚಾರದಲ್ಲಿ ನಾನು ಮಧ್ಯಪ್ರವೇಶಿಸುವುದಿಲ್ಲ. ಅವರು ತಮ್ಮದೇ ಸ್ವಂತ ನಿರ್ಧಾರ ತೆಗೆದುಕೊಳ್ಳಲಿ. ಆದರೆ, ಯಾರೊಬ್ಬರು ಕೂಡ ಬಾಳಾಸಾಹೇಬ್ ಠಾಕ್ರೆ ಹೆಸರನ್ನು ಬಳಕೆ ಮಾಡಬಾರದು ಎಂದು ಉದ್ಧವ್​​ ಹೇಳಿದ್ದಾರೆ.

ಇದನ್ನೂ ಓದಿ: ಶಿಂದೆ ಬಣದ 'ಆ' ಒಂದು ತಪ್ಪಿನಿಂದ ಬಚಾವಾಗುತ್ತಾ ಉದ್ಧವ್ ಸರ್ಕಾರ..?

Last Updated :Jun 25, 2022, 4:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.