ETV Bharat / city

Omicron: SAದಿಂದ ಬೆಂಗಳೂರಿಗೆ ಬಂದ ಇಬ್ಬರಿಗೆ ಪಾಸಿಟಿವ್... ಇಂದು ಬರಲಿದೆ ಮಹತ್ವದ ರಿಪೋರ್ಟ್

author img

By

Published : Nov 30, 2021, 12:19 AM IST

Updated : Nov 30, 2021, 6:06 AM IST

ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ಒಮಿಕ್ರೋನ್ ರೂಪಾಂತರಿ ಕರ್ನಾಟಕದಲ್ಲೂ ಭೀತಿ ಉಂಟು ಮಾಡಿದೆ. ಅಲ್ಲಿಂದ ಆಗಮಿಸಿರುವ ಇಬ್ಬರಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಈ ಇಬ್ಬರ ಪೈಕಿ ಒಬ್ಬನಲ್ಲಿ ಡೆಲ್ಟಾ ವೈರಸ್ ಪತ್ತೆಯಾಗಿದ್ದು, ಇನ್ನೋರ್ವನ ವರದಿ ಮಂಗಳವಾರ ಬರಲಿದೆ.

Omicron Variant,ಒಮಿಕ್ರೋನ್ ರೂಪಾಂತರಿ
Omicron Variant

ಬೆಂಗಳೂರು: ಕೊರೊನಾ ಸೋಂಕಿನಿಂದ ಕಂಗಾಲಾಗಿದ್ದ ಜನರಿಗೆ ಇದೀಗ ಮತ್ತೊಂದು ಹೊಸ ರೂಪಾಂತರಿ ಜನರ ನಿದ್ದೆಗೆಡಿಸಿದೆ. ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ 'ಒಮಿಕ್ರೋನ್' ರೂಪಾಂತರಿ ವೈರಸ್ ಭಾರತದಲ್ಲಿ ಭೀತಿ ಮೂಡಿಸಿದೆ.

ಇನ್ನು ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿರುವ ಸುಮಾರು 95 ಜನರಲ್ಲಿ ಇಬ್ಬರಿಗೆ ಕೊರೊನಾ ಕಾಣಿಸಿರುವುದು ರಾಜ್ಯದ ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಇಬ್ಬರು ಸೋಂಕಿತರ ಸ್ವಾಬ್ ಜೆನೆಮಿಕ್ ಸೀಕ್ವೆನ್ಸ್ ಕಳಿಸಿದಾಗ ಇಬ್ಬರಲ್ಲಿ ಒಬ್ಬರದ್ದು ಡೆಲ್ಟಾ ವೈರಸ್ ಇರೋದು ಪತ್ತೆಯಾಗಿದ್ದು, ಇನ್ನೊಬ್ಬನ ಜಿನೋಮಿಕ್ ಸೀಕ್ವೆನ್ಸ್ ಲ್ಯಾಬ್ ರಿಪೋರ್ಟ್ ಮಂಗಳವಾರ ಬಿಬಿಎಂಪಿ ಕೈಸೇರಲಿದೆ. ಈ ವರದಿಯ ಬಳಿಕವಷ್ಟೇ ಒಮಿಕ್ರೋನ್ ಭೀತಿಯಿಂದ ಬೆಂಗಳೂರು ಪಾರಾಗಿದೆಯಾ ಎಂಬುದು ತಿಳಿದು ಬರಲಿದೆ.

ದಕ್ಷಿಣ ಆಫ್ರಿಕಾದಿಂದ ಆಗಮಿಸಿರುವ 95 ಜನರಿಗೆ ಪ್ರೈಮರಿ ಕಾಂಟ್ಯಾಕ್ಟ್ 12 ಜನ ಇದ್ದು, ಸೆಕೆಂಡರಿ ಕಾಂಟ್ಯಾಕ್ಟ್​ನಲ್ಲಿ 212 ಜನ ಇದ್ದರು. ಈ ಸಂಪರ್ಕಿತರೆಲ್ಲರ ಟೆಸ್ಟ್ ನೆಗೆಟಿವ್ ಇದೆ. ಜೆನೋಮಿಕ್ ರಿಪೋರ್ಟ್ ರಿಸಲ್ಟ್ ಬಾಕಿ ಇರುವ ವ್ಯಕ್ತಿಯ ಪ್ರೈಮರಿ ಸೆಕೆಂಡರಿ ಸಂಪರ್ಕಿತರನ್ನು ಪಾಲಿಕೆ ಪತ್ತೆ ಹಚ್ಚಿದೆ. ಈ ವ್ಯಕ್ತಿಗೆ ಪ್ರೈಮರಿ ಮತ್ತು ಸೆಕೆಂಡರಿ ಕಾಂಟ್ಯಾಕ್ಟ್ 26 ಜನರು ಇದ್ದು, ಸದ್ಯ ಇವರ ರಿಪೋರ್ಟ್ ನೆಗಟಿವ್ ಬಂದಿದೆ ಎಂದು ಪಾಲಿಕೆ ಮಾಹಿತಿ ನೀಡಿದೆ.

(ಇದನ್ನೂ ಓದಿ: ಓಮಿಕ್ರೋನ್ ಸೋಂಕಿಗೆ ಲಸಿಕೆ ನೀಡುವ ನೆಪದಲ್ಲಿ ಮನೆಗೆ ನುಗ್ಗಿ ಪಿಸ್ತೂಲ್ ತೋರಿಸಿ ದರೋಡೆ)

Last Updated : Nov 30, 2021, 6:06 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.