ಕರ್ನಾಟಕ

karnataka

ಭಾರತ, ಬಾಂಗ್ಲಾದೇಶದಲ್ಲಿ ಪ್ರಬಲ ಭೂಕಂಪ.. ಮಿಜೋರಾಂನಲ್ಲಿ ನಡುಗಿದ ಮನೆ!

By

Published : Nov 26, 2021, 7:53 AM IST

magnitude quake, magnitude quake in Mizoram, Bangladesh Earthquake, Bangladesh Earthquake today, Mizoram earthquake today, ಭೂಕಂಪನ, ಮಿಜೋರಾಂನಲ್ಲಿ ಭೂಕಂಪನ, ಬಾಂಗ್ಲದೇಶದಲ್ಲಿ ಭೂಕಂಪನ, ಇಂದು ಬಾಂಗ್ಲಾದೇಶ ಭೂಕಂಪನ, ಇಂದು ಮಿಜೋರಾಂ ಭೂಕಂಪನ,
ಭಾರತ, ಬಾಂಗ್ಲಾದೇಶದಲ್ಲಿ ಪ್ರಬಲ ಭೂಕಂಪ ()

ಇಂದು ಬೆಳ್ಳಂಬೆಳಗ್ಗೆ ಮಿಜೋರಾಂ, ಬಾಂಗ್ಲಾದೇಶದಲ್ಲಿ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 6.1 ಮತ್ತು 6.3 ತೀವ್ರತೆ ದಾಖಲಾಗಿದೆ ಎಂದು ಎನ್‌ಸಿಎಸ್ ತಿಳಿಸಿದೆ.

ಥೆನ್ಜಾಲ್ (ಮಿಜೋರಾಂ): ಶುಕ್ರವಾರ ಮುಂಜಾನೆ ಮಿಜೋರಾಂನ ಥೆನ್ಜಾಲ್‌ನ ಆಗ್ನೇಯ ಭಾಗದಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (National Center for Seismology) ಮಾಹಿತಿ ನೀಡಿದೆ.

ಎನ್‌ಸಿಎಸ್ ಪ್ರಕಾರ, ಭೂಕಂಪದ ಕಂಪನಗಳು 12 ಕಿಲೋಮೀಟರ್ ಆಳವನ್ನು ಹೊಂದಿದ್ದು, ಬೆಳಗ್ಗೆ 5.15 ರ ಸುಮಾರಿಗೆ ಸಂಭವಿಸಿದೆ. ಭೂಕಂಪನ ಪರಿಣಾಮ ಹೆಚ್ಚಾಗಿ ಕೋಲ್ಕತ್ತಾ ಮತ್ತು ಬಾಂಗ್ಲಾದೇಶ ಮೇಲೆ ಬೀರಿದೆ.

Earthquake: ಇಂದು ಮುಂಜಾನೆ ಸಂಭವಿಸಿದ ಪ್ರಬಲ ಭೂಕಂಪದಿಂದ ಹಾನಿಯಾಗಿರುವ ಸಾಧ್ಯತೆ ಹೆಚ್ಚಾಗಿದ್ದು, ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದ್ರೆ ಮಿಜೋರಾಂ ಹೊರತುಪಡಿಸಿ ಬಾಂಗ್ಲಾದೇಶದಲ್ಲೂ ಭೂಕಂಪನ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಬಾಂಗ್ಲಾದೇಶದಲ್ಲಿ ಸಂಭವಿಸಿದ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.3ರಷ್ಟು ದಾಖಲಾಗಿದ್ದು, ಜನರು ಗಾಬರಿಗೊಂಡು ಮನೆಯಿಂದ ಹೊರಬಂದರು ಎಂದು ವರದಿಯಾಗಿದೆ.

ABOUT THE AUTHOR

...view details