ಕರ್ನಾಟಕ

karnataka

ಇಸ್ರೋ ಐತಿಹಾಸಿಕ ಮೈಲಿಗಲ್ಲಿಗೆ ದಿನಗಣನೆ!

By

Published : Aug 18, 2019, 12:12 PM IST

ಚಂದ್ರಯಾನ-2 ಸದ್ಯದ ಸ್ಥಿತಿಯ ಕುರಿತಂತೆ ಟ್ವೀಟ್ ಮಾಡಿರುವ ಇಸ್ರೋ, ಇಲ್ಲಿಯಯವರೆಗಿನ ಪ್ರಯಾಣ ಅದ್ಭುತವಾಗಿತ್ತು. ಸೆಪ್ಟಂಬರ್​ 7ರಂದು ಚಂದಿರನ ಅಂಗಳಕ್ಕೆ ಇಳಿಯುವುದು ಖಚಿತ ಎಂದು ಟ್ವೀಟ್​ನಲ್ಲಿ ಹೇಳಿದೆ.

ಚಂದ್ರಯಾನ-2

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ನಿಗದಿಯಂತೆ ಸೆಪ್ಟೆಂಬರ್​ 7ರಂದು ಚಂದ್ರನ ಅಂಗಳದಲ್ಲಿ ಇಳಿಯಲಿದೆ ಎಂದು ಸಂಸ್ಥೆ ಖಚಿತಪಡಿಸಿದೆ.

ಚಂದ್ರಯಾನ-2 ಸದ್ಯದ ಸ್ಥಿತಿಯ ಕುರಿತಂತೆ ಟ್ವೀಟ್ ಮಾಡಿರುವ ಇಸ್ರೋ, ಇಲ್ಲಿಯಯವರೆಗಿನ ಪ್ರಯಾಣ ಅದ್ಭುತವಾಗಿತ್ತು. ಸೆಪ್ಟಂಬರ್​ 7ರಂದು ಚಂದಿರನ ಅಂಗಳದಲ್ಲಿ ಇಳಿಯುವುದು ಖಚಿತ ಎಂದು ಟ್ವೀಟ್​ನಲ್ಲಿ ಹೇಳಿದೆ.

ದಕ್ಷಿಣ ಧ್ರುವದಲ್ಲಿ ಸುರಕ್ಷಿತವಾಗಿ ಇಳಿಯುವುದು ಇಸ್ರೋ ಉದ್ದೇಶವಾಗಿದ್ದು, ಇದು ಸಫಲವಾದಲ್ಲಿ ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ನೂತನ ಮೈಲಿಗಲ್ಲು ಸ್ಥಾಪನೆಯಾಗಲಿದೆ.

ತಾಂತ್ರಿಕ ದೋಷದಿಂದ ಚಂದ್ರಯಾನ-2 ಉಡಾವಣೆ ಒಂದು ವಾರ ವಿಳಂಬವಾಗಿತ್ತು. ಉಡಾವಣೆ ಬಳಿಕ ಎಲ್ಲ ಹಂತಗಳನ್ನು ಯಶ್ವಸಿಯಾಗಿ ಮುಗಿಸಿದ್ದು, ಸುರಕ್ಷಿತ ಲ್ಯಾಂಡಿಂಗ್​ ವಿಜ್ಞಾನಿಗಳ ಮುಂದಿನ ಸವಾಲಾಗಿದೆ.

ABOUT THE AUTHOR

...view details