ಕರ್ನಾಟಕ

karnataka

ಎಂಸಿಡಿ ಚುನಾವಣಾ ಫಲಿತಾಂಶ: ಆಪ್ ನಾಯಕರೊಂದಿಗೆ ಸಿಎಂ ಕೇಜ್ರಿವಾಲ್ ಸಭೆ

By

Published : Dec 7, 2022, 12:52 PM IST

ಎಂಸಿಡಿ ಚುನಾವಣಾ ಫಲಿತಾಂಶ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ನಿವಾಸದಲ್ಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮತ್ತು ಇತರ ಹಿರಿಯ ಎಎಪಿ ನಾಯಕರೊಂದಿಗೆ ಸಭೆ ನಡೆಸಿದರು.

Kejriwal
ಅರವಿಂದ್ ಕೇಜ್ರಿವಾಲ್

ನವದೆಹಲಿ: ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ)ಗೆ ಇತ್ತೀಚೆಗೆ ನಡೆದಿದ್ದ ಚುನಾವಣೆಯ ಮತ ಎಣಿಕೆ ಇಂದು ಜರುಗುತ್ತಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ನಿವಾಸದಲ್ಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮತ್ತು ಇತರ ಹಿರಿಯ ಎಎಪಿ ನಾಯಕರೊಂದಿಗೆ ಸಭೆ ನಡೆಸಿದರು. ಪಕ್ಷದ ಹಿರಿಯ ನಾಯಕ ರಾಘವ್ ಚಡ್ಡಾ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕೂಡ ಸಭೆಯಲ್ಲಿ ಉಪಸ್ಥಿತರಿದ್ದಾರೆ.

ಪಕ್ಷದ ಪ್ರಧಾನ ಕಚೇರಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ವಕ್ತಾರ ಸಂಜೀವ್ ಝಾ, ಮೇಯರ್ ಎಎಪಿಯವರೇ ಆಗಲಿದ್ದಾರೆ. "ಬಿಜೆಪಿ ದೆಹಲಿಯನ್ನು ಕಸದಲ್ಲಿ ಮುಚ್ಚಿತ್ತು, ಅದನ್ನು ಸ್ವಚ್ಛಗೊಳಿಸಲಾಗುವುದು. ದೆಹಲಿಯ ಜನರು ಎಂಸಿಡಿಯಲ್ಲಿ ಎಎಪಿಯನ್ನು ತರಲು ನಿರ್ಧರಿಸಿದ್ದಾರೆ. ಇದರಿಂದ ದೆಹಲಿ ಸ್ವಚ್ಛ ಮತ್ತು ಸುಂದರವಾಗಿರುತ್ತದೆ" ಎಂದು ಅವರು ಹೇಳಿದರು.

ರಾಜ್ಯ ಚುನಾವಣಾ ಆಯೋಗ (ಎಸ್‌ಇಸಿ) ಪ್ರಕಟಿಸಿದ ಫಲಿತಾಂಶಗಳ ಪ್ರಕಾರ ಎಎಪಿ 106 ಸ್ಥಾನಗಳಲ್ಲಿ ಗೆಲುವು ದಾಖಲಿಸಿ 26 ಸ್ಥಾನಗಳಲ್ಲಿ ಮುನ್ನಡೆ ಕಾಪಾಡಿಕೊಂಡಿದೆ. ಇನ್ನು, ಬಿಜೆಪಿ 84 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಇನ್ನೂ 20 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಒಟ್ಟು 250 ವಾರ್ಡ್‌ಗಳ ಪೈಕಿ ಇದುವರೆಗೆ ಶೇ 82ರಷ್ಟು ಮತ ಎಣಿಕೆಯಾಗಿದೆ.

ಇದನ್ನೂ ಓದಿ:ದೆಹಲಿ ಪಾಲಿಕೆ ಮತ ಎಣಿಕೆ ಲೈವ್​ ಅಪ್​ಡೇಟ್​: ಆಪ್​ 89, ಬಿಜೆಪಿ 69 ಸ್ಥಾನಗಳಲ್ಲಿ ಜಯ

ABOUT THE AUTHOR

...view details