ಕರ್ನಾಟಕ

karnataka

ದೇಶದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 2670ಕ್ಕೆ ಇಳಿಕೆ: 173 ಹೊಸ ಸೋಂಕಿತರು ಪತ್ತೆ

By

Published : Jan 2, 2023, 3:37 PM IST

ದೇಶದಲ್ಲಿ ಸೋಮವಾರ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 2,670ಕ್ಕೆ ಇಳಿಕೆಯಾಗಿದೆ. ಅಲ್ಲದೇ ಇಂದು 173 ಹೊಸ ಕೋವಿಡ್​​ ಪ್ರಕರಣಗಳು ವರದಿಯಾಗಿವೆ.

ಕೋವಿಡ್
ಕೋವಿಡ್

ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ - ಅಂಶಗಳ ಪ್ರಕಾರ, ಸೋಮವಾರ ಭಾರತದಲ್ಲಿ 173 ಹೊಸ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 2,670ಕ್ಕೆ ಇಳಿದಿದೆ.

ಕಳೆದ 24 ಗಂಟೆಗಳಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 4.46 ಕೋಟಿ (4,46,78,822)ಗೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 5,30,707 ರಷ್ಟಿದೆ. ಎರಡು ಜನ ಕೊರೊನಾಗೆ ಬಲಿಯಾಗಿದ್ದಾರೆ. ಒಂದು ಪ್ರಕರಣ ಕೇರಳದಿಂದ ಮತ್ತೊಂದು ಉತ್ತರಾ ಖಂಡದಿಂದ ವರದಿಯಾಗಿದೆ. ನಿತ್ಯದ ಪಾಸಿವಿಟಿ ದರವು ಶೇಕಡಾ 0.19 ಕ್ಕೆ ರಷ್ಟಿದ್ದು, ವಾರದ ಪಾಸಿವಿಟಿ ದರ ಶೇಕಡಾ 0.14 ರಷ್ಟಿದೆ ಎಂದು ಅದು ಹೇಳಿದೆ. ಕಳೆದ 24 ಗಂಟೆಗಳಲ್ಲಿ 92,955 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ

ಇದನ್ನೂ ಓದಿ:ಮೂಗಿನ ಮೂಲಕ ಹಾಕುವ ಇಂಕೋವ್ಯಾಕ್ಸ್​ ಕೊರೊನಾ ಲಸಿಕೆಗೆ ದರ ನಿಗದಿ.. ದರ ಎಷ್ಟು ಗೊತ್ತಾ?

ಸಚಿವಾಲಯದ ವೆಬ್‌ಸೈಟ್ ಪ್ರಕಾರ, ಸಕ್ರಿಯ ಪ್ರಕರಣಗಳ ಸಂಖ್ಯೆ ಒಟ್ಟು ಸೋಂಕುಗಳಲ್ಲಿ 0.01 ಪ್ರತಿಶತವನ್ನು ಒಳಗೊಂಡಿದೆ. ಆದರೆ, ರಾಷ್ಟ್ರೀಯ ಚೇತರಿಕೆ ದರವು 98.80 ಪ್ರತಿಶತಕ್ಕೆ ಹೆಚ್ಚಾಗಿದೆ.

24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಕೋವಿಡ್ ಕೇಸ್‌ಲೋಡ್‌ನಲ್ಲಿ 36 ಪ್ರಕರಣಗಳ ಇಳಿಕೆ ದಾಖಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 4,41,45,445 ಕ್ಕೆ ಏರಿಕೆಯಾಗಿದೆ. ಆದರೆ, ಪ್ರಕರಣದ ಸಾವಿನ ಪ್ರಮಾಣವು ಶೇಕಡಾ 1.19 ರಷ್ಟಿದೆ ಎಂದು ಅದು ಹೇಳಿದೆ.

ದೇಶದಲ್ಲಿ ಇದುವರೆಗೆ 220.10 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ ಎಂದು ಸಚಿವಾಲಯ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಭಾರತದ COVID-19 ಸಂಖ್ಯೆಯು ಆಗಸ್ಟ್ 7, 2020 ರಂದು 20 ಲಕ್ಷದ ಗಡಿ ದಾಟಿದೆ. ಆಗಸ್ಟ್ 23 ರಂದು 30 ಲಕ್ಷ, ಸೆಪ್ಟೆಂಬರ್ 5 ರಂದು 40 ಲಕ್ಷ ಮತ್ತು ಸೆಪ್ಟೆಂಬರ್ 16 ರಂದು 50 ಲಕ್ಷ. ಸೆಪ್ಟೆಂಬರ್ 28 ರಂದು 60 ಲಕ್ಷ, ಅಕ್ಟೋಬರ್ 11 ರಂದು 70 ಲಕ್ಷ, ಅಕ್ಟೋಬರ್ 29 ರಂದು 80 ಲಕ್ಷ, ನವೆಂಬರ್ 20 ರಂದು 90 ಲಕ್ಷ ಮತ್ತು ಡಿಸೆಂಬರ್ 19, 2020 ರಂದು ಒಂದು ಕೋಟಿ ಗಡಿ ಮೀರಿದೆ.

ಇದನ್ನೂ ಓದಿ:ವಿದೇಶದಿಂದ ಶಿವಮೊಗ್ಗಕ್ಕೆ ಬಂದ ವ್ಯಕ್ತಿಗೆ ಕೋವಿಡ್ ಪಾಸಿಟಿವ್: ಇಬ್ಬರು ಹೋಂ ಐಸೋಲೇಷನ್

ಮೇ 4 ರಂದು ಎರಡು ಕೋಟಿ ದಾಟಿತ್ತು. ಜೂನ್ 23, 2021 ರಂದು ಮೂರು ಕೋಟಿ ಪ್ರಕರಣಗಳು ಮತ್ತು ಈ ವರ್ಷದ ಜನವರಿ 25 ರಂದು ನಾಲ್ಕು ಕೋಟಿ ಪ್ರಕರಣಗಳು ದಾಖಲಾಗಿದ್ದವು. ದೇಶದಲ್ಲಿ ಇದುವರೆಗೂ 200 ಕೋಟಿಗೂ ಹೆಚ್ಚು ಡೋಸ್​ ಲಸಿಕೆಗಳನ್ನು ಜನರಿಗೆ ನೀಡಲಾಗಿದೆ. ಈ ನಡುವೆ ಎಲ್ಲರೂ ಬೂಸ್ಟರ್​ ಡೋಸ್​ ಪಡೆಯುವಂತೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಕೊರೊನಾ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಬೂಸ್ಟರ್​ ಡೋಸ್​ಗೆ ಮುಗಿ ಬೀಳುತ್ತಿದ್ದಾರೆ.

ABOUT THE AUTHOR

...view details