ETV Bharat / entertainment

ಹ್ಯಾರಿ ಪಾಟರ್​ನ ಹ್ಯಾಗ್ರಿಡ್​ ರಾಬಿ ಕಾಲ್ಟ್ರೇನ್​ ನಿಧನ

author img

By

Published : Oct 15, 2022, 12:28 PM IST

1990ರಲ್ಲಿ ಮೊದಲ ಬಾರಿಗೆ ಕಾಲ್ಟ್ರೇನ್​ ಕ್ರ್ಯಾಕರ್​ ಸಿರೀಸ್​ನಲ್ಲಿ ಡಿಟೆಕ್ಟಿವ್​ ಪಾತ್ರ ಮಾಡಿ ಮೆಚ್ಚುಗೆ ಗಳಿಸಿದ್ದರು. ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲದೇ ಟಿವಿ ಹಾಗೂ ವೆಬ್​ ಸಿರೀಸ್​ಗಳಲ್ಲೂ ರಾಬಿ ನಟಿಸಿದ್ದರು.

harry potters hagrid robbie coltrane passes away
ಹ್ಯಾರಿ ಪಾಟರ್​ನ ಹ್ಯಾಗ್ರಿಡ್​ ರಾಬಿ ಕಾಲ್ಟ್ರೇನ್​ ನಿಧನ

ಲಂಡನ್ (ಯುನೈಟೆಡ್ ಕಿಂಗ್‌ಡಮ್): 'ಹ್ಯಾರಿ ಪಾಟರ್' ಚಲನಚಿತ್ರ ಸಿರೀಸ್​ನ ಹಾಫ್ ಜಿಯೆಂಟ್​ ರೂಬಿಯಸ್ ಹ್ಯಾಗ್ರಿಡ್ ಪಾತ್ರ ಹಾಗೂ ಹಲವಾರು ಹಾಲಿವುಡ್​ ಸಿನಿಮಾಗಳ ಮೂಲಕ ಸಾಕಷ್ಟು ಹೆಸರು ಮಾಡಿದ್ದ ಸ್ಕಾಟಿಷ್ ನಟ, ಹಾಸ್ಯನಟ ಮತ್ತು ಬರಹಗಾರ ರಾಬಿ ಕಾಲ್ಟ್ರೇನ್ ಅವರ ತಮ್ಮ 72ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ ಎಂದು ಅವರ ಏಜೆಂಟ್​ ತಿಳಿಸಿದ್ದಾರೆ.

ಕಾಲ್ಟ್ರೇನ್ ಅವರು 'ಹ್ಯಾರಿ ಪಾಟರ್' ನ ಪ್ರತಿ ಸರಣಿಯಲ್ಲೂ ಕಾಣಿಸಿಕೊಂಡಿದ್ದರು. 2001 ರಲ್ಲಿ 'ಫಿಲಾಸಫರ್ಸ್ ಸ್ಟೋನ್' ನಿಂದ 2011 ರಲ್ಲಿ 'ಡೆತ್ಲಿ ಹ್ಯಾಲೋಸ್ ಭಾಗ 2' ವರೆಗೆ ಜೆ.ಕೆ. ರೌಲಿಂಗ್ ಅವರ ಪುಸ್ತಕ ಸರಣಿಗೆ ಜೀವ ತುಂಬಿದ್ದರು. 1990ರಲ್ಲಿ ಮೊದಲ ಬಾರಿಗೆ ಕಾಲ್ಟ್ರೇನ್​ ಕ್ರ್ಯಾಕರ್​ ಸಿರೀಸ್​ನಲ್ಲಿ ಡಿಟೆಕ್ಟಿವ್​ ಪಾತ್ರ ಮಾಡಿ ಮೆಚ್ಚುಗೆ ಗಳಿಸಿದ್ದರು. ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲದೇ ಟಿವಿ ಹಾಗೂ ವೆಬ್​ ಸಿರೀಸ್​ಗಳಲ್ಲೂ ರಾಬಿ ನಟಿಸಿದ್ದರು. ರಾಬಿ ಜೇಮ್ಸ್​ ಬಾಂಡ್​ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ಹಿರಿಯ ನಟ ಲೋಹಿತಾಶ್ವಗೆ ಹೃದಯಾಘಾತ.. ಆರೋಗ್ಯ ಸ್ಥಿತಿ ಬಗ್ಗೆ ಪುತ್ರ ಶರತ್ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.