ಕರ್ನಾಟಕ

karnataka

ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ

By

Published : Nov 24, 2020, 1:18 PM IST

ಪಂಜಾಬ್​​​​​​​​ನ ಲೂಧಿಯಾನದಲ್ಲಿ ಒಂದೇ ಕುಟುಂಬಕ್ಕೆ ಸೇರಿದ ನಾಲ್ವರು ಬರ್ಬರವಾಗಿ ಹತ್ಯೆಗೀಡಾಗಿದ್ದಾರೆ.

Four members of the same family murdered in Ludhiana
ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ

ಲುಧಿಯಾನ : ಪಂಜಾಬ್​​​​​​​​ನಲ್ಲಿಒಂದೇ ಕುಟುಂಬದ ನಾಲ್ವರು ಸದಸ್ಯರನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಲುಧಿಯಾನದ ಹಂಬ್ರಾ ರಸ್ತೆಯ ಮಯೂರ್ ವಿಹಾರ್ ಪ್ರದೇಶದಲ್ಲಿ ಈ ಪ್ರಕರಣ ನಡೆದಿದೆ. ಕೊಲೆಯಾದವರನ್ನು ವ್ಯಾಪಾರಿ ಆಶಿಶ್ ಸುಂದಾ, ಅವರ ಪತ್ನಿ ಗರಿಮಾ ಸುಂದ, ತಾಯಿ ಸುನೀತಾ ಸುಂದಾ ಮತ್ತು 13 ವರ್ಷದ ಮಗ ಸಾಕೇತ್ ಎಂದು ಗುರುತಿಸಲಾಗಿದೆ.

ನಾಲ್ವರ ಭೀಕರ ಹತ್ಯೆ ಹಿನ್ನೆಲೆ ಈ ಪ್ರದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಹತ್ಯೆಗೆ ಬಳಸಲಾದ ಆಯುಧಗಳನ್ನು ವಶಪಡಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details