ETV Bharat / bharat

ಬಾಲಕನ ಜೊತೆ ಲೈಂಗಿಕ ಕ್ರಿಯೆ ನಡೆಸಿದ HIV ಪೀಡಿತೆ ಚಿಕ್ಕಮ್ಮ

author img

By

Published : Apr 4, 2022, 9:05 PM IST

ಸಂಬಂಧದಲ್ಲಿ ಚಿಕ್ಕಮ್ಮ ಆಗಬೇಕಿದ್ದವಳು ಬಲವಂತವಾಗಿ ದೈಹಿಕ ಸಂಬಂಧ ಬೆಳೆಸಿದ್ದಾಳಂತೆ. ಇದು ಹಲವು ದಿನಗಳಿಂದ ನಡೆಯುತ್ತಿತ್ತು ಎನ್ನಲಾಗಿದೆ.

ಅಪ್ರಾಪ್ತ ಬಾಲಕನ ಜೊತೆ ಲೈಂಗಿಕ ಕ್ರಿಯೆ ನಡೆಸಿದ HIV ಪೀಡಿತೆ ಚಿಕ್ಕಮ್ಮ
ಅಪ್ರಾಪ್ತ ಬಾಲಕನ ಜೊತೆ ಲೈಂಗಿಕ ಕ್ರಿಯೆ ನಡೆಸಿದ HIV ಪೀಡಿತೆ ಚಿಕ್ಕಮ್ಮ

ರುದ್ರಾಪುರ (ಉತ್ತರಾಖಂಡ): ಎಚ್​​ಐವಿ ಪೀಡಿತ ಮಹಿಳೆಯೊಬ್ಬರು 15 ವರ್ಷದ ಬಾಲಕನ ಜತೆ ದೈಹಿಕ ಸಂಬಂಧ ಬೆಳೆಸಿ ತನ್ನ ಜೀವನ ಹಾಳು ಮಾಡಿಕೊಳ್ಳುವುದರ ಜೊತೆ ಬಾಲಕನಿಗೂ ಆಪತ್ತು ತಂದಿದ್ದಾಳೆ. ಈ ಘಟನೆ ಉಧಮ್ ಸಿಂಗ್ ನಗರ ಜಿಲ್ಲೆಯಲ್ಲಿ ಜರುಗಿದೆ. ಆರೋಪಿ ಮಹಿಳೆಯ ವಿರುದ್ಧ ಕುಟುಂಬಸ್ಥರು ದೂರು ನೀಡಿದ್ದು, ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರುದ್ರಾಪುರದ ಟ್ರಾನ್ಸಿಟ್ ಕ್ಯಾಂಪ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ. 15 ವರ್ಷದ ಬಾಲಕನ ಜೊತೆ ಸಂಬಂಧದಲ್ಲಿ ಚಿಕ್ಕಮ್ಮ ಆಗಬೇಕಿದ್ದವಳು ಬಲವಂತವಾಗಿ ದೈಹಿಕ ಸಂಬಂಧ ಬೆಳೆಸಿದ್ದಾಳಂತೆ. ಇದು ಹಲವು ದಿನಗಳಿಂದ ನಡೆಯುತ್ತಿತ್ತು ಎನ್ನಲಾಗಿದೆ. ಆದರೆ, ಒಂದು ದಿನ ಕುಟುಂಬ ಸದಸ್ಯರು ಇಬ್ಬರನ್ನೂ ಪ್ರತ್ಯಕ್ಷವಾಗಿ ನೋಡಿ ಶಾಕ್​ ಆಗಿದ್ದಾರೆ. ಇದಾದ ನಂತರ ಮನೆಯಲ್ಲಿ ಗಲಾಟೆ ನಡೆದಿದೆ.

ಇದನ್ನೂ ಓದಿ: ಒಂದು ತಿಂಗಳ ಅವಧಿಯಲ್ಲಿ ಐದು ಕಾಂಗರೂಗಳ ರಕ್ಷಣೆ: ಇವು ಇಲ್ಲಿಗೆ ಬಂದಿದ್ದು ಹೇಗೆಂಬುದೇ ನಿಗೂಢ

ಪೊಲೀಸರ ಪ್ರಕಾರ ಮಹಿಳೆಯ ಪತಿ ಈಗಾಗಲೇ ಸಾವನ್ನಪ್ಪಿದ್ದು, ಆತನ ಸಾವಿಗೂ ಏಡ್ಸ್ ಕಾರಣವಂತೆ. ಮಹಿಳೆ ತನ್ನ ಮಗನ ಜೀವನವನ್ನೇ ಹಾಳು ಮಾಡಿದ್ದಾಳೆ ಎಂದು ಬಾಲಕನ ತಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಕೆಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.