ಕರ್ನಾಟಕ

karnataka

ಕೇರಳದಲ್ಲಿ 12,000 ಕೋಟಿ ರೂ ಮೌಲ್ಯದ ಮಾದಕ ವಸ್ತು ಜಪ್ತಿ! ಪಾಕ್ ಪ್ರಜೆ ಎನ್‌ಸಿಬಿ ವಶಕ್ಕೆ

By

Published : May 14, 2023, 7:04 AM IST

ನೌಕಾಪಡೆ ಹಾಗೂ ಮಾದಕ ವಸ್ತು ನಿಗ್ರಹ ಘಟಕ ಕೇರಳದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಸುಮಾರು 12 ಸಾವಿರ ಕೋಟಿ ರೂಪಾಯಿ ಮೌಲ್ಯದ ಮೆಟಾಂಪೆಟಮೈನ್‌ ಮಾದಕ ವಸ್ತುವನ್ನು ಜಪ್ತಿ ಮಾಡಿಕೊಂಡಿದೆ.

drugs
ಮಾದಕ ವಸ್ತು

ನವದೆಹಲಿ/ಕೊಚ್ಚಿ:ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮತ್ತು ಭಾರತೀಯ ನೌಕಾಪಡೆ ಅಧಿಕಾರಿಗಳು ಶನಿವಾರ ಜಂಟಿ ಕಾರ್ಯಾಚರಣೆ ನಡೆಸಿ 12,000 ಕೋಟಿ ರೂ ಮೌಲ್ಯದ ಸುಮಾರು 2,500 ಕೆಜಿಗೂ ಅಧಿಕ ಶುದ್ಧತೆಯ ಮೆಥಾಂಫೆಟಮೈನ್ (ಮಾದಕವಸ್ತು) ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಶಂಕಿತ ಪಾಕಿಸ್ತಾನಿ ಪ್ರಜೆಯನ್ನು ವಶಕ್ಕೆ ಪಡೆಯಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ.

ಎನ್‌ಸಿಬಿ ನೀಡಿದ ಮಾಹಿತಿ ಪ್ರಕಾರ, ಭಾರತೀಯ ಅಧಿಕಾರಿಗಳಿಗೆ ಹಡಗಿನಲ್ಲಿ ಅಕ್ರಮವಾಗಿ ಮಾದಕವಸ್ತು ಅಡಗಿಸಿಟ್ಟು ಸಾಗಣೆ ಮಾಡುತ್ತಿರುವ ಕುರಿತು ಮಾಹಿತಿ ಪಡೆದು ಕಟ್ಟೆಚ್ಚರ ವಹಿಸಿದ್ದರು. ಹಡುಗಗಳ ತಪಾಸಣೆ ನಡೆಸಿದ ವೇಳೆ ಅಪಾರ ಪ್ರಮಾಣದ ಡ್ರಗ್ಸ್​ ಪತ್ತೆಯಾಗಿತ್ತು. ಇದನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಪೆಡ್ಲರ್‌ಗಳು ಅಫ್ಘಾನಿಸ್ತಾನದಿಂದ ಭಾರತಕ್ಕೆ ಸಮುದ್ರ ಮಾರ್ಗವಾಗಿ ಮಾದಕ ವಸ್ತುಗಳನ್ನು ಸಾಗಿಸುತ್ತಾರೆ. ಮಾದಕ ವಸ್ತುಗಳ ಕಡಲ ಕಳ್ಳಸಾಗಣೆ ತಡೆಹಿಡಿಯುವ ಗುರಿ ಹೊಂದಿರುವ "ಆಪರೇಷನ್ ಸಮುದ್ರಗುಪ್ತ್" ನ ಭಾಗವಾಗಿ ಈ ಕಾರ್ಯಚರಣೆ ನಡೆಸಲಾಗಿದೆ. ಡ್ರಗ್ಸ್ ಸಾಗಿಸುತ್ತಿದ್ದ "ಮದರ್ ಶಿಪ್" ಅನ್ನು ತಡೆಹಿಡಿದ ನಂತರ ಶಂಕಿತ ಪಾಕಿಸ್ತಾನಿ ಪ್ರಜೆಯನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದೆ.

ಈ ಮಾರ್ಗದ ಮೂಲಕ ಮಾದಕವಸ್ತುಗಳ ಸಾಗಣೆಗೆ ಸಂಬಂಧಿಸಿದಂತೆ ಕಳೆದ 18 ತಿಂಗಳುಗಳಲ್ಲಿ ಎನ್‌ಸಿಬಿ ನಡೆಸಿದ ಕಾರ್ಯಚರಣೆಯಲ್ಲಿ ಮೂರು ಬಾರಿ ಭಾರಿ ಮೊತ್ತದ ಡ್ರಗ್ಸ್​ ಜಪ್ತಿ ಮಾಡಿಕೊಂಡಿದೆ. ಆಪರೇಷನ್ ಸಮುದ್ರಗುಪ್ತ್ ಕಾರ್ಯಾಚರಣೆಯ ಅಡಿಯಲ್ಲಿ ಎನ್‌ಸಿಬಿ ಹಾಗೂ ನೌಕಾಪಡೆಯು 2022ರ ಫೆಬ್ರವರಿಯಲ್ಲಿ ಮೊದಲ ಬಾರಿಗೆ 529 ಕೆ.ಜಿ ಹ್ಯಾಶಿಶ್‌, 221 ಕೆ.ಜಿ ಮೆಟಾಂಪೆಟಮೈನ್‌ ಹಾಗೂ 13 ಕೆ.ಜಿ ಹೆರಾಯಿನ್‌ ವಶಪಡಿಸಿಕೊಂಡಿದ್ದವು.

ಪ್ರಕರಣದ ಕುರಿತು ಭಾರತೀಯ ನೌಕಾಪಡೆ ಸಹ ಮಾಹಿತಿ ಹಂಚಿಕೊಂಡಿದೆ. ಅಕ್ರಮವಾಗಿ ಮಾದಕವಸ್ತು ಸಾಗಾಟ ಮಾಡುತ್ತಿರುವ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ಕೈಗೊಂಡು, ದೊಡ್ಡ ಹಡಗನ್ನು ತಡೆಹಿಡಿಯಲಾಯಿತು. ಹಡಗಿನಿಂದ ಒಟ್ಟು 134 ಗೋಣಿ ಚೀಲಗಳಲ್ಲಿ ತುಂಬಿದ್ದ ಮೆಥಾಂಫೆಟಮೈನ್ ವಶಪಡಿಸಿಕೊಳ್ಳಲಾಗಿದೆ ಮತ್ತು ಒಬ್ಬ ಶಂಕಿತ ಪಾಕಿಸ್ತಾನಿ ಪ್ರಜೆಯನ್ನು ವಶಕ್ಕೆ ಪಡೆಯಲಾಗಿದೆ. ಸ್ಪೀಡ್ ಬೋಟ್ ಮೂಲಕ ಈ ನಿಷೇಧಿತ ವಸ್ತುಗಳನ್ನು ಹಡಗಿಗೆ ಲೋಡ್ ಮಾಡಲಾಗಿದೆ. ಕೇಸ್​ಗೆ ಸಂಬಂಧಪಟ್ಟಂತೆ ವಶಪಡಿಸಿಕೊಂಡ ಗೋಣಿಚೀಲಗಳು, ಪಾಕಿಸ್ತಾನಿ ಪ್ರಜೆ, ಸ್ಪೀಡ್ ಬೋಟ್ ಮತ್ತು ಮದರ್ ಶಿಪ್ ನಿಂದ ರಕ್ಷಿಸಲಾದ ಇತರೆ ಕೆಲವು ವಸ್ತುಗಳನ್ನು ಕೊಚ್ಚಿಯ ಮಟ್ಟಂಚೇರಿ ವಾರ್ಫ್‌ಗೆ ಸಾಗಿಸಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳುವಂತೆ ಎನ್‌ಸಿಬಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ :₹21 ಕೋಟಿ ಮೌಲ್ಯದ 3,400 ಕೆಜಿ ಹೈಟೆಕ್ ಗಾಂಜಾ ಜಪ್ತಿ: ಎನ್​ಸಿಬಿ ಇತಿಹಾಸದಲ್ಲೇ ದೊಡ್ಡ ಕಾರ್ಯಾಚರಣೆ

ಆಪರೇಷನ್ ಸಮುದ್ರಗುಪ್ತ್: ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕಡಲ ಮಾರ್ಗದ ಮೂಲಕ ಹೆರಾಯಿನ್ ಮತ್ತು ಇತರೆ ಮಾದಕವಸ್ತುಗಳನ್ನು ಕಡಲ ಮೂಲಕ ಸಾಗಾಣಿಕೆ ಮಾಡುತ್ತಿರುವುದು ತಿಳಿದುಬಂದಿತ್ತು. ಹಾಗಾಗಿ, ಇದು ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಉಂಟುಮಾಡಬಹುದು ಎಂಬ ದೃಷ್ಟಿಯಿಂದ ಎನ್‌ಸಿಬಿ ಮಹಾನಿರ್ದೇಶಕರು, ಉಪ ಮಹಾನಿರ್ದೇಶಕ ಸಂಜಯ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಆಪರೇಷನ್ ಸಮುದ್ರಗುಪ್ತ್ ಅನ್ನು 2022 ರ ಜನವರಿಯಲ್ಲಿ ಪ್ರಾರಂಭಿಸಿದ್ದರು.

ABOUT THE AUTHOR

...view details