ಕರ್ನಾಟಕ

karnataka

ಸುಸ್ಥಿರ ಹವಾಮಾನ ಅಭಿವೃದ್ಧಿ.. COP 26 ಶೃಂಗಸಭೆಯಲ್ಲಿ ಮಹಾರಾಷ್ಟ್ರಕ್ಕೆ ಪ್ರಾದೇಶಿಕ ನಾಯಕತ್ವ ಪ್ರಶಸ್ತಿ

By

Published : Nov 9, 2021, 8:38 AM IST

COP 26 ಶೃಂಗಸಭೆಯಲ್ಲಿ ಹವಾಮಾನ ಪ್ರಕ್ರಿಯೆಯ ಪ್ರಯತ್ನಗಳಿಗಾಗಿ ಮಹಾರಾಷ್ಟ್ರವು ಸ್ಫೂರ್ತಿದಾಯಕ ಪ್ರಾದೇಶಿಕ ನಾಯಕತ್ವ ಪ್ರಶಸ್ತಿಯನ್ನು ಸ್ವೀಕರಿಸಿದೆ.

Maharashtra bags climate action award in UK for regional leadership
COP 26 ಶೃಂಗಸಭೆಯಲ್ಲಿ ಮಹಾರಾಷ್ಟ್ರಕ್ಕರ ಸ್ಪೂರ್ತಿದಾಯಕ ಪ್ರಾದೇಶಿಕ ನಾಯಕತ್ವ ಪ್ರಶಸ್ತಿ ಪ್ರದಾನ

ಲಂಡನ್:ಸ್ಕಾಟ್ಲೆಂಡ್‌ನಲ್ಲಿ ನಡೆದ COP 26 ಶೃಂಗಸಭೆಯಲ್ಲಿ ಹವಾಮಾನ ಕ್ರಿಯೆಯ ಪ್ರಯತ್ನಗಳಿಗಾಗಿ ಮಹಾರಾಷ್ಟ್ರವು ಸ್ಫೂರ್ತಿದಾಯಕ ಪ್ರಾದೇಶಿಕ ನಾಯಕತ್ವ (Inspiring Regional Leadership award) ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಸಚಿವ ಆದಿತ್ಯ ಠಾಕ್ರೆ ಶನಿವಾರ ಸಂಜೆ ಸ್ಕಾಟ್ಲೆಂಡ್‌ನ ಸ್ಟಿರ್ಲಿಂಗ್ ಕ್ಯಾಸಲ್‌ನಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಆ ವೇಳೆ ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡುವ ಮಹಾರಾಷ್ಟ್ರದ ನೀತಿಗಳು ಮತ್ತು ಅಭಿಯಾನಗಳನ್ನು ಎತ್ತಿ ಹಿಡಿದರು. ಜಾಗತಿಕ ಸಮಸ್ಯೆಗಳ ಮೇಲೆ ಕೆಲಸ ಮಾಡಲು ನಾವು ಸಾಮೂಹಿಕ ಪ್ರಯತ್ನ ಮತ್ತು ಅರ್ಥಪೂರ್ಣ ಕ್ರಮಗಳನ್ನು ಕೈಗೊಳ್ಳಲು ಇದು ಉತ್ತಮ ಸಮಯ ಎಂದು ಬಲವಾಗಿ ನಂಬುತ್ತೇನೆ ಎಂದು ತಿಳಿಸಿದರು. ಮತ್ತು ರಾಜ್ಯಕ್ಕೆ ಸಿಕ್ಕ ಪ್ರಶಸ್ತಿ ಸಲುವಾಗಿ ಹರ್ಷ ವ್ಯಕ್ತಪಡಿಸಿದರು.

COP26 (The climate summit in Glasgow) ಹವಾಮಾನ ಶೃಂಗಸಭೆಯೊಂದಿಗೆ ಏಕಕಾಲದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಕೂಡ ಆಯೋಜಿಸಲಾಗಿತ್ತು. ಈ ವೇಳೆ ಮಹಾರಾಷ್ಟ್ರ ರಾಜ್ಯಕ್ಕೆ ಪ್ರಶಸ್ತಿ ಲಭಿಸಿದೆ.

720 ಕಿ.ಮೀ ದುರ್ಬಲ ಕರಾವಳಿ ಪ್ರದೇಶವನ್ನು ಹೊಂದಿರುವ ಹಾಗೂ ಭಾರತದ ಅತ್ಯಂತ ಹೆಚ್ಚು ಕೈಗಾರಿಕರಣಗೊಂಡ ರಾಜ್ಯಗಳಲ್ಲಿ ಒಂದಾಗಿದೆ ಎಂದು ಮಹಾರಾಷ್ಟ್ರ ವಿವರಿಸಿದೆ. ಅಲ್ಪಾವಧಿಯಲ್ಲಿಯೇ ನವೀನ ಯೋಜನೆಗಳು, ನೀತಿಗಳು ಮತ್ತು ಪ್ರಚಾರಗಳ ಮೇಲೆ ಹವಾಮಾನ ಸುಧಾರಣಾ ಕ್ರಮ ಕೈಗೊಂಡಿದೆ.

ಸುಸ್ಥಿರ ಹವಾಮಾನ ಅಭಿವೃದ್ಧಿಯಲ್ಲಿ ರಾಜ್ಯ ಸರ್ಕಾರವು ಯಶಸ್ವಿಯಾಗಿದೆ. ಜೊತೆಗೆ ಹವಾಮಾನ ಸಂಬಂಧಿತ ವಿಪತ್ತುಗಳಿಗೆ USD 2 ಬಿಲಿಯನ್​ ವೆಚ್ಚ ಭರಿಸಿದೆ.

ಇದನ್ನೂ ಓದಿ:Cruise Drugs Case​: ಪಾರ್ಟಿ ನಡೆದ ಸ್ಥಳಕ್ಕೆ NCB SIT ಭೇಟಿ, 7 ಮಂದಿಗೆ ಸಮನ್ಸ್​

ವಿಶ್ವದ ಏಕೈಕ ಸಮಗ್ರ ರಾಜ್ಯ ವ್ಯಾಪಿ ಕಾರ್ಯಕ್ರಮವಾದ 'ಮಝಿ ವಸುಂಧರಾ' ವನ್ನು ಯಶಸ್ವಿಯಾಗಿ ಸಾಧಿಸಲಾಗಿದೆ. ಮಹಾರಾಷ್ಟ್ರದ ಸಂಪೂರ್ಣ ಜನಸಂಖ್ಯೆಯನ್ನು ಒಳಗೊಳ್ಳುವ 'ಮಝಿ ವಸುಂಧರಾ' ಮಿಷನ್ ಅನ್ನು ಎಲ್ಲ ಸ್ಥಳೀಯ ಸಂಸ್ಥೆಗಳತ್ತ ಕೊಂಡೊಯ್ಯಲಾಗುತ್ತಿದೆ ಎಂದು ರಾಜ್ಯದ ಪರಿಸರ ಸಚಿವಾಲಯದ ಹೇಳಿಕೆ ತಿಳಿಸಿದೆ.

ಹೀಗೆ ಹವಾಮಾನಕ್ಕೆ ಸಂಬಂಧಿಸಿದ ಕಾರ್ಯಗಳಿಂದಾಗಿ ಮಹಾರಾಷ್ಟ್ರ ಪ್ರಶಸ್ತಿ ಪಡೆದಿದೆ.

ABOUT THE AUTHOR

...view details