ಕರ್ನಾಟಕ

karnataka

ರಾಮನವಮಿಗೆ ಮುಸ್ಲಿಂ ಕುಟುಂಬ ತಯಾರಿಸುತ್ತೆ ಹಿಂದೂ ಧ್ವಜ: ಇವರ ಭಾತೃತ್ವ, ಸಹಬಾಳ್ವೆ ಎಲ್ಲರಿಗೂ ಮಾದರಿ!

By

Published : Apr 4, 2022, 11:01 PM IST

ಈ ನಗರದಲ್ಲಿ ಒಂದು ಕಡೆ ಮುಸ್ಲಿಂ ಸಮುದಾಯದ ಕುಶಲಕರ್ಮಿಗಳು ಉಪವಾಸ ಮಾಡುವ ಮೂಲಕ ರಾಮನವಮಿಯ ಧ್ವಜವನ್ನು ತಯಾರಿಸುತ್ತಾರೆ ಇನ್ನೊಂದು ಕಡೆ ಮುಸ್ಲಿಮೇತರ ವರ್ಗದವರು ಈದ್ ಸಂದರ್ಭದಲ್ಲಿ ಈದ್ ಸರಕುಗಳನ್ನು ಮಾರಾಟ ಮಾಡುತ್ತಾರೆ

ರಾಮನವಮಿಗೆ ಮುಸ್ಲಿಂ ಕುಟುಂಬ ತಯಾರಿಸುತ್ತೆ ಹಿಂದೂ ಧ್ವಜ
ರಾಮನವಮಿಗೆ ಮುಸ್ಲಿಂ ಕುಟುಂಬ ತಯಾರಿಸುತ್ತೆ ಹಿಂರಾಮನವಮಿಗೆ ಮುಸ್ಲಿಂ ಕುಟುಂಬ ತಯಾರಿಸುತ್ತೆ ಹಿಂದೂ ಧ್ವಜದೂ ಧ್ವಜ

ಗಯಾ: ದೇವನೊಬ್ಬ ನಾಮ ಹಲವು ಎಂದು ಹೇಳಿದರೂ ನಾವು ನಮ್ಮ ದೇವರು ಶ್ರೇಷ್ಠ, ಅವರ ದೇವರು ಕನಿಷ್ಠ ಎಂಬ ವಾದ - ವಿವಾದಗಳಲ್ಲೇ ಕಾಲ ಕಳೆಯುವ ಸಮಯದಲ್ಲಿ ಈ ಘಟನೆ ನಿಜಕ್ಕೂ ಸಮಾಜಕ್ಕೆ ಆದರ್ಶನೀಯವಾಗಿದೆ. ಇಲ್ಲೊಂದು ಮುಸ್ಲಿಂ ಸಮುದಾಯವು ರಾಮನವಮಿಯ ಧ್ವಜವನ್ನು ತಯಾರು ಮಾಡುತ್ತದೆ.

ಬಿಹಾರದ ಗಯಾ ಜಿಲ್ಲೆ ನಾಗರಿಕತೆಯ ತೊಟ್ಟಿಲು, ಇಲ್ಲಿ ಮುಸ್ಲಿಂ ಮತ್ತು ಹಿಂದೂ ಎರಡೂ ಸಮುದಾಯಗಳು ಪರಸ್ಪರ ಸಹೋದರತ್ವದಿಂದ ಪ್ರತಿ ಹಬ್ಬವನ್ನು ಆಚರಿಸುತ್ತಾರೆ. ಈ ನಗರದಲ್ಲಿ, ಒಂದು ಕಡೆ ಮುಸ್ಲಿಂ ಸಮುದಾಯದ ಕುಶಲಕರ್ಮಿಗಳು ಉಪವಾಸ ಮಾಡುವ ಮೂಲಕ ರಾಮನವಮಿಯ ಧ್ವಜವನ್ನು ತಯಾರಿಸುತ್ತಾರೆ ಇನ್ನೊಂದು ಕಡೆ ಮುಸ್ಲಿಮೇತರ ವರ್ಗದವರು ಈದ್ ಸಂದರ್ಭದಲ್ಲಿ ಈದ್ ಸರಕುಗಳನ್ನು ಮಾರಾಟ ಮಾಡುತ್ತಾರೆ

ರಾಮನವಮಿಗೆ ಮುಸ್ಲಿಂ ಕುಟುಂಬ ತಯಾರಿಸುತ್ತೆ ಹಿಂದೂ ಧ್ವಜ

ಈ ವರ್ಷ ರಾಮನವಮಿ ಮತ್ತು ರಂಜಾನ್ ಏಕಕಾಲದಲ್ಲಿ ಜರುಗಲಿದೆ. ದೇಶದ ಅನೇಕ ಭಾಗಗಳಲ್ಲಿ ಹಲವಾರು ಸಂಘರ್ಷ ಮತ್ತು ಹಿಂಸಾಚಾರದ ಘಟನೆಗಳು ನಡೆದಿವೆ. ಆದರೆ, ಗಯಾದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಉಪವಾಸದ ನಡುವೆಯೂ ರಾಮನವಮಿಯ ಧ್ವಜವನ್ನು ತಯಾರಿಸುತ್ತಿದ್ದಾರೆ.

ಗಯಾ ಪಟ್ಟಣ, ಕೆ.ಪಿ.ರಸ್ತೆ ಮತ್ತು ಗೋದಾಮು ಪ್ರದೇಶವು ವಾಣಿಜ್ಯ ದೃಷ್ಟಿಯಿಂದ ಬಹಳ ಮುಖ್ಯವಾಗಿದೆ. ಗೋದಾಮಿನ ಪ್ರದೇಶದಲ್ಲಿ ಕೆಲವೇ ಕೆಲವು ಮುಸ್ಲಿಂ ಅಂಗಡಿಗಳಿವೆ. ಆದರೆ, ಮುಸ್ಲಿಂ ಕುಶಲಕರ್ಮಿಗಳು ಎಪ್ಪತ್ತು ವರ್ಷಗಳಿಂದ ಇಲ್ಲಿ ರಾಮನವಮಿ ಧ್ವಜವನ್ನು ತಯಾರಿಸುತ್ತಿದ್ದಾರೆ.

ರಾಮನವಮಿಗೆ ಮುಸ್ಲಿಂ ಕುಟುಂಬ ತಯಾರಿಸುತ್ತೆ ಹಿಂದೂ ಧ್ವಜ

ಇದನ್ನೂ ಓದಿ: ಬಾಲಕನ ಜೊತೆ ಲೈಂಗಿಕ ಕ್ರಿಯೆ ನಡೆಸಿದ HIV ಪೀಡಿತೆ ಚಿಕ್ಕಮ್ಮ

ರಶೀದ್ ಮತ್ತು ಅವರ ಸಹೋದರ ಸಲೀಂ ಸೇರಿದಂತೆ ಅವರ ಮಕ್ಕಳು ಈಗ ಅದೇ ಕೆಲಸದಲ್ಲಿ ಆಸಕ್ತಿ ಹೊಂದಿದ್ದಾರೆ. ರಾಮನವಮಿ ಸಂದರ್ಭದಲ್ಲಿ ರಶೀದ್ ಉತ್ತಮ ಹಣವನ್ನೂ ಗಳಿಸುತ್ತಿದ್ದರು. ಆದರೆ, ಇತ್ತೀಚಿನ ಧಾರ್ಮಿಕ ಸಂಘರ್ಷಗಳನ್ನು ಗಮನಿಸಿರುವ ರಶೀದ್, ಇನ್ನು ಮುಂದೆ ಹಣ ಸಂಪಾದಿಸಲು ಕೆಲಸ ಮಾಡುವುದಿಲ್ಲ. ಸೇವೆಯ ಉದ್ದೇಶದಿಂದ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

TAGGED:

ABOUT THE AUTHOR

...view details