ಕರ್ನಾಟಕ

karnataka

ಮಧ್ಯ ಪ್ರದೇಶ ಕಾಂಗ್ರೆಸ್​ ಮುಖಂಡನಿಂದ ಬ್ರಾಹ್ಮಣರ ಅವಹೇಳನ?

By

Published : Sep 21, 2022, 1:14 PM IST

ಮಧ್ಯ ಪ್ರದೇಶದ ಕಾಂಗ್ರೆಸ್ ಮುಖಂಡರೊಬ್ಬರು ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡಿರುವ ವೀಡಿಯೋ ವೈರಲ್ ಆಗಿದೆ. ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥರು ವೀಡಿಯೊದಲ್ಲಿ ಬ್ರಾಹ್ಮಣರ ವಿರುದ್ಧ ಮಾತನಾಡಿರುವುದು ಕಂಡು ಬಂದಿದೆ.

ಮಧ್ಯ ಪ್ರದೇಶ ಕಾಂಗ್ರೆಸ್​ ಮುಖಂಡನಿಂದ ಬ್ರಾಹ್ಮಣರ ಅವಹೇಳನ?
Madhya Pradesh Congress Media Department President KK Mishra was heard abusing Brahmin society on camera

ಭೋಪಾಲ್ (ಮಧ್ಯ ಪ್ರದೇಶ): ಮಧ್ಯ ಪ್ರದೇಶ ಕಾಂಗ್ರೆಸ್​ನ ಮಾಧ್ಯಮ ವಿಭಾಗದ ಅಧ್ಯಕ್ಷ ಕೆಕೆ ಮಿಶ್ರಾ ಬ್ರಾಹ್ಮಣರ ವಿರುದ್ಧ ಅವಾಚ್ಯವಾಗಿ ಮಾತನಾಡಿದ ದೃಶ್ಯಾವಳಿಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಬ್ರಾಹ್ಮಣರನ್ನು ಚಮಚಾ ಎಂದು ಕರೆದು ಮತ್ತಷ್ಟು ನಿಂದನೀಯ ಪದಗಳನ್ನು ಬಳಸಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಸದ್ಯ ಈ ವೀಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.

ಝಬುವಾ ಕಲೆಕ್ಟರ್ ಸೋಮೇಶ್ ಮಿಶ್ರಾ ಅವರನ್ನು ಪದಚ್ಯುತಗೊಳಿಸುವ ಬಗ್ಗೆ ಕೆಕೆ ಮಿಶ್ರಾ ಚರ್ಚಿಸುತ್ತಿದ್ದರು. ಇದಾದ ಬಳಿಕ ಕೆಲವರೊಂದಿಗೆ ಅನೌಪಚಾರಿಕ ಮಾತುಕತೆ ನಡೆಸುತ್ತಿದ್ದರು. ಈ ವೇಳೆ ಕೆ.ಕೆ. ಮಿಶ್ರಾ ಅವರಿಗೆ ಬ್ರಾಹ್ಮಣರಿಗೆ ಸಂಬಂಧಿಸಿದ ಪ್ರಶ್ನೆಯನ್ನು ಯಾರೋ ಕೇಳಿದಾಗ ಅದಕ್ಕೆ ಪ್ರತಿಕ್ರಿಯಿಸಿದ ಅವರು ಬ್ರಾಹ್ಮಣರನ್ನು ನಿಂದಿಸಿ ಬ್ರಾಹ್ಮಣರು ಬಿಜೆಪಿಯ ಚಮಚಾ ಎಂದು ಕರೆದಿದ್ದಾರೆ. ಮಿಶ್ರಾ ಅವರ ಈ ಹೇಳಿಕೆಯನ್ನು ಯಾರೋ ರೆಕಾರ್ಡ್​ ಮಾಡಿದ್ದು, ಇದೀಗ ವೈರಲ್ ಆಗಿದೆ.

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ಈ ಕುರಿತು ಟ್ವೀಟ್ ಮಾಡಿರುವ ಮಧ್ಯಪ್ರದೇಶ ಬಿಜೆಪಿ ಮಾಧ್ಯಮ ಉಸ್ತುವಾರಿ ಲೋಕೇಂದ್ರ ಪರಾಶರ್- ಕಾಂಗ್ರೆಸ್ ಮಾಧ್ಯಮ ವಿಭಾಗದ ಅಧ್ಯಕ್ಷ ಕೆಕೆ ಮಿಶ್ರಾ ಅವರ ಹೇಳಿಕೆ ಅತ್ಯಂತ ದುರದೃಷ್ಟಕರ. ನನ್ನ ಸಂಸ್ಕೃತಿಯು ಆ ವಿಡಿಯೋವನ್ನು ಶೇರ್ ಮಾಡಲು ಒಪ್ಪುತ್ತಿಲ್ಲ. ಕೆ.ಕೆ. ಮಿಶ್ರಾ ಅವರು ತಮ್ಮ ಕಿವಿ ಹಿಡಿದುಕೊಂಡು ಬ್ರಾಹ್ಮಣ ಸಮಾಜದ ಕ್ಷಮೆ ಕೇಳಬೇಕು ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ವೈರಲ್ ವೀಡಿಯೊ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಕೆ ಮಿಶ್ರಾ- ಇದು ನಕಲಿ ವಿಡಿಯೋ ಆಗಿದೆ. ಇದು ನನ್ನ ವಿರುದ್ಧ ಬಿಜೆಪಿಯ ಕೆಲವರು ನಡೆಸುತ್ತಿರುವ ಷಡ್ಯಂತ್ರ. ಆ ಸಂದರ್ಶನದ ವಿಡಿಯೋವನ್ನು ನನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದೇನೆ. ಆ ವಿಡಿಯೋದಲ್ಲಿ ನಾನು ಹೇಳಿದ ಪ್ರತಿಯೊಂದು ಮಾತನ್ನೂ ನೀವು ಸ್ಪಷ್ಟವಾಗಿ ಕೇಳಬಹುದು ಎಂದು ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details