ಕರ್ನಾಟಕ

karnataka

ಶಾಲಾ ಬಸ್​ಗೆ ಗುದ್ದಿದ ಟ್ರಕ್​: ಇಬ್ಬರು ವಿದ್ಯಾರ್ಥಿಗಳು ಸಾವು, ಹಲವರಿಗೆ ಗಾಯ

By

Published : Jul 29, 2022, 4:29 PM IST

ಇಂದು ಬೆಳಗ್ಗೆ ಶಾಲಾ ಬಸ್‌ಗೆ ಹಿಂದಿನಿಂದ ಅತಿವೇಗದಿಂದ ಬಂದ ಟ್ರಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ.

ಶಾಲಾ ಬಸ್​ಗೆ ಗುದ್ದಿದ ಟ್ರಕ್​: ಓರ್ವ ವಿದ್ಯಾರ್ಥಿ ಸಾವು, ಹಲವರಿಗೆ ಗಾಯ
ಶಾಲಾ ಬಸ್​ಗೆ ಗುದ್ದಿದ ಟ್ರಕ್​: ಓರ್ವ ವಿದ್ಯಾರ್ಥಿ ಸಾವು, ಹಲವರಿಗೆ ಗಾಯ

ಹೋಶಿಯಾರ್‌ಪುರ (ಪಂಜಾಬ್):ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯ ದಸುಯಾದಲ್ಲಿ ಬೆಳಗ್ಗೆ ಶಾಲಾ ಬಸ್‌ಗೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದು ವಿದ್ಯಾರ್ಥಿಗಳಿಬ್ಬರು ಸಾವಿಗೀಡಾಗಿದ್ದಾರೆ. ಒಂಬತ್ತನೇ ತರಗತಿಯ ವಿದ್ಯಾರ್ಥಿ ಸಾವಿಗೀಡಾದವ. ಮೃತ ವಿದ್ಯಾರ್ಥಿ ತಾಂಡಾದ ಲೋಧಿ ಚಾಕ್ ಗ್ರಾಮಕ್ಕೆ ಸೇರಿದವನು ಎಂದು ಗುರುತಿಸಲಾಗಿದೆ.

ಇಂದು ಬೆಳಗ್ಗೆ ಶಾಲಾ ಬಸ್‌ಗೆ ಹಿಂದಿನಿಂದ ಅತಿವೇಗದಿಂದ ಬಂದ ಟ್ರಕ್ ಡಿಕ್ಕಿ ಹೊಡೆದಿದೆ. ಸುಮಾರು 13 ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಬಸ್ ಕಂಡಕ್ಟರ್ ಸೇರಿದಂತೆ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಹೊಸಿಯಾರಪುರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದು, ತನಿಖೆ ಆರಂಭಿಸಿದ್ದಾರೆ. ಬಸ್ ಮತ್ತು ಟ್ರಕ್ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:ಫೋಟೊ ಅಶ್ಲೀಲವಾಗಿ ಎಡಿಟ್ ಮಾಡಿ ಮಹಿಳೆಯರಿಗೆ ಬ್ಲ್ಯಾಕ್​ಮೇಲ್; ಯುವಕ ಅರೆಸ್ಟ್​

ABOUT THE AUTHOR

...view details