ಕರ್ನಾಟಕ

karnataka

ವಿವಾದಕ್ಕೆ ಕಾರಣವಾದ ಆಗ್ರಾ ಕೌನ್ಸಿಲರ್​ಗಳ ಅಧ್ಯಯನ ಪ್ರವಾಸ..

By

Published : Mar 21, 2021, 5:24 PM IST

ಕೌನ್ಸಿಲರ್‌ಗಳ ಪ್ರವಾಸವು ಶುಕ್ರವಾರ ಆಗ್ರಾಗೆ ಮರಳಬೇಕಿತ್ತು. ಆಗ್ರಾಗೆ ಹಿಂತಿರುಗಿದಾಗ, ಹೊಸ ವಿವಾದವೊಂದು ಹೊರಹೊಮ್ಮಿತು. ಅದರ ನಂತರ ಇಡೀ ಪುರಸಭೆಯಲ್ಲಿ ಗೊಂದಲ ಸೃಷ್ಟಿಯಾಗಿದೆ..

agra municipal corporation
ವಿವಾದಕ್ಕೆ ಎಡೆಯಾದ ಆಗ್ರಾ ಕೌನ್ಸಿಲರ್​ಗಳ ಅಧ್ಯಯನ ಪ್ರವಾಸ..

ಆಗ್ರಾ(ಉತ್ತರಪ್ರದೇಶ) :ಮೇಯರ್ ಅವರಿಂದಲೇ ಚಾಲನೆಯಾದ ಪುರಸಭೆಯ ಕೌನ್ಸಿಲರ್​ಗಳ ಅಧ್ಯಯನ ಪ್ರವಾಸವು ಈಗ ವಿವಾದಕ್ಕೆ ಸಿಲುಕಿದೆ. ಅಂಡಮಾನ್ ಮತ್ತು ನಿಕೋಬಾರ್ ನಾಲ್ಕು ದಿನಗಳ ಪ್ರವಾಸದ ಕೊನೆಗೆ ಶುಕ್ರವಾರ ವಿವಾದ ಭುಗಿಲೆದ್ದಿದೆ.

ಬಿಎಸ್ಪಿಯ ಮೂವರು ಮಹಿಳಾ ಕೌನ್ಸಿಲರ್​ಗಳು ಪ್ರವಾಸಕ್ಕೆ ಹೋಗಬೇಕಿತ್ತು ಎಂದು ಹೇಳಲಾಗುತ್ತಿದೆ. ಆದರೆ, ಅವರ ಬದಲಾಗಿ ಅವರ ಪತಿಯಂದಿರು ನಿಯಮಗಳನ್ನು ಧಿಕ್ಕರಿಸಿ ಪ್ರವಾಸಕ್ಕೆ ಹೋಗಿದ್ದಾರೆ. ಇದಕ್ಕಾಗಿ ಕೌನ್ಸಿಲರ್‌ಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಮೇಯರ್​ಗೆ ದೂರು ನೀಡಲಾಗಿದೆ.

ಪ್ರವಾಸದ ಜವಾಬ್ದಾರಿಯನ್ನು ನೀಡಿದ ಅಧಿಕಾರಿಗಳ ಮೇಲೂ ನಿರ್ಲಕ್ಷ್ಯದ ಆರೋಪ ಹೊರಿಸಲಾಗಿದೆ ಮತ್ತು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ. ಪ್ರತಿ ವರ್ಷ ಪುರಸಭೆಯ ಕೌನ್ಸಿಲರ್‌ಗಳನ್ನು ಅಧ್ಯಯನ ಪ್ರವಾಸಕ್ಕೆಂದು ಯಾವುದೇ ರಾಜ್ಯ ಅಥವಾ ದೇಶಕ್ಕೆ ಕಳುಹಿಸಲಾಗುತ್ತದೆ.

ಈ ವೇಳೆ ಇತರ ರಾಜ್ಯಗಳಲ್ಲಿ ಪುರಸಭೆ ನಿಗಮವು ನಡೆಸುತ್ತಿರುವ ಹೊಸ ಸೌಲಭ್ಯಗಳ ಬಗ್ಗೆ ಕೌನ್ಸಿಲರ್‌ಗಳಿಗೆ ತಿಳಿಸಲಾಗುತ್ತದೆ. ಇದರಿಂದ ಕೌನ್ಸಿಲರ್‌ಗಳು ತಮ್ಮ ನಗರದಲ್ಲಿ ಇಂತಹ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಬಹುದು. ಇದಕ್ಕಾಗಿ ಪುರಸಭೆ ಈ ಬಾರಿ 80 ಕೌನ್ಸಿಲರ್‌ಗಳನ್ನು ಅಧ್ಯಯನ ಪ್ರವಾಸಕ್ಕೆ ಕಳುಹಿಸಿತ್ತು.

ಇದನ್ನೂ ಓದಿ:ಖ್ಯಾತ ಒಡಿಸ್ಸಿ ನರ್ತಕಿ ಲಕ್ಷ್ಮಿಪ್ರಿಯ ಮೋಹಪಾತ್ರ ವಿಧಿವಶ

ಕೌನ್ಸಿಲರ್‌ಗಳ ಪ್ರವಾಸವು ಮಾರ್ಚ್ 14ರಂದು ಆಗ್ರಾದಿಂದ ಆರಂಭವಾಗಿತ್ತು. ನಂತರ ಕೌನ್ಸಿಲರ್‌ಗಳು ಸೆಲ್ಯುಲಾರ್ ಜೈಲು, ಪೋರ್ಟ್ ಬ್ಲೇರ್ ಕಾರ್ವಿನ್ ಬೀಚ್, ಹ್ಯಾವ್ಲಾಕ್ ಬೀಚ್, ಆರ್ಥೋ ಪಾಲಿಗಲಾಜಿಕಲ್ ಮ್ಯೂಸಿಯಂ, ಹ್ಯಾವ್ಲಾಕ್ ದ್ವೀಪ, ಎಲಿಫೆಂಟ್ ಬೀಚ್ ಮತ್ತು ರಾಧನಗರ ಬೀಚ್, ಸೌಂಡ್ ಅಂಡ್ ಲೈಟ್ ಶೋ ಮತ್ತು ಅಂಡಮಾನ್‌ನ ಮುಖ್ಯ ಮಾರುಕಟ್ಟೆಗಳಿಗೆ ಭೇಟಿ ನೀಡಿದರು.

ಕೌನ್ಸಿಲರ್‌ಗಳ ಪ್ರವಾಸವು ಶುಕ್ರವಾರ ಆಗ್ರಾಗೆ ಮರಳಬೇಕಿತ್ತು. ಆಗ್ರಾಗೆ ಹಿಂತಿರುಗಿದಾಗ, ಹೊಸ ವಿವಾದವೊಂದು ಹೊರಹೊಮ್ಮಿತು. ಅದರ ನಂತರ ಇಡೀ ಪುರಸಭೆಯಲ್ಲಿ ಗೊಂದಲ ಸೃಷ್ಟಿಯಾಗಿದೆ.

ABOUT THE AUTHOR

...view details