ETV Bharat / bharat

ಭೀಕರ ರಸ್ತೆ ಅಪಘಾತ.. ಸ್ಥಳದಲ್ಲೇ ಸಾವನ್ನಪ್ಪಿದ ದಂಪತಿ.. ಅಚ್ಚರಿಯ ರೀತಿ ಮಕ್ಕಳು ಸೇಫ್​..

author img

By

Published : Nov 12, 2021, 3:57 PM IST

Updated : Nov 12, 2021, 4:06 PM IST

ರಾಜಸ್ಥಾನದ ಬುಂಡಿಯ ದೆಹಲಿ-ಹರಿದ್ವಾರ(delhi-haridwar highway road accident) ಹೆದ್ದಾರಿಯಲ್ಲಿ ಈ ರಸ್ತೆ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಟ್ರಾಲಿವೊಂದು ಕಾರಿಗೆ ಡಿಕ್ಕಿ ಹೊಡೆದಿರುವ ಪರಿಣಾಮ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ..

COUPLE DIED IN ROAD ACCIDENT IN BUNDI
COUPLE DIED IN ROAD ACCIDENT IN BUNDI

ಬುಂಡಿ(ರಾಜಸ್ಥಾನ) : ಭೀಕರ ರಸ್ತೆ(Road accident)ಅಪಘಾತವೊಂದರಲ್ಲಿ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಬುಂಡಿಯಲ್ಲಿ ನಡೆದಿದೆ. ಆದರೆ, ಕಾರಿನಲ್ಲಿದ್ದ ಇಬ್ಬರು ಮಕ್ಕಳು ಅಚ್ಚರಿಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಾಜಸ್ಥಾನದ ಬುಂಡಿಯ ದೆಹಲಿ-ಹರಿದ್ವಾರ ಹೆದ್ದಾರಿಯಲ್ಲಿ ಈ ರಸ್ತೆ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಟ್ರಾಲಿವೊಂದು ಕಾರಿಗೆ ಡಿಕ್ಕಿ ಹೊಡೆದಿರುವ ಪರಿಣಾಮ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿರಿ: Punjab Vidhansabha Election 2022 : ಮೊದಲ ಲಿಸ್ಟ್​ ರಿಲೀಸ್ ಮಾಡಿದ ಆಮ್​ ಆದ್ಮಿ

ಲಭ್ಯವಾಗಿರುವ ಮಾಹಿತಿ ಪ್ರಕಾರ ನಿತೇಶ್ ತೊಟ್ಲಾ ತನ್ನ ಹೆಂಡತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ನಿಯಂತ್ರಣ ಕಳೆದುಕೊಂಡ ಟ್ರಾಲಿವೊಂದು ಕಾರಿಗೆ ಡಿಕ್ಕಿ ಹೊಡೆದಿದೆ.

ಪರಿಣಾಮ ಸ್ಥಳದಲ್ಲೇ ನಿತೇಶ್ ಹಾಗೂ ಆತನ ಪತ್ನಿ ಸಾವನ್ನಪ್ಪಿದ್ದಾರೆ. ಉಳಿದಂತೆ ಇಬ್ಬರು ಮಕ್ಕಳು ಸಣ್ಣಪುಟ್ಟ ಗಾಯದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

Last Updated : Nov 12, 2021, 4:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.