ETV Bharat / state

ವಿದೇಶದಿಂದ ಶಿವಮೊಗ್ಗಕ್ಕೆ ಬಂದ ವ್ಯಕ್ತಿಗೆ ಕೋವಿಡ್ ಪಾಸಿಟಿವ್: ಇಬ್ಬರು ಹೋಂ ಐಸೋಲೇಷನ್

author img

By

Published : Dec 26, 2022, 11:45 AM IST

Updated : Dec 26, 2022, 12:28 PM IST

ವಿದೇಶದಿಂದ ಶಿವಮೊಗ್ಗಕ್ಕೆ ಬಂದ ವ್ಯಕ್ತಿಗೆ ಕೊರೊನಾ - ಶಿವಮೊಗ್ಗದಲ್ಲಿ ಒಂದು ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆ - ಹೋಂ​ ಐಸೋಲೇಷನ್​ಗೆ ಒಳಗಾದ ಸೋಂಕಿತ

covid
ಕೋವಿಡ್

ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಹಲವು ತಿಂಗಳ‌ ನಂತರ ಪ್ರಥಮ ಕೋವಿಡ್ 19 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಕಳೆದ 4 ದಿನಗಳ ಹಿಂದೆ ವಿದೇಶದಿಂದ ಬಂದ ವ್ಯಕ್ತಿಯಲ್ಲಿ‌ ಸೋಂಕು ಕಂಡುಬಂದಿದ್ದು, ಹೋಮ್​ ಐಸೋಲೇಷನ್​ಗೆ ಒಳಪಡಿಸಲಾಗಿದೆ.

ಶಿವಮೊಗ್ಗ ಮೂಲದ ವ್ಯಕ್ತಿ ವಿದೇಶದಿಂದ ಬಂದಾಗ ಬೆಂಗಳೂರು ಏರ್​ಪೋರ್ಟ್​ನಲ್ಲಿ ಪರೀಕ್ಷೆಗೆ ಒಳಪಡಿಸಲಾಯಿತು. ಅವರು ಜಿಲ್ಲೆ ತಲುಪಿದ ನಂತರ ಪಾಸಿಟಿವ್ ಎಂದು ವರದಿ ಬಂದಿದ್ದು, ಸೋಂಕಿತನ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.

ಉಳಿದಂತೆ ಜಿಲ್ಲೆಯಲ್ಲಿ 34 ಜನರನ್ನು ಪರೀಕ್ಷಿಸಿದಾಗ ಇಬ್ಬರಲ್ಲಿ ಸೋಂಕಿನ ಗುಣಲಕ್ಷಣಗಳು ಕಂಡು ಬಂದಿದ್ದು, ಅವರನ್ನು ಹೋಂ ಐಸೋಲೇಷನ್​ನಲ್ಲಿ ಇಡಲಾಗಿದೆ. ಈಗಾಗಲೇ ಜಿಲ್ಲಾ‌ ಮೆಗ್ಗಾನ್ ಭೋದನಾಸ್ಪತ್ರೆಯಲ್ಲಿ ಕೋವಿಡ್ ವಾರ್ಡ್​ಗಳನ್ನು ತೆರೆಯಲಾಗಿದೆ.

ಇದನ್ನೂ ಓದಿ: ಭಾರತದಲ್ಲಿಂದು 196 ಹೊಸ ಕೋವಿಡ್​ ಕೇಸ್​ ಪತ್ತೆ.. ಒಮಿಕ್ರಾನ್ ಬಿಎಫ್‌.7 ಕುರಿತು ಎಚ್ಚರ

Last Updated :Dec 26, 2022, 12:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.