ಕರ್ನಾಟಕ

karnataka

ಐಐಟಿ ಇಂದೋರ್ ಮಂಡಳಿ ಅಧ್ಯಕ್ಷರಾಗಿ ಇಸ್ರೋ ಮಾಜಿ ಅಧ್ಯಕ್ಷ ಡಾ.ಕೆ.ಶಿವನ್ ಆಯ್ಕೆ

By ETV Bharat Karnataka Team

Published : Aug 31, 2023, 5:34 PM IST

ಮಧ್ಯಪ್ರದೇಶದ ಇಂದೋರ್​ ಐಐಟಿ ಮಂಡಳಿಯ ಅಧ್ಯಕ್ಷರಾಗಿ ಡಾ.ಕೆ.ಶಿವನ್​ ಅವರನ್ನು ಆಯ್ಕೆ ಮಾಡಲಾಗಿದೆ.

ಡಾ.ಕೆ.ಶಿವನ್
ಡಾ.ಕೆ.ಶಿವನ್

ಮಧ್ಯಪ್ರದೇಶ : ಇಸ್ರೋ ಮತ್ತು ಬಾಹ್ಯಾಕಾಶ ಆಯೋಗದ ಮಾಜಿ ಅಧ್ಯಕ್ಷ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಐಐಟಿ ಇಂದೋರ್‌ನ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯೂ ಆಗಿರುವ ಡಾ.ಕೆ.ಶಿವನ್ ಅವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಚಂದ್ರನ 'ಶಿವಶಕ್ತಿ ಬಿಂದು'ವಿನಲ್ಲಿ ಚಂದ್ರಯಾನ-3 ನೌಕೆ ಇಳಿಯುವ ಒಂದು ದಿನ ಮೊದಲು ನೇಮಕಾತಿ ನಡೆದಿದೆ. ಡಾ.ಶಿವನ್ ನೇಮಕಾತಿಯೊಂದಿಗೆ ಪ್ರೊ.ದೀಪಕ್ ಬಿ. ಗೇಟ್ ಅವರು ಕರ್ತವ್ಯದಿಂದ ನಿರ್ಗಮಿಸಲಿದ್ದಾರೆ.

ಐಐಟಿ ಇಂದೋರ್ ನಿರ್ದೇಶಕ ಪ್ರೊ.ಡಾ.ಕೆ.ಜೋಶಿ ಮಾತನಾಡಿ, "ಈ ವರ್ಷ ಬಾಹ್ಯಾಕಾಶ ವಿಜ್ಞಾನದಲ್ಲಿ ಬಿ.ಎಸ್ಸಿ ಮತ್ತು ಇಂಜಿನಿಯರಿಂಗ್ ಟೆಕ್ ಪ್ರೋಗ್ರಾಂ ವಿಭಾಗದಲ್ಲಿ ನಾಲ್ವರು ವಿದ್ಯಾರ್ಥಿನಿಯರು ಸೇರಿದಂತೆ 20 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಇದು ಐಐಟಿ ಇಂದೋರ್‌ನಲ್ಲಿ ಮಾತ್ರ ಲಭ್ಯವಿರುವ ವಿಶಿಷ್ಟ ಕಾರ್ಯಕ್ರಮ" ಎಂದರು.

ಇದೇ ವೇಳೆ, "ನಾವು ಈಗಾಗಲೇ ಖಗೋಳಶಾಸ್ತ್ರ, ಆಸ್ಟ್ರೋಫಿಸಿಕ್ಸ್ ಮತ್ತು ಬಾಹ್ಯಾಕಾಶ ಎಂಜಿನಿಯರಿಂಗ್‌ನಲ್ಲಿ 2016ರಿಂದ ಎಂ.ಟೆಕ್ ಪ್ರಾರಂಭಿಸಿದ್ದೇವೆ. ಸಂಸ್ಥೆಯಲ್ಲಿ ಪಿಹೆಚ್​ಡಿ ಕಾರ್ಯಕ್ರಮ ಆರಂಭಿಸಿದ್ದ ನನಗೆ ಖಚಿತವಾಗಿ ಡಾ.ಕೆ.ಶಿವನ್ ಮಾರ್ಗದರ್ಶನದಲ್ಲಿ, ಸಂಸ್ಥೆಯು ಹೊಸ ಎತ್ತರಕ್ಕೇರುವ ವಿಶ್ವಾಸವಿದೆ. ಬಾಹ್ಯಾಕಾಶ ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಈವರೆಗೆ ಅನ್ವೇಷಿಸದ ಪ್ರದೇಶದಲ್ಲಿ ಕೆಲಸ ಮಾಡಲು ಮತ್ತು ದೇಶದ ಬಾಹ್ಯಾಕಾಶ ಯೋಜನೆಗೆ ಕೆ.ಶಿವನ್‌ ಅವರು ಮತ್ತಷ್ಟು ಕೊಡುಗೆ ನೀಡಲಿದ್ದಾರೆ" ಎಂದು ಹೇಳಿದರು.

ಇದನ್ನೂ ಓದಿ:ಚಂದ್ರನ ಮೇಲ್ಮೈ ಸಂಶೋಧನೆಗೆ ಮೊದಲ ಆದ್ಯತೆ, ಬದುಕಿನ ಬಗ್ಗೆ ಯಾವುದೇ ಖಾತ್ರಿ ಇಲ್ಲ: ವಿಜ್ಞಾನಿ ವೆಂಕಟೇಶ್ವರನ್​

ಡಾ.ಶಿವನ್ ನೇತೃತ್ವದಲ್ಲಿ ಐಐಟಿ ಇಂದೋರ್ ಸಂಸ್ಥೆಯು ಇಸ್ರೋದೊಂದಿಗೆ ಸಹಕರಿಸಲು ಮತ್ತು ಭಾರತವನ್ನು ಹೊಸ ಬಾಹ್ಯಾಕಾಶ ಯುಗಕ್ಕೆ ಕೊಂಡೊಯ್ಯುವಲ್ಲಿ ಗಣನೀಯ ಕೊಡುಗೆ ನೀಡುವತ್ತ ಕೆಲಸ ಮಾಡಲಿದೆ. ಸಂಸ್ಥೆಯು ಬಾಹ್ಯಾಕಾಶ ತಂತ್ರಜ್ಞಾನ SAIL ವಿದ್ಯಾರ್ಥಿ ಉಪಗ್ರಹ ಕಾರ್ಯಕ್ರಮ ಮತ್ತು ನಮ್ಮ UG-PG ಮೂಲಕ ವಿಶೇಷ ಪರಿಣತಿ ತರಲಿದೆ ಎಂದು ತಿಳಿಸಿದರು.

ಚಂದ್ರನಲ್ಲಿ ಬದುಕು ಸಾಧ್ಯವೇ?:ಚಂದ್ರದ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿರುವ ಚಂದ್ರಯಾನ-3 ನೌಕೆಯ ಬಗ್ಗೆ ಬಾಹ್ಯಾಕಾಶ ವಿಜ್ಞಾನಿ ಟಿ.ವಿ.ವೆಂಕಟೇಶ್ವರನ್​ ಮೆಚ್ಚುಗೆ ವ್ಯಕ್ತಪಡಿಸಿದ್ದು, ಬಾಹ್ಯಾಕಾಶ ಪ್ರಯಾಣದಲ್ಲೇ ಇದೊಂದು ಐತಿಹಾಸಿಕ ಮೈಲಿಗಲ್ಲು ಎಂದು (ಆಗಸ್ಟ್​ 30-2023) ಬಣ್ಣಿಸಿದ್ದರು. ಇದೇ ವೇಳೆ ಚಂದ್ರನ ಮೇಲೆ ಜೀವಿಗಳಿರುವ ಬಗ್ಗೆ ಇನ್ನೂ ಯಾವುದೇ ಖಾತ್ರಿ ಇಲ್ಲ. ಸದ್ಯಕ್ಕೆ ಚಂದ್ರದ ಮೇಲ್ಮೈಯನ್ನು ಅನ್ವೇಷನೆ ನಡೆಸುವುದು ಅತ್ಯಂತ ಪ್ರಮುಖವಾಗಿದೆ ಎಂದು ಹೇಳಿದ್ದರು.

ಇದನ್ನೂ ಓದಿ :ಚಂದ್ರನ ಮೇಲ್ಮೈ ಸಂಶೋಧನೆಗೆ ಮೊದಲ ಆದ್ಯತೆ, ಬದುಕಿನ ಬಗ್ಗೆ ಯಾವುದೇ ಖಾತ್ರಿ ಇಲ್ಲ: ವಿಜ್ಞಾನಿ ವೆಂಕಟೇಶ್ವರನ್​

ABOUT THE AUTHOR

...view details