ಕರ್ನಾಟಕ

karnataka

ರೈತರ ಚಳವಳಿ ಒಳ್ಳೆಯದು, ಆದರೆ ಜನರಿಗೆ ತೊಂದರೆ ನೀಡಬೇಡಿ: ರಾಜಾ ವಾರಿಂಗ್

By

Published : Nov 23, 2022, 3:25 PM IST

congress-president-raja-warring
ರಾಜಾ ವಾರಿಂಗ್

ಪಂಜಾಬ್​ ಪಾಲಿಕೆ ಚುನಾವಣೆಗೆ ಕಾಂಗ್ರೆಸ್​ ಭರ್ಜರಿ ಸಿದ್ಧತೆ ನಡೆಸುತ್ತಿದ್ದು, ಪಕ್ಷವನ್ನು ಅಧಿಕಾರಕ್ಕೆ ತರಲು ನಾಯಕರು ಪ್ರಯತ್ನಿಸುತ್ತಿದ್ದಾರೆ. ಆಪ್​ ಪಕ್ಷ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಲಿದೆ ಎಂದು ಕಾಂಗ್ರೆಸ್​ ಹೇಳಿದೆ.

ಲೂಧಿಯಾನ(ಪಂಜಾಬ್​):ಕಾಂಗ್ರೆಸ್​ ಪಂಜಾಬ್​ನಲ್ಲಿ ಅಧಿಕಾರ ಕಳೆದುಕೊಂಡ ಬಳಿಕ ಮತ್ತೆ ಪಕ್ಷ ಸಂಘಟನೆಯತ್ತ ತೊಡಗಿದ್ದು, ಪಾಲಿಕೆ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದೆ. ಭಾರಿ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಕಾಂಗ್ರೆಸ್​ ನಾಯಕರು ಸರ್ಕಾರ ನಡೆಸುತ್ತಿರುವ ಆಪ್​ ವಿರುದ್ಧ ಹರಿಹಾಯುತ್ತಿದ್ದಾರೆ.

ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಲೂಧಿಯಾನಕ್ಕೆ ಇಂದು ಭೇಟಿ ನೀಡಿ ಪ್ರಚಾರ ನಡೆಸಿದರು. ಬಳಿಕ ಮಾತನಾಡಿ, ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಹೀನಾಯವಾಗಿ ಸೋಲಲಿದೆ. ಆಡಳಿತದಲ್ಲಿದ್ದರೂ ಪಕ್ಷ ಸೋಲಲಿದೆ. ಕಾರ್ಯಕರ್ತರು ಪಕ್ಷ ಸಂಘಟನೆಯತ್ತ ಗಮನ ಹರಿಸಿ, ಕಾರ್ಯಕ್ಷಮತೆಗೆ ಅನುಗುಣವಾಗಿ ಟಿಕೆಟ್ ವಿತರಿಸಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಟೀಕಿಸಿದ ರಾಜಾ ವಾರಿಂಗ್​, ಇಲ್ಲಿನ ಜನರಿಗೆ ಭದ್ರತೆ ಇಲ್ಲವಾಗಿದೆ. ಉತ್ತರಪ್ರದೇಶ, ಬಿಹಾರ ರಾಜ್ಯಕ್ಕಿಂತಲೂ ಕೆಳಮಟ್ಟದ ಕಾನೂನು ಸುವ್ಯವಸ್ಥೆ ಇಲ್ಲಿದೆ. ಆಪ್​ ಸರ್ಕಾರ ಸಂಪೂರ್ಣವಾಗಿ ಆಡಳಿತದಲ್ಲಿ ಎಡವಿದೆ. ನನಗೂ ಜೀವ ಬೆದರಿಕೆ ಬರುತ್ತಿವೆ ಎಂದು ಹೇಳಿದರು.

ರೈತ ಚಳವಳಿಯನ್ನುದ್ದೇಶಿಸಿ ಮಾತನಾಡಿ, ಪ್ರತಿಭಟನೆ ಮಾಡುವುದು ರೈತರ ಹಕ್ಕಾಗಿದೆ. ಆದರೆ, ಸಾರ್ವಜನಿಕರಿಗೆ ಇದರಿಂದ ತೊಂದರೆಯಾಗಬಾರದು. ಪ್ರತಿಭಟನಾಕಾರರು ಶಾಸಕರ ಮನೆ, ಆಡಳಿತ ಕಚೇರಿಗಳಿಗೆ ಮುತ್ತಿಗೆ ಹಾಕಬೇಕು. ರಸ್ತೆ ತಡೆ ನಡೆಸಿ ಜನಸಾಮಾನ್ಯರಿಗೆ ಕಿರಿಕಿರಿ ಉಂಟು ಮಾಡಬಾರದು ಎಂದು ಸಲಹೆ ನೀಡಿದರು.

ಓದಿ:ಮಾಜಿ ಸ್ಪೀಕರ್​ ರಮೇಶ್ ಕುಮಾರ್ ವಿರುದ್ಧ ಅವಾಚ್ಯ ಪದ ಬಳಕೆ: ಕ್ಷಮೆ ಕೇಳಿದ ಕುಮಾರಸ್ವಾಮಿ

ABOUT THE AUTHOR

...view details