ಕರ್ನಾಟಕ

karnataka

17 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ, ಶಿಕ್ಷಕನ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ

By

Published : Nov 12, 2021, 5:39 PM IST

ಪದೇಪದೆ ಶಿಕ್ಷಕನ ಲೈಂಗಿಕ(sexually assault) ಕಿರುಕುಳದಿಂದಾಗಿ ಆಕೆ ಒತ್ತಡಕ್ಕೊಳಗಾಗಿದ್ದಳು. ಅದೇ ಕಾರಣಕ್ಕಾಗಿ ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ಆರೋಪ ಮಾಡಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ವಿದ್ಯಾರ್ಥಿನಿ ಸೊಸೈಡ್ ನೋಟ್​ ಬರೆದಿಟ್ಟಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ..

17 year old girl dies by suicide
17 year old girl dies by suicide

ಕೊಯಮತ್ತೂರು(ತಮಿಳುನಾಡು) :12ನೇ ತರಗತಿಯಲ್ಲಿ(17 year old girl dies) ವ್ಯಾಸಂಗ ಮಾಡ್ತಿದ್ದ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ. ಇದರ ಬೆನ್ನಲ್ಲೇ ಕಾಲೇಜ್​ ಶಿಕ್ಷಕನ ವಿರುದ್ಧ ಲೈಂಗಿಕ(sexual assault by teacher) ದೌರ್ಜನ್ಯದ ಗಂಭೀರ ಆರೋಪ ಕೇಳಿ ಬಂದಿದೆ.

ಯಾರು ಇಲ್ಲದ ಸಂದರ್ಭದಲ್ಲಿ ಮನೆಯಲ್ಲಿ ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದು, ಆಕೆಯ ಪೋಷಕರು ಮತ್ತು ಸ್ನೇಹಿತರು ಶಾಲಾ ಶಿಕ್ಷಕನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಪದೇಪದೆ ಶಿಕ್ಷಕನ ಲೈಂಗಿಕ(sexually assault) ಕಿರುಕುಳದಿಂದಾಗಿ ಆಕೆ ಒತ್ತಡಕ್ಕೊಳಗಾಗಿದ್ದಳು. ಅದೇ ಕಾರಣಕ್ಕಾಗಿ ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ಆರೋಪ ಮಾಡಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ವಿದ್ಯಾರ್ಥಿನಿ ಸೊಸೈಡ್ ನೋಟ್​ ಬರೆದಿಟ್ಟಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ವಿದ್ಯಾರ್ಥಿನಿ ಪೋಷಕರು, ಕಳೆದ ಕೆಲ ತಿಂಗಳ ಹಿಂದೆ ಕಾಲೇಜು ಬದಲಾಯಿಸುವಂತೆ ಕೇಳಿಕೊಂಡಿದ್ದಳು.

ಹೀಗಾಗಿ, ನಾವು ಬೇರೆ ಕಾಲೇಜ್​ಗೆ ಪ್ರವೇಶಾತಿ ಪಡೆದುಕೊಂಡಿದ್ದೆವು. ಆದರೆ, ಮೊಬೈಲ್​ ಮೂಲಕ ಶಿಕ್ಷಕ ತನ್ನ ದುರ್ವತನೆ ಮುಂದುವರೆಸಿದ್ದ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿರಿ:ಭೀಕರ ರಸ್ತೆ ಅಪಘಾತ.. ಸ್ಥಳದಲ್ಲೇ ಸಾವನ್ನಪ್ಪಿದ ದಂಪತಿ.. ಅಚ್ಚರಿಯ ರೀತಿ ಮಕ್ಕಳು ಸೇಫ್​..

ವಿದ್ಯಾರ್ಥಿನಿ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿರುವ ಪೋಷಕರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಈಗಾಗಲೇ ಶಿಕ್ಷಕನ ವಿರುದ್ಧ ಐಪಿಸಿ 306(IPC 306) ಸೇರಿದಂತೆ ವಿವಿಧ ಸೆಕ್ಷನ್​ಗಳ ಅಡಿ ದೂರು ದಾಖಲು ಮಾಡಿಕೊಳ್ಳಲಾಗಿದೆ.

ABOUT THE AUTHOR

...view details