ಕರ್ನಾಟಕ

karnataka

ಸತತವಾಗಿ ಆಟವಾಡುತ್ತಿರುವುದೇ ಇಂಗ್ಲೆಂಡ್ ತಂಡದ ಯಶಸ್ಸಿನ ಗುಟ್ಟು: ಆರೋನ್ ಫಿಂಚ್

By

Published : Feb 8, 2023, 2:22 PM IST

ಇಂಗ್ಲೆಂಡ್ ಕ್ರಿಕೆಟ್ ತಂಡದ ಇತ್ತೀಚಿನ ಯಶಸ್ಸಿನ ಬಗ್ಗೆ ನಿವೃತ್ತ ಆಟಗಾರ ಆರೋನ್ ಫಿಂಚ್ ಮಾತನಾಡಿದ್ದಾರೆ. ಇಂಗ್ಲೆಂಡ್ ಆಟಗಾರರಿಗೆ ಉತ್ತಮ ತರಬೇತಿ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಸತತವಾಗಿ ಆಟವಾಡುತ್ತಿರುವುದೇ ಇಂಗ್ಲೆಂಡ್ ತಂಡದ ಯಶಸ್ಸಿನ ಗುಟ್ಟು: ಆರೋನ್ ಫಿಂಚ್
ಸತತವಾಗಿ ಆಟವಾಡುತ್ತಿರುವುದೇ ಇಂಗ್ಲೆಂಡ್ ತಂಡದ ಯಶಸ್ಸಿನ ಗುಟ್ಟು: ಆರೋನ್ ಫಿಂಚ್

ಮೆಲ್ಬೋರ್ನ್: ಇಂಗ್ಲೆಂಡ್ ಕ್ರಿಕೆಟ್ ತಂಡವು ಇತ್ತೀಚಿನ ದಿನಗಳಲ್ಲಿ ಕೌಂಟಿ ಮತ್ತು ಸ್ಥಳೀಯ ಪಂದ್ಯಗಳಲ್ಲಿ ಸತತವಾಗಿ ತೊಡಗಿಸಿಕೊಂಡಿರುವುದೇ ಅದರ ಇತ್ತೀಚಿನ ಯಶಸ್ಸಿಗೆ ಕಾರಣ ಎಂದು ವೈಟ್ ಬಾಲ್ ರಿಟೈರ್ಡ್ ಕ್ಯಾಪ್ಟನ್ ಆರೋನ್ ಫಿಂಚ್ ಹೇಳಿದ್ದಾರೆ. ಸತತವಾಗಿ ಆಟದಲ್ಲಿ ತೊಡಗಿಸಿಕೊಂಡಿರುವುದರಿಂದ ಆಟಗಾರರು ಆಟದ ಒಂದು ವಿಧದಿಂದ ಮತ್ತೊಂದು ವಿಧಕ್ಕೆ ಬದಲಾಗುವುದು ಸುಲಭವಾಗುತ್ತದೆ ಎಂದಿದ್ದಾರೆ.

ಇಂಗ್ಲೆಂಡ್ ತಂಡವು ಪ್ರಸ್ತುತ ಐಸಿಸಿ 50 ಓವರ್ ಟ್ರೋಫಿ ಮತ್ತು ಟಿ-20 ವಿಶ್ವಕಪ್ ಎರಡನ್ನೂ ಗೆದ್ದು ಬೀಗುತ್ತಿದೆ. ಕ್ರಿಸ್ ಸಿಲ್ವರ್‌ವುಡ್ ಮತ್ತು ಜೋ ರೂಟ್ ಬದಲಿಗೆ ಬ್ರೆಂಡನ್ ಮೆಕಲಮ್ ಮತ್ತು ಬೆನ್ ಸ್ಟೋಕ್ಸ್ ಅವರನ್ನು ಕ್ರಮವಾಗಿ ಮುಖ್ಯ ತರಬೇತುದಾರ ಮತ್ತು ನಾಯಕರನ್ನಾಗಿ ಮಾಡಿದ ಇಂಗ್ಲೆಂಡ್ 10ರ ಪೈಕಿ 9 ಟೆಸ್ಟ್‌ಗಳಲ್ಲಿ ಜಯ ಸಾಧಿಸಿದೆ. ಮಂಗಳವಾರ ಅಂತಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಫಿಂಚ್, ಬಿಗ್ ಬ್ಯಾಷ್ ಲೀಗ್ ಮತ್ತು ಪ್ರಪಂಚದಾದ್ಯಂತದ ದೇಶೀಯ ಪಂದ್ಯಾವಳಿಗಳಲ್ಲಿ ಆಡುವುದನ್ನು ಮುಂದುವರಿಸಲಿದ್ದಾರೆ.

ಅವರ ಯುವ ಕ್ರಿಕೆಟಿಗರು ಸಾಕಷ್ಟು ಕ್ರಿಕೆಟ್​ ಆಡುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಬೆಳವಣಿಗೆಯ ಅವಧಿಯಲ್ಲಿ ಹೆಚ್ಚು ಕ್ರಿಕೆಟ್ ಆಡುತ್ತಿದ್ದಾರೆ. ಈ ಅವಧಿಯಲ್ಲಿ ಬಹುಶಃ ಅವರಿಗೆ ಆಟದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಸುಲಭವಾಗಿರುತ್ತದೆ ಎಂದು ಫಿಂಚ್ ಹೇಳಿದರು. ಕ್ಲಬ್ ಕ್ರಿಕೆಟ್​ನಿಂದ ಹಿಡಿದು ಅಂತಾರಾಷ್ಟ್ರೀಯ ಕ್ರಿಕೆಟ್​ವರೆಗೆ ಅವರು ಬಹಳಷ್ಟು ಕ್ರಿಕೆಟ್ ಆಡುತ್ತಿದ್ದಾರೆ. ವಿಶೇಷವಾಗಿ ಏಕದಿನ ಮತ್ತು ಟಿ20 ವಿಭಾಗದಲ್ಲಿ ಅವರು ಸಾಕಷ್ಟು ಪಂದ್ಯಗಳನ್ನಾಡುತ್ತಿದ್ದಾರೆ. ಇಷ್ಟೊಂದು ಕ್ರಿಕೆಟ್ ಆಡುವುದರಿಂದ ಅವರಿಗೆ ಕ್ರಿಕೆಟ್ ತರಬೇತಿ ನೀಡುವ ವಿಧಾನಗಳು ಸಹ ವಿಭಿನ್ನವಾಗಿವೆ ಎಂದರು.

ಪಂದ್ಯ ಆರಂಭಕ್ಕೂ ಮುನ್ನ ಅಭ್ಯಾಸ ಮಾಡುವುದೇಕೆ?:ಅವರು ಹೆಚ್ಚು ತರಬೇತಿ ನೀಡುವುದಿಲ್ಲ, ಆದರೆ ಅವರು ತಮ್ಮ ಬೆಳಗಿನ ನೆಟ್ ಸೆಷನ್‌ಗಳನ್ನು ತಮ್ಮ ಮುಖ್ಯ ಅಭ್ಯಾಸ ಅವಧಿಗಳಾಗಿ ಬಳಸುತ್ತಾರೆ. ಹೀಗಾಗಿ ನಿಮ್ಮ ಆಟಗಾರರು ಪಂದ್ಯ ಪ್ರಾರಂಭವಾಗುವ ಕೆಲವೇ ಗಂಟೆಗಳ ಮೊದಲು ಬ್ಯಾಟಿಂಗ್, ಬ್ಯಾಟಿಂಗ್ ಮತ್ತು ಬ್ಯಾಟಿಂಗ್ ಮಾಡುತ್ತಿರುತ್ತಾರೆ ಎಂದು ಫಿಂಚ್ ಹೇಳಿದ್ದಾರೆ. ಕಳೆದ 10 ವರ್ಷಗಳಲ್ಲಿ ಅವರಿಗೆ (ದೇಶೀಯ ಇಂಗ್ಲೆಂಡ್ ಆಟಗಾರರು) ತರಬೇತಿ ನೀಡುವ ರೀತಿಯನ್ನು ನಾನು ಗಮನಿಸಿದ್ದೇನೆ. ವೈಫಲ್ಯ ಸ್ವೀಕರಿಸುವುದನ್ನು ಹೆಚ್ಚಾಗಿ ಅವರಿಗೆ ಹೇಳಿಕೊಡಲಾಗುತ್ತದೆ ಎಂದರು ಫಿಂಚ್.

ಸದ್ಯ ಆಸ್ಟ್ರೇಲಿಯಾದಲ್ಲಿ ನಾವು ಅದನ್ನು ಒಪ್ಪಿಕೊಳ್ಳುವ ಸಂದರ್ಭಗಳಲ್ಲಿದ್ದೇವೆ ಮತ್ತು ಅದು ಒಳ್ಳೆಯದು ಕೂಡ ಆಗಿದೆ ಏಕೆಂದರೆ ಆಟಗಾರರು ನಿಜವಾಗಿಯೂ ತುಂಬಾ ಆಟವಾಡುತ್ತಿದ್ದಾರೆ ಮತ್ತು ಅವರು ತಮ್ಮ ಶಕ್ತಿಮೀರಿ ಪ್ರಯತ್ನಿಸುತ್ತಿದ್ದಾರೆ. ಇಂಗ್ಲಿಷ್ ಆಟದಲ್ಲಿ ಖಂಡಿತವಾಗಿಯೂ ಇನ್ನಷ್ಟು ಆವಿಷ್ಕಾರಗಳಿವೆ. ಬಹುತೇಕ ಎಲ್ಲರೂ ರ‍್ಯಾಂಪ್ ಮಾಡುತ್ತಾರೆ, ಎಲ್ಲರೂ ರಿವರ್ಸ್ ಸ್ವೀಪ್‌ಗಳು ಮತ್ತು ಹಾರ್ಡ್ ಸ್ವೀಪ್‌ಗಳನ್ನು ಮಾಡುತ್ತಾರೆ ಮತ್ತು ಸ್ವಲ್ಪ ವಿಕೆಟ್‌ ಕೀಪಿಂಗ್ ಮತ್ತು ಬೌಲ್‌ ಮಾಡುತ್ತಾರೆ. ಅವರು ಖಂಡಿತವಾಗಿಯೂ ಚೆನ್ನಾಗಿ ನುರಿತ ಆಟಗಾರರಾಗಿದ್ದಾರೆ ಎಂದರು ಫಿಂಚ್.

ಆರೋನ್ ಫಿಂಚ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ದೀರ್ಘಾವಧಿಯ ವೈಟ್ ಬಾಲ್ ತಂಡದ ನಾಯಕ ಆಸ್ಟ್ರೇಲಿಯಾವನ್ನು ಎಲ್ಲಾ ಸ್ವರೂಪದ 254 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಇವರು ಐದು ಟೆಸ್ಟ್, 146 ODI ಮತ್ತು 103 T20I ಗಳನ್ನು ಆಡಿದ್ದಾರೆ. ಮಂಗಳವಾರ ನಿವೃತ್ತಿ ಘೋಷಿಸುವ ಮೊದಲು ಫಿಂಚ್ ಆಸ್ಟ್ರೇಲಿಯಾವನ್ನು 76 ಪುರುಷರ T20I ಗಳಲ್ಲಿ ಮತ್ತು 55 ODIಗಳಲ್ಲಿ ಗೆಲ್ಲಿಸಿ ವಿಶ್ವ ದಾಖಲೆ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ:ರಿಷಭ್ ಪಂತ್​ಗೆ ಪರ್ಯಾಯ ಆಟಗಾರನನ್ನು ಹುಡುಕುವುದು ಕಷ್ಟ: ಕಿರಣ್​ ಮೋರೆ

ABOUT THE AUTHOR

...view details