ಕರ್ನಾಟಕ

karnataka

ಐಸಿಸ್​​ ಸಂಘಟನೆಗೆ ಯುವಕರನ್ನು ಸೆಳೆಯುತ್ತಿದ್ದ ವ್ಯಕ್ತಿ ಹೈದರಾಬಾದ್​ನಲ್ಲಿ ಬಂಧನ

By

Published : Apr 3, 2022, 8:21 AM IST

ಸಾಮಾಜಿಕ ಜಾಲತಾಣಗಳ ಮೂಲಕ ಐಸಿಸ್ ಭಯೋತ್ಪಾದಕ ಸಂಘಟನೆ ಪರ ಪ್ರಚಾರ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.

ISIS Sympathizer Arrested In Hyderabad, telangana
ಐಸಿಸ್​​ ಪರವಾಗಿ ಪ್ರಚಾರ ಮಾಡಿ, ಯುವಕರನ್ನು ಆಕರ್ಷಿಸುತ್ತಿದ್ದ ವ್ಯಕ್ತಿ ಹೈದರಾಬಾದ್​ನಲ್ಲಿ ಬಂಧನ

ಹೈದರಾಬಾದ್(ತೆಲಂಗಾಣ): ಐಸಿಸ್ ಭಯೋತ್ಪಾದಕ ಸಂಘಟನೆ ಪರ ಪ್ರಚಾರ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ಹೈದರಾಬಾದ್ ಸಿಸಿಎಸ್ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಫಲಕ್‌ನುಮಾ ನಿವಾಸಿ ಮೊಹಮ್ಮದ್ ಅಬುಸಾನಿ ಬಂಧಿತ ವ್ಯಕ್ತಿ. ಕೆಲವು ತಿಂಗಳುಗಳಿಂದ ಹೈದರಾಬಾದ್​ನಲ್ಲಿ ಐಸಿಸ್ ಪರ ಸಹಾನುಭೂತಿ ಹೊಂದಿದವರನ್ನು ಸಂಪರ್ಕಿಸಲು ಈತ ಸಾಮಾಜಿಕ ಜಾಲತಾಣಗಳನ್ನು ವ್ಯಾಪಕವಾಗಿ ಬಳಸುತ್ತಿದ್ದ ಎಂದು ತಿಳಿದುಬಂದಿದೆ.

ಈ ಹಿಂದೆಯೂ ಆರೋಪಿ ಹಲವು ಬಾರಿ ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ಐಪಿ ವಿಳಾಸದ ಆಧಾರದ ಮೇಲೆ ಪೊಲೀಸರು ಬಂಧಿಸಿ, ರಿಮಾಂಡ್ ಹೋಮ್​ಗೆ ಕಳುಹಿಸಿದ್ದಾರೆ. ವಿಶ್ವದಾದ್ಯಂತ ಯುವಕರನ್ನು ಜಿಹಾದಿಗಳನ್ನಾಗಿ ಸಿದ್ಧಪಡಿಸುತ್ತಿರುವ ಐಸಿಸ್ ಸದಸ್ಯರೊಂದಿಗೆ ಅಬುಸಾನಿ ನಿರಂತರ ಸಮಾಲೋಚನೆ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ತನ್ನ ಸ್ನೇಹಿತರು ಮತ್ತು ಸಂಬಂಧಿಕರಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಜಿಹಾದ್ ಕಡೆಗೆ ಆಕರ್ಷಿತರಾಗಲು ವಿಡಿಯೋಗಳನ್ನು ಕಳುಹಿಸುತ್ತಿದ್ದ. ಇದಕ್ಕಾಗಿಯೇ ವಿಶೇಷವಾಗಿ ಅಪ್ಲಿಕೇಶನ್‌ಗಳನ್ನು ರಚಿಸಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿ ಐಸಿಸ್ ಸಂಘಟನೆಯಿಂದ ಹವಾಲಾ ಮೂಲಕ ಹಣ ಸಂಗ್ರಹಿಸುತ್ತಿದ್ದನು ಎಂದು ತಿಳಿದುಬಂದಿದೆ.

ಇದನ್ನೂ ಓದಿ:ರಾಮ ಮಂದಿರ ನಿರ್ಮಾಣ ಜಾಗದಲ್ಲಿ ಧ್ವಜ ಪೂಜೆ

ABOUT THE AUTHOR

...view details