ETV Bharat / snippets

ತುಮಕೂರು: ಗ್ಯಾಸ್ ಸಿಲಿಂಡರ್‌ ಸ್ಫೋಟ, ಗಾಯಗೊಂಡ ಇಬ್ಬರು ಸಾವು

author img

By ETV Bharat Karnataka Team

Published : May 23, 2024, 8:50 AM IST

Updated : May 23, 2024, 8:58 AM IST

Tumakuru gas explosion case
ತುಮಕೂರು ಗ್ಯಾಸ್ ಸ್ಫೋಟ ಪ್ರಕರಣ (ETV Bharat)

ತುಮಕೂರು: ಗ್ಯಾಸ್​ ಸಿಲಿಂಡರ್​ ಸ್ಫೋಟ ಪ್ರಕರಣದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಮೃತಪಟ್ಟಿದ್ದಾರೆ. ಕುಣಿಗಲ್​ನ ಕೋಟೆ ನಿವಾಸಿಗಳಾದ ಕುಶಾಲ್ (11), ಶಿವಣ್ಣ (45) ಮೃತರು.

ರವಿಕುಮಾರ್ ಎಂಬವರು ಖಾರ ಪುರಿ ವ್ಯಾಪಾರ ಮಾಡುತ್ತಿದ್ದರು. ಪುರಿ ಹುರಿಯಲು ಹಾಗು ಅಡುಗೆಗೆ 4 ಕೆ.ಜಿಯ ಗ್ಯಾಸ್ ಸ್ಟವ್​ ಬಳಸುತ್ತಿದ್ದರು. ಮೇ 17ರಂದು ರವಿಕುಮಾರ್ ಪತ್ನಿ ಶೃತಿ, ಮಗಳು ಹೇಮಲತಾ ಟ್ಯೂಷನ್​ಗಾಗಿ ಮನೆಯಿಂದ ಹೊರಬರುತ್ತಿದ್ದಂತೆ ಸಿಲಿಂಡರ್ ಸ್ಫೋಟಗೊಂಡಿದೆ. ಮನೆಗೆ ಬೆಂಕಿ ಹೊತ್ತಿಕೊಂಡು ರವಿಕುಮಾರ್ ಮಗ ಕುಶಾಲ್, ಶೃತಿ, ಹೇಮಲತಾ, ಪಕ್ಕದ ಮನೆಯವರಾದ ಶಿವಣ್ಣ, ಮಂಜಮ್ಮ ಹಾಗು ಸಮೀನಾ ಗಾಯಗೊಂಡಿದ್ದರು.

ಗಾಯಾಳುಗಳನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಕುಶಾಲ್ ಮೃತಪಟ್ಟಿದ್ದಾರೆ. ಗಾಯಾಳುಗಳ ರಕ್ಷಣೆಗೆ ಮುಂದಾಗಿದ್ದ ಪಕ್ಕದ ಮನೆಯ ಶಿವಣ್ಣ ಎಂಬವರಿಗೂ ಬೆಂಕಿ ತಗುಲಿ ಗಾಯಗೊಂಡಿದ್ದು, ಅವರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಉಳಿದವರಿಗೆ ಚಿಕಿತ್ಸೆ ಮುಂದುವರೆದಿದೆ.

ಇದನ್ನೂ ಓದಿ: ಬೆಳಗಾವಿ: ರೈತ ಹೋರಾಟಗಾರ್ತಿ ಜಯಶ್ರೀ ಗುರನ್ನವರ ನಿಧನ - Jayashree Gurannavar

Last Updated : May 23, 2024, 8:58 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.