ಕರ್ನಾಟಕ

karnataka

ಪ್ರಧಾನಿ ಮೋದಿ ಜಾತಿ ದಾಖಲೆ ಸುಳ್ಳು, ಬಿಜೆಪಿ ಗಲೀಜು ಪಕ್ಷ.. ಜೆಡಿಯು ಅಧ್ಯಕ್ಷ ಟೀಕೆ

By

Published : Oct 15, 2022, 1:39 PM IST

ಪ್ರಧಾನಿ ನರೇಂದ್ರ ಮೋದಿ ಅವರ ಜಾತಿ ಪ್ರಮಾಣಪತ್ರದ ಬಗ್ಗೆ ಜೆಡಿಯು ನಾಯಕರೊಬ್ಬರು ಚಕಾರ ಎತ್ತಿದ್ದು, ಮೋದಿ ಅವರು ಮೂಲತಃ ಒಬಿಸಿಯಲ್ಲ ಎಂದು ಆರೋಪಿಸಿದ್ದಾರೆ.

jdu-chief-lalan-singh-on-pm-modis-caste-status
ಪ್ರಧಾನಿ ಮೋದಿ ಜಾತಿ ದಾಖಲೆ ಸುಳ್ಳು

ಪಾಟ್ನಾ (ಬಿಹಾರ):ಪ್ರಧಾನಿ ನರೇಂದ್ರ ಮೋದಿ ಅವರ ಜಾತಿ ಪ್ರಮಾಣಪತ್ರದ ಬಗ್ಗೆ ಜೆಡಿಯು ನಾಯಕರೊಬ್ಬರು ಚಕಾರ ಎತ್ತಿದ್ದು, ಮೋದಿ ಅವರು ಮೂಲತಃ ಒಬಿಸಿಯಲ್ಲ. ಗುಜರಾತ್​ ಸಿಎಂ ಆಗಿದ್ದಾಗ ಅವರು ಸುಳ್ಳು ದಾಖಲೆ ನೀಡಿದ್ದಾರೆ ಎಂದು ಟೀಕಿಸಿದ್ದಾರೆ. ಅಲ್ಲದೇ, "ಬಿಜೆಪಿ ಪಕ್ಷ ಒಂದು ಕೊಳಚೆ ಜಾಗಕ್ಕೆ ಸಮ" ಎಂದೂ ಲೇವಡಿ ಮಾಡಿದ್ದಾರೆ.

ಪ್ರಧಾನಿ ಮೋದಿ ಅವರು ತಮ್ಮ ಜಾತಿಯನ್ನು ಒಬಿಸಿಗೆ ಸೇರಿಸಿಕೊಂಡಿದ್ದಾರೆ. ಅವರು ತಮ್ಮ ಜಾತಿಯ ಬಗ್ಗೆ ಸುಳ್ಳು ಹೇಳಿದ್ದಾರೆ ಎಂದು ಜೆಡಿಯು ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ ಅಲಿಯಾಸ್ ಲಲನ್ ಸಿಂಗ್ ಆರೋಪಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 2014 ರಲ್ಲಿ ನರೇಂದ್ರ ಮೋದಿ ಅವರು ಅತ್ಯಂತ ಹಿಂದುಳಿದ ವರ್ಗ (ಇಬಿಸಿ) ಎಂದು ದೇಶಾದ್ಯಂತ ತಿರುಗಾಡಿದರು. ಗುಜರಾತ್‌ನಲ್ಲಿ ಇಬಿಸಿಯೇ ಇಲ್ಲ. ಒಬಿಸಿ ಮಾತ್ರ ಇರೋದು. ಗುಜರಾತ್ ಮುಖ್ಯಮಂತ್ರಿ ಮತ್ತು ಸಚಿವರಾಗಿದ್ದಾಗ ಅವರು ತಮ್ಮ ಜಾತಿಯ ಬಗ್ಗೆ ಸುಳ್ಳು ದಾಖಲೆ ನೀಡಿದ್ದಾರೆ ಎಂದರು.

ಬಿಜೆಪಿ ಗಲೀಜು ಪಕ್ಷ:ಇನ್ನು ಬಿಜೆಪಿ ಪಕ್ಷದ ವಿರುದ್ಧವೂ ಟೀಕಿಸಿರುವ ಲಲನ್​ ಸಿಂಗ್​, ಅದೊಂದು "ಗಲೀಜು ಸ್ಥಳ". ಯಾರೆಲ್ಲಾ ಬಿಜೆಪಿ ತೊರೆದು ಜೆಡಿಯು ಸೇರಿದ್ದೀರೋ ಅವರು ಉತ್ತಮ ಕೆಲಸ ಮಾಡಿದ್ದಾರೆ ಎಂದು ಹೇಳಿದರು. ನಿರುದ್ಯೋಗ ಮತ್ತು ಹಣದುಬ್ಬರದ ವಿಷಯದ ಬಗ್ಗೆ ಜೆಡಿಯು ನಾಯಕ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಓದಿ:ಹ್ಯಾರಿ ಪಾಟರ್​ನ ಹ್ಯಾಗ್ರಿಡ್​ ರಾಬಿ ಕಾಲ್ಟ್ರೇನ್​ ನಿಧನ

ABOUT THE AUTHOR

...view details