ಕರ್ನಾಟಕ

karnataka

ಮಕ್ಕಳ ಅಶ್ಲೀಲ ಚಿತ್ರಗಳ ಕೇಸ್: ತಮಿಳುನಾಡಿನಲ್ಲಿ ಓರ್ವನ ಸೆರೆ ಹಿಡಿದ ಸಿಬಿಐ

By

Published : Mar 18, 2023, 8:51 PM IST

Updated : Mar 18, 2023, 11:02 PM IST

ಆನ್​ಲೈನ್​ನಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳ ಪ್ರಸಾರಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ಆರೋಪಿಯನ್ನು ಸಿಬಿಐ ಬಂಧಿಸಿದೆ.

cbi-arrests-tamil-nadu-man-involved-in-child-sexual-abuse-material-case
Child Sexual Abuse Material Case: ತಮಿಳುನಾಡಿನಲ್ಲಿ ಓರ್ವನ ಸೆರೆ ಹಿಡಿದ ಸಿಬಿಐ

ಚೆನ್ನೈ (ತಮಿಳುನಾಡು): ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ವಿಷಯ (Child Sexual Abuse Material - CSAM) ಪ್ರಸಾರ ಪ್ರಕರಣದಲ್ಲಿ ಭಾಗಿಯಾಗಿದ್ದ ತಮಿಳುನಾಡಿನ ವ್ಯಕ್ತಿಯೊಬ್ಬನನ್ನು ಕೇಂದ್ರೀಯ ತನಿಖಾ ದಳ (ಸಿಬಿಐ)ದ ಅಧಿಕಾರಿಗಳು ಬಂಧಿಸಿದ್ದಾರೆ. ಮಕ್ಕಳ ಲೈಂಗಿಕ ದೌರ್ಜನ್ಯ ವಿಷಯ ರಚಿಸುವುದು, ಸಂಗ್ರಹಿಸುವುದು, ಹುಡುಕುವುದು, ಬ್ರೌಸಿಂಗ್ ಮಾಡುವುದು ಹಾಗೂ ಡೌನ್‌ಲೋಡ್ ಮಾಡುವುದಲ್ಲದೇ, ಅದರ ವಿನಿಮಯ ಮಾಡಿಕೊಳ್ಳುವುದು ಮತ್ತು ವಿತರಿಸುವಲ್ಲಿ ಆರೋಪಿ ತೊಡಗಿಸಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಮಕ್ಕಳ ಅಶ್ಲೀಲ ಚಿತ್ರದ ಜಾಲ; ಎನ್​ಆರ್​ಐ ವಿರುದ್ಧ ಪ್ರಕರಣ ದಾಖಲಿಸಿದ ಸಿಬಿಐ

ಕಳೆದ ವರ್ಷದ ಇಂಟರ್‌ನ್ಯಾಶನಲ್ ಚೈಲ್ಡ್ ಸೆಕ್ಸುವಲ್ ಶೋಷಣೆ (International Child Sexual Exploitation - ICSE) ಇಂಟರ್‌ಪೋಲ್‌ಗೆ ಭಾರತ ಸೇರಿಕೊಂಡಿತ್ತು. ಈ ಇಂಟರ್‌ಪೋಲ್​ನ ಡೇಟಾಬೇಸ್‌ನಿಂದ ಸಿಎಸ್‌ಎಎಂ ಚಿತ್ರಗಳು ಮತ್ತು ವಿಡಿಯೋಗಳನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಗಿತ್ತು. ಈ ಸಂಬಂಧ ತನಿಖೆ ನಡೆಯುತ್ತಿದ್ದು, ಇದೀಗ ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ನೆಲೆಸಿದ್ದ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಸಿಬಿಐ ಯಶಸ್ವಿಯಾಗಿದೆ.

ಈ ತನಿಖೆಯ ಭಾಗವಾಗಿ ಆರೋಪಿ ವಾಸವಿದ್ದ ಸ್ಥಳದಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ಈ ವೇಳೆ ದೋಷಾರೋಪಣೆಗೆ ಸಂಬಂಧಿಸಿದ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದೂ ಸಿಬಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದೇ ವೇಳೆ ಆರೋಪಿ ವಿರುದ್ಧ ಮಗುವಿನ ಮೇಲೆ ನಾಲ್ಕು ವರ್ಷಗಳ ಕಾಲ ಲೈಂಗಿಕ ಕಿರುಕುಳ ನೀಡಿದ ಆರೋಪ ಇದೆ. ಇಷ್ಟೇ ಅಲ್ಲ, ಇಬ್ಬರು ಅಪ್ರಾಪ್ತ ಸಂತ್ರಸ್ತರು ಮತ್ತು ಇತರ ಇತರ ಅಪ್ರಾಪ್ತ ವಯಸ್ಕರ ಮೇಲೆ ಲೈಂಗಿಕ ಕ್ರಿಯೆಗೆ ನಡೆಸುವಂತೆ ಒತ್ತಾಯಿಸಿದ್ದ ಎಂಬ ಆರೋಪ ಕೂಡ ಈತನ ಮೇಲಿದೆ.

2022ರಲ್ಲಿ ಇಂಟರ್‌ಪೋಲ್​ ಜನರಲ್ ಸಭೆಯ ನಿರ್ಣಯ: 2022ರಲ್ಲಿ ನವದೆಹಲಿಯಲ್ಲಿ ಭಾರತ ಆಯೋಜಿಸಿದ್ದ 90ನೇ ಇಂಟರ್‌ಪೋಲ್​ ಜನರಲ್ ಸಭೆಯಲ್ಲಿ ಆನ್‌ಲೈನ್ ಮಕ್ಕಳ ಲೈಂಗಿಕ ಶೋಷಣೆಯನ್ನು ಗುರುತಿಸುವ ಮತ್ತು ತನಿಖೆ ಮಾಡುವ ಕಾರ್ಯಕ್ಕೆ ರಾಷ್ಟ್ರಗಳ ನಡುವೆ ಪರಸ್ಪರ ಸಹಕಾರದ ಕುರಿತ ಪ್ರಮುಖ ನಿರ್ಣಯವನ್ನು ಅಂಗೀಕರಿಸಲಾಗಿತ್ತು. ಈ ನಿರ್ಣಯವು ಎಲ್ಲ ಇಂಟರ್‌ಪೋಲ್ ಸದಸ್ಯ ರಾಷ್ಟ್ರಗಳಿಗೆ ಮಕ್ಕಳ ರಕ್ಷಣೆಯೇ ಆದ್ಯತೆಯಾಗಿದೆ. ಆನ್‌ಲೈನ್ ಮಕ್ಕಳ ಲೈಂಗಿಕ ಶೋಷಣೆಯನ್ನು ನಿಯಂತ್ರಿಸಲು ಸಮನ್ವಯತೆಯ ಪ್ರಾಮುಖ್ಯತೆಯನ್ನು ಈ ನಿರ್ಣಯವು ಎತ್ತಿ ತೋರಿಸಿತ್ತು.

ವಿಶ್ವದಾದ್ಯಂತ ಮಕ್ಕಳ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಇಂತಹ ಅಪರಾಧ ಚಟುವಟಿಕೆಗಳ ಕಡಿವಾಣ ಬಗ್ಗೆಯೂ ಪ್ರಸ್ತಾಪಿಸಲಾಗಿತ್ತು. ಇಂಟರ್‌ಪೋಲ್ ಸೆಕ್ರೆಟರಿ ಜನರಲ್ ಜುರ್ಗೆನ್ ಸ್ಟಾಕ್, ಪ್ರತಿ ಮಗುವನ್ನು ಲೈಂಗಿಕ ಶೋಷಣೆ ಮತ್ತು ನಿಂದನೆಯಿಂದ ರಕ್ಷಿಸಬೇಕು. ಶೋಷಣೆಯ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡ ಸಂತ್ರಸ್ತರನ್ನು ರಕ್ಷಣೆ ಮಾಡುವಂತೆ ಆಗಬೇಕೆಂದು ಒತ್ತಿ ಹೇಳಿದ್ದರು. ಮಕ್ಕಳ ಶೋಷಣೆ ಮತ್ತು ಸಂಬಂಧಿತ ಅಪರಾಧಗಳನ್ನು ಪರಿಹರಿಸಲು ಸಂಘಟಿತ ಪ್ರಯತ್ನಗಳ ಅಗತ್ಯವನ್ನೂ ಅವರು ಉಲ್ಲೇಖಿಸಿದ್ದರು.

ಇದನ್ನೂ ಓದಿ:ಲಾಕ್​ಡೌನ್​ ಟೈಮಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳ ವೀಕ್ಷಣೆ ಹೆಚ್ಚಳ: ಗೂಗಲ್, ಟ್ವಿಟ್ಟರ್​, ವಾಟ್ಸ್​ಆ್ಯಪ್​​ಗೆ ನೋಟಿಸ್

Last Updated : Mar 18, 2023, 11:02 PM IST

ABOUT THE AUTHOR

...view details