ಕರ್ನಾಟಕ

karnataka

Omicron Fear: ಆಫ್ರಿಕಾದ ರಾಷ್ಟ್ರಗಳಿಂದ ಬಂದ ನೂರು ಮಂದಿ ಬಿಹಾರದಲ್ಲಿ ನಾಪತ್ತೆ

By

Published : Nov 30, 2021, 6:29 AM IST

Updated : Nov 30, 2021, 6:45 AM IST

ಬಿಹಾರಕ್ಕೆ ಆಫ್ರಿಕನ್ ರಾಷ್ಟ್ರಗಳಿಂದ ಬಂದ 281 ಮಂದಿಯಲ್ಲಿ ನೂರು ಮಂದಿ ಕಾಣೆಯಾಗಿದ್ದು, ಅವರನ್ನು ಹುಡುಕುವ ಪ್ರಯತ್ನವನ್ನು ಬಿಹಾರ ಆರೋಗ್ಯ ಇಲಾಖೆ ನಡೆಸುತ್ತಿದೆ.

100 returning from African countries to Bihar untraceable
Omicron Fear: ಆಫ್ರಿಕಾದ ರಾಷ್ಟ್ರಗಳಿಂದ ಬಂದ ನೂರು ಮಂದಿ ಬಿಹಾರದಲ್ಲಿ ನಾಪತ್ತೆ

ಪಾಟ್ನಾ, ಬಿಹಾರ: ಈಗಾಗಲೇ ಒಮಿಕ್ರೋನ್ ವೈರಸ್ ಜಗತ್ತಿನಾದ್ಯಂತ ಆತಂಕ ಸೃಷ್ಟಿಸುತ್ತಿದೆ. ಭಾರತಕ್ಕೆ ಓಮಿಕ್ರೋನ್ ಬರದಂತೆ ತಡೆಯಲು ಕೇಂದ್ರ ಸರ್ಕಾರವೂ ಕೂಡಾ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ತಪಾಸಣೆ ಮಾಡಿ, ಸೋಂಕು ಪರೀಕ್ಷೆ ಮಾಡಲಾಗುತ್ತದೆ. ಆದರೆ ಬಿಹಾರಕ್ಕೆ ಆಫ್ರಿಕನ್ ರಾಷ್ಟ್ರಗಳಿಂದ ಬಂದ ನೂರು ಮಂದಿ ಕಾಣೆಯಾಗಿದ್ದಾರೆ.

ಹೌದು, ಒಮಿಕ್ರೋನ್ ಕಾಣಿಸಿಕೊಂಡ ಆಫ್ರಿಕಾದ ದಕ್ಷಿಣ ಭಾಗದ ಕೆಲವು ರಾಷ್ಟ್ರಗಳಿಂದ ಬಿಹಾರಕ್ಕೆ ಬಂದ 281 ಮಂದಿಯಲ್ಲಿ ಸುಮಾರು 100 ಮಂದಿ ಕಾಣೆಯಾಗಿದ್ದು, ಪಾಸ್​ಪೋರ್ಟ್​ನಲ್ಲಿ ನಮೂದಿಸಿರುವ ವಿಳಾಸದಲ್ಲಿ ಅವರನ್ನು ಪತ್ತೆ ಹಚ್ಚಲು ಬಿಹಾರ ರಾಜ್ಯ ಆರೋಗ್ಯ ಇಲಾಖೆಗೆ ಸಾಧ್ಯವಾಗುತ್ತಿಲ್ಲ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

ನಾಪತ್ತೆಯಾಗಿರುವವರಲ್ಲಿ 30 ಮಂದಿ ಪಾಟ್ನಾದವರಾಗಿದ್ದು, ಅವರಲ್ಲಿ 11ರಿಂದ 12 ಮಂದಿಯನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಬಿಹಾರ ಸರ್ಕಾರ ಅವರನ್ನು ಕೊರೊನಾ ವೈರಸ್ ಸೋಂಕಿನ ಪರೀಕ್ಷೆಗೆ ಒಳಪಡಿಸಬೇಕಿದ್ದು, ಇನ್ನೂ ಪತ್ತೆಯಾಗದೇ ಇರುವುದು ಸಾಕಷ್ಟು ಆತಂಕ ಮೂಡಿಸಿದೆ.

ಪಾಟ್ನಾದಲ್ಲಿ ಇದುವರೆಗೆ 11 ಮಂದಿಯ ಸೋಂಕು ಪರೀಕ್ಷೆ ಫಲಿತಾಂಶ ಪಡೆಯಲಾಗಿದೆ. ಎಲ್ಲರ ಸೋಂಕು ಪರೀಕ್ಷೆಯಲ್ಲಿ ಕೊರೊನಾ ನೆಗೆಟಿವ್ ಬಂದಿದೆ. ನಾಪತ್ತೆಯಾದವರನ್ನು ಹುಡುಕುವ ಪ್ರಯತ್ನ ನಡೆಯುತ್ತಿದೆ ಎಂದು ಪಾಟ್ನಾದ ಸಿವಿಲ್ ಸರ್ಜನ್ ಹೇಳಿದ್ದಾರೆ.

ಇದನ್ನೂ ಓದಿ:Omicron: SAದಿಂದ ಬೆಂಗಳೂರಿಗೆ ಬಂದ ಇಬ್ಬರಿಗೆ ಪಾಟಿಸಿವ್... ಇಂದು ಬರಲಿದೆ ಮಹತ್ವದ ರಿಪೋರ್ಟ್

Last Updated : Nov 30, 2021, 6:45 AM IST

ABOUT THE AUTHOR

...view details