ಕರ್ನಾಟಕ

karnataka

ಅಯೋಧ್ಯೆ ಮಸೀದಿಗೆ ಸ್ವಾತಂತ್ರ್ಯ ಹೋರಾಟಗಾರನ ಹೆಸರಿಡಲು ನಿರ್ಧಾರ

By

Published : Jun 6, 2021, 12:59 PM IST

ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) ಅಯೋಧ್ಯೆಯ ಧನ್ನಿಪುರ ಗ್ರಾಮದಲ್ಲಿ ನಿರ್ಮಿಸುತ್ತಿರುವ ಮಸೀದಿ ಮತ್ತು ಆಸ್ಪತ್ರೆ ಕಟ್ಟಡಕ್ಕೆ ಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಮತ್ತು ಕ್ರಾಂತಿಕಾರಿ ಮೌಲ್ವಿ ಅಹ್ಮದುಲ್ಲಾ ಷಾ ಫೈಜಾಬಾದಿ ಅವರ ಹೆಸರನ್ನಿಡಲು ನಿರ್ಧರಿಸಿದೆ.

ಫೈಜಾಬಾದಿ
ಫೈಜಾಬಾದಿ

ಅಯೋಧ್ಯೆ: ಅಯೋಧ್ಯೆಯ ಧನ್ನಿಪುರ ಗ್ರಾಮದಲ್ಲಿ ನಿರ್ಮಾಣಗೊಳ್ಳಲಿರುವ ಮಸೀದಿ ಮತ್ತು ಆಸ್ಪತ್ರೆ ಕಟ್ಟಡಕ್ಕೆ 164 ವರ್ಷಗಳ ಹಿಂದೆ ನಿಧನರಾದ ಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಮತ್ತು ಕ್ರಾಂತಿಕಾರಿ ಮೌಲ್ವಿ ಅಹ್ಮದುಲ್ಲಾ ಷಾ ಫೈಜಾಬಾದಿ ಅವರ ಹೆಸರಿಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿದೆ.

ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್), ಮಸೀದಿ, ಆಸ್ಪತ್ರೆ, ವಸ್ತುಸಂಗ್ರಹಾಲಯ, ಸಂಶೋಧನಾ ಕೇಂದ್ರ ಮತ್ತು ಸಮುದಾಯ ಅಡುಗೆ ಮನೆ ಒಳಗೊಂಡ ಸಂಪೂರ್ಣ ಯೋಜನೆಯನ್ನು ಪ್ರಾರಂಭಿಸಲು ನಿರ್ಧರಿಸಿದೆ.

ಈ ಬಗ್ಗೆ ಮಾತನಾಡಿದ ಐಐಸಿಎಫ್ ಕಾರ್ಯದರ್ಶಿ ಅಥರ್ ಹುಸೇನ್, “ಫೈಜಾಬಾದಿ ಹುತಾತ್ಮರಾದ ದಿನದಂದು, ಇಡೀ ಯೋಜನೆಯ ಹೆಸರನ್ನು ಅವರ ಹೆಸರಿನಿಂದಲೇ ನಿರ್ಮಾಣ ಮಾಡಲು ನಿರ್ಧರಿಸಿದ್ದೇವೆ. ಜನವರಿಯಲ್ಲಿ, ನಾವು ಸಂಶೋಧನಾ ಕೇಂದ್ರವನ್ನು ಹಿಂದೂ-ಮುಸ್ಲಿಂ ಸಹೋದರತ್ವದ ಪ್ರತಿಮೆಯಾಗಿದ್ದ ಮೌಲ್ವಿ ಫೈಜಾಬಾದಿಗೆ ಅರ್ಪಿಸಿದ್ದೇವೆ” ಎಂದರು.

ಬ್ರಿಟಿಷ್ ಏಜೆಂಟರಿಂದ ಶಿರಚ್ಛೇದನಗೊಂಡ ಬಳಿಕ ಅವರ ದೇಹ ಮತ್ತು ತಲೆಯನ್ನು ಜನರು ಎರಡು ವಿಭಿನ್ನ ಸ್ಥಳಗಳಲ್ಲಿ ಹೂಳಿದರು ಎಂದು ಹುಸೈನ್ ಹೇಳಿದರು.

ಇನ್ನು ಸಂಶೋಧಕ ಮತ್ತು ಇತಿಹಾಸಕಾರ ರಾಮ್ ಶಂಕರ್ ತ್ರಿಪಾಠಿ ಮಾತನಾಡಿ, “ಅವರ ಧಾರ್ಮಿಕ ಐಕ್ಯತೆ ಮತ್ತು ಫೈಜಾಬಾದ್‌ನ ಗಂಗಾ-ಜಮುನಿ ಸಂಸ್ಕೃತಿಯ ಸಾರಾಂಶವಾಗಿದ್ದರು. 1857ರ ದಂಗೆಯಲ್ಲಿ, ಕಾನ್ಪುರದ ನಾನಾ ಸಾಹೇಬ್, ಅರಾಹ್‌ನ ಕುನ್ವರ್ ಸಿಂಗ್ ಅವರ ಜೊತೆ ಸೇರಿ ಮೌಲ್ವಿ ಅಹ್ಮದುಲ್ಲಾ ಷಾ ಫೈಜಾಬಾದಿ ಸಹ ಹೋರಾಟ ನಡೆಸಿದರು” ಎಂದರು.

2019ರ ನವೆಂಬರ್‌ನಲ್ಲಿ ಸುಪ್ರೀಂಕೋರ್ಟ್‌ ನೀಡಿದ ತೀರ್ಪಿನಲ್ಲಿ ಮಸೀದಿ ನಿರ್ಮಾಣಕ್ಕೆ ಐದು ಎಕರೆ ಭೂಮಿಯನ್ನು ನೀಡಲಾಯಿತು. ಅದರಲ್ಲಿ ಸಮಿತಿಯು ಮಸೀದಿ ಮತ್ತು ಆಸ್ಪತ್ರೆಯನ್ನು ನಿರ್ಮಿಸುತ್ತಿದೆ.

ಮೊಘಲ್ ಚಕ್ರವರ್ತಿ ಬಾಬರ್ ಅವರ ಹೆಸರನ್ನು ಮಸೀದಿಗೆ ಸೂಚಿಸದಿರಲು ಸುನ್ನಿ ವಕ್ಫ್ ಮಂಡಳಿ ರಚಿಸಿದ ಐಐಸಿಎಫ್ ಟ್ರಸ್ಟ್ ನಿರ್ಧಾರ ತೆಗೆದುಕೊಂಡಿತ್ತು.

ABOUT THE AUTHOR

...view details