ಕರ್ನಾಟಕ

karnataka

ಜೇಬಿನಲ್ಲಿ ಕೈ ಇಟ್ಟುಕೊಂಡ ರಕ್ಷಣಾ ಕಾರ್ಯದರ್ಶಿ: ಸೋಷಿಯಲ್​ ಮೀಡಿಯಾದಲ್ಲಿ ಟ್ರೋಲ್

By

Published : Jan 27, 2023, 6:54 PM IST

74ನೇ ಗಣರಾಜ್ಯೋತ್ಸವದ ನಿಮಿತ್ತ ಯುದ್ಧ ಸ್ಮಾರಕದಲ್ಲಿ ಮಡಿದವರಿಗೆ ನಮನ ಸಲ್ಲಿಸುತ್ತಿದ್ದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಜೊತೆಯಲ್ಲಿ ಕಾಣಿಸಿಕೊಂಡ ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರಮನೆ ಟೀಕೆಗೊಳಗಾಗಿದ್ದಾರೆ.

ಜೇಬಿನಲ್ಲಿ ಕೈ ಬಿಟ್ಟುಕೊಂಡ ರಕ್ಷಣಾ ಕಾರ್ಯದರ್ಶಿ: ಅಶಿಸ್ತಿನ ವರ್ತನೆಗೆ ಟ್ರೋಲ್ ಆದ ಗಿರಿಧರ್
defence-secretary-stands-out-amid-cds-force-chiefs-at-war-memorial-gets-trolled

ನವದೆಹಲಿ:ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ 74ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ, ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುತ್ತಿರುವ ಸಣ್ಣ ವೀಡಿಯೊ ತುಣುಕೊಂದನ್ನು ಮಾಜಿ ಸೇನಾ ಮುಖ್ಯಸ್ಥ ವೇದ್ ಪ್ರಕಾಶ್ ಮಲಿಕ್ ಇಂಟರ್ನೆಟ್​​ನಲ್ಲಿ ಶೇರ್ ಮಾಡಿದ್ದಾರೆ. 'ಒಬ್ಬನ ಹೊರತಾಗಿ' (There is a man apart) ಎಂದು ವೀಡಿಯೊಗೆ ಅವರು ಕ್ಯಾಪ್ಷನ್ ನೀಡಿದ್ದಾರೆ. ಮಾಜಿ ಸೇನಾ ಮುಖ್ಯಸ್ಥರು ಹಂಚಿಕೊಂಡ 22 ಸೆಕೆಂಡ್‌ಗಳ ಈ ಕ್ಲಿಪ್‌ನಲ್ಲಿ ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರಮನೆ ಅವರು ತಮ್ಮ ಎಡಗೈಯನ್ನು ತಮ್ಮ ಜೇಬಿನೊಳಗೆ ಇಟ್ಟುಕೊಂಡಿರುವುದು ಮತ್ತು ಎತ್ತಲೋ ನೋಡುತ್ತಿರುವುದು ಕಂಡುಬರುತ್ತದೆ.

ಆ ಸಮಯದಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಮತ್ತು ಮೂರು ಸೇನಾ ಪಡೆಗಳ ಮುಖ್ಯಸ್ಥರಾದ ಜನರಲ್ ಮನೋಜ್ ಪಾಂಡೆ (ಸೇನೆ), ಅಡ್ಮಿರಲ್ ಆರ್ ಹರಿ ಕುಮಾರ್ (ನೌಕಾಪಡೆ) ಮತ್ತು ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರೊಂದಿಗೆ ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರಮನೆ ನಿಂತಿರುವುದು ಕಾಣಿಸುತ್ತದೆ.

ನಾನಾ ರೀತಿಯಲ್ಲಿ ಟ್ವೀಟ್​:ಕನಿಷ್ಠ ಹುತಾತ್ಮ ಯೋಧರನ್ನಾದರೂ ಗೌರವಿಸಿ. ದಶಕಗಳ ಸೇವೆಯ ನಂತರವೂ ಒಬ್ಬರಿಗೆ ಯುದ್ಧ ಸ್ಮಾರಕದಲ್ಲಿ ಹೇಗೆ ನಡೆದುಕೊಳ್ಳಬೇಕೆಂಬುದು ಗೊತ್ತಿಲ್ಲ ಎಂದರೆ ಅವರಲ್ಲಿ ಏನೋ ಸಮಸ್ಯೆ ಇದೆ ಎಂದರ್ಥ ಎಂದು ಈ ವಿಡಿಯೋಗೆ ಟ್ವಿಟರ್​ನಲ್ಲಿ ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಅವರು ರಕ್ಷಣಾ ಕಾರ್ಯದರ್ಶಿ ಹೌದಲ್ಲವೇ? ಸಮಾರಂಭದಲ್ಲಿ ಅವರು ಆ ಸ್ಥಳವೇ ತಮ್ಮದು ಎನ್ನುವ ರೀತಿಯಲ್ಲಿ ಸುತ್ತಾಡುವುದನ್ನು ನಾನು ಗಮನಿಸಿದ್ದೇನೆ. ಇದು ಇಡೀ ಸಮಾರಂಭಕ್ಕೆ ಮಾಡಿದ ಅವಮಾನ. ಅಂಥ ಒಂದು ದುಃಖ ತೋರ್ಪಡಿಸುವ ಸಂದರ್ಭದಲ್ಲಿ ಅವರು ಸ್ವಲ್ಪ ಶಿಸ್ತು ಮತ್ತು ಸಜ್ಜನಿಕೆಯನ್ನು ಪ್ರದರ್ಶಿಸಬೇಕಿತ್ತು ಎಂದು ಮತ್ತೊಬ್ಬ ಟ್ವಿಟರ್ ಬಳಕೆದಾರರು ಬರೆದಿದ್ದಾರೆ.

ಮಿಲಿಟರಿ ಸಮಾರಂಭದಲ್ಲಿ ಜೇಬಿನೊಳಗೆ ಕೈ ಹಾಕಿ ನಿಲ್ಲುವುದು ಒಂದಿಷ್ಟೂ ಸ್ವೀಕಾರಾರ್ಹವಲ್ಲ ಎಂಬುದನ್ನು ರಕ್ಷಣಾ ಕಾರ್ಯದರ್ಶಿಗೆ ತಿಳಿವಳಿಕೆ ಮೂಡಿಸಲಾಗಿದೆ ಎಂದು ನಾನು ಭಾವಿಸುತ್ತೇನೆ. ಇಂಥವರನ್ನು ರಕ್ಷಣಾ ಸಚಿವಾಲಯದಲ್ಲಿ ನೇಮಕ ಮಾಡಿಕೊಳ್ಳುವ ಮುನ್ನ ಅವರನ್ನು ರಕ್ಷಣಾ ಸಚಿವಾಲಯದಲ್ಲಿ 1 ತಿಂಗಳ ಓರಿಯಂಟೇಶನ್ ತರಬೇತಿಗೆ ಒಳಪಡಿಸಬೇಕು. ಹೀಗೆ ಮಾಡಿದರೆ ಅವರು ಭವಿಷ್ಯದಲ್ಲಿ ಮುಜುಗರದ ಪರಿಸ್ಥಿತಿಗಳನ್ನು ಸೃಷ್ಟಿಸುವುದಿಲ್ಲ ಎಂದು ಟ್ವಿಟರ್ ಬಳಕೆದಾರೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೈನಿಕನು ತಾನು ಹೋದಲ್ಲೆಲ್ಲಾ ಗೌರವ ಪಡೆಯುತ್ತಾರೆ. ಒಬ್ಬ ಪೌರಕಾರ್ಮಿಕನು ಮುಂದೆ ಗೌರವ ಪಡೆಯುತ್ತಾರೆ ಮತ್ತು ಹಿಂದೆ ತಿರಸ್ಕಾರಕ್ಕೆ ಒಳಗಾಗುತ್ತಾರೆ ಎಂದು ಒಬ್ಬರು ಬರೆದಿದ್ದಾರೆ. ನನ್ನ ಅಭಿಪ್ರಾಯದಲ್ಲಿ ರಕ್ಷಣಾ ಕಾರ್ಯದರ್ಶಿಗೆ ಅವರ ತಪ್ಪು ನಡವಳಿಕೆಯ ಬಗ್ಗೆ ಅಲ್ಲಿರುವವರು ಎಚ್ಚರಿಸಬಹುದಿತ್ತು ಎಂದು ಮತ್ತೋರ್ವರು ಬರೆದಿದ್ದಾರೆ. ಸಶಸ್ತ್ರ ಪಡೆಗಳು ಪ್ರೋಟೋಕಾಲ್‌ ಸಿದ್ದ ಮಾಡಿಟ್ಟುಕೊಂಡಿರಬೇಕು ಮತ್ತು ಅದನ್ನು ಮುಂಚಿತವಾಗಿ ತಿಳಿಸಬೇಕು. ಅಧಿಕಾರಿಯೊಬ್ಬರನ್ನು ತಮಾಷೆ ಮಾಡುವ ಅಥವಾ ಕೀಳಾಗಿ ತೋರಿಸುವ ಅಗತ್ಯವಿಲ್ಲ. ಅವರು ತಮ್ಮದೇ ಆದ ಸಾಧನೆ ಮಾಡಿದ್ದಾರೆ ಮತ್ತು ದೇಶಕ್ಕೆ ಕೊಡುಗೆ ನೀಡಿದ್ದಾರೆ ಎಂದು ಮತ್ತೋರ್ವ ಬಳಕೆದಾರರು ಟ್ವಿಟರ್​ನಲ್ಲಿ ಬರೆದಿದ್ದು, ದೇಶದ ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರಮನೆ ದೇಶಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ ಎಂಬುದನ್ನು ಎತ್ತಿ ತೋರಿಸಿದ್ದಾರೆ.

ಇದನ್ನೂ ಓದಿ: ಮುಲಾಯಂ ಸಿಂಗ್​ರಿಗೆ ಪದ್ಮವಿಭೂಷಣ ನೀಡಿದ್ದು ಬಿಜೆಪಿಯ ಹೃದಯ ವೈಶಾಲ್ಯ: ಯುಪಿ ಸಚಿವ ಜೈವೀರ್ ಸಿಂಗ್

ABOUT THE AUTHOR

...view details