ಕರ್ನಾಟಕ

karnataka

ISRO ಖಾಸಗೀಕರಣಗೊಳಿಸುವ ಯಾವುದೇ ಪ್ರಸ್ತಾಪ ಇಲ್ಲ: ಕೆ.ಶಿವನ್

By

Published : Aug 20, 2020, 3:24 PM IST

ಖಾಸಗಿ ಭಾಗವಹಿಸುವಿಕೆಗೆ ಅವಕಾಶ ಮಾಡಿಕೊಡುವ ಬಾಹ್ಯಾಕಾಶ ಸುಧಾರಣೆಗಳ ಮಹತ್ವವನ್ನು ಎತ್ತಿ ಹಿಡಿದ ಕೆ.ಶಿವನ್, ಇದರರ್ಥ ಇಸ್ರೋವನ್ನು ಖಾಸಗೀಕರಣಗೊಳಿಸಲಾಗುತ್ತಿದೆ ಎಂದಲ್ಲ. ಅದು ತಪ್ಪು ಕಲ್ಪನೆ. ಇಸ್ರೋ ಈಗ ಇರುವಂತೆಯೇ ತನ್ನ ಕೆಲಸವನ್ನು ಮುಂದುವರಿಸಲಿದೆ ಎಂಬ ಭರವಸೆ ನಾನು ನೀಡುತ್ತೇನೆ ಎಂದು ವೆಬಿನಾರ್​ವೊಂದರಲ್ಲಿಅವರು​ ಹೇಳಿದ್ದಾರೆ.

K Sivan
ಕೆ ಶಿವನ್

ಬೆಂಗಳೂರು: ಇಸ್ರೋವನ್ನು ಖಾಸಗೀಕರಣಗೊಳಿಸುವ ಯಾವುದೇ ಪ್ರಸ್ತಾಪವಿಲ್ಲ. ಅಲ್ಲದೆ ಬಾಹ್ಯಾಕಾಶ ಸುಧಾರಣೆಗಳು ಖಾಸಗೀಕರಣದ ಗುರಿಯನ್ನೂ ಹೊಂದಿಲ್ಲ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಕೆ.ಶಿವನ್ ಪುನರುಚ್ಛರಿಸಿದ್ದಾರೆ.

ಖಾಸಗಿ ಭಾಗವಹಿಸುವಿಕೆಗೆ ಅನುವು ಮಾಡಿಕೊಡುವ ಬಾಹ್ಯಾಕಾಶ ಸುಧಾರಣೆಗಳ ಮಹತ್ವವನ್ನು ಎತ್ತಿ ಹಿಡಿದ ಕೆ.ಶಿವನ್, ಇದರರ್ಥ ಇಸ್ರೋವನ್ನು ಖಾಸಗೀಕರಣಗೊಳಿಸಲಾಗುತ್ತಿದೆ ಎಂದಲ್ಲ. ಅದು ನಿಮ್ಮ ತಪ್ಪು ಕಲ್ಪನೆ. ಇಸ್ರೋ ಈಗ ಇರುವಂತೆಯೇ ತನ್ನ ಕೆಲಸವನ್ನು ಮುಂದುವರಿಸಲಿದೆ ಎಂಬ ಭರವಸೆ ನಾನು ನೀಡುತ್ತೇನೆ ಎಂದು ವೆಬಿನಾರ್​ವೊಂದರಲ್ಲಿ ಅವರು​ ಹೇಳಿದ್ದಾರೆ.

ಬಾಹ್ಯಾಕಾಶ ಕ್ಷೇತ್ರಗಳ ಮೇಲೆ ಇಸ್ರೋ ಎಂದಿಗೂ ತನ್ನ ಕಣ್ಣಿಟ್ಟಿರುತ್ತದೆ. ಸಾಮರ್ಥ್ಯ ವೃದ್ಧಿ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳುವಲ್ಲಿ ಇಸ್ರೋದ ಚಟುವಟಿಕೆಗಳು ಅದರ ಸಂಪನ್ಮೂಲಗಳನ್ನು ಉತ್ತಮವಾಗಿ ಬಳಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಿವನ್‌​ ಹೇಳಿದ್ದಾರೆ.

ಶಿವನ್​ ಅವರ ಇದೇ ದೃಷ್ಟಿಕೋನವನ್ನು ಪ್ರತಿಧ್ವನಿಸಿದ ಇಸ್ರೋ ವೈಜ್ಞಾನಿಕ ಕಾರ್ಯದರ್ಶಿ ಉಮಾಮಹೇಶ್ವರನ್, ಇಸ್ರೋವನ್ನು ಖಾಸಗೀಕರಣಗೊಳಿಸುವ ಯಾವುದೇ ಪ್ರಸ್ತಾಪವಿಲ್ಲ. ಕೆಲ ಬಾಹ್ಯಾಕಾಶ ಚಟುವಟಿಕೆಯಲ್ಲಿ ಖಾಸಗಿ ಭಾಗವಹಿಸುವಿಕೆಗೆ ಅವಕಾಶ ನೀಡುವ ಉದ್ದೇಶವಿದೆ. ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಂಸ್ಥೆ ತನ್ನ ಗಮನ ಕೇಂದ್ರೀಕರಿಸುತ್ತದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details