ETV Bharat / snippets

ಜುಲೈ 13, 14ಕ್ಕೆ ಪಿಜಿಸಿಇಟಿ ಪರೀಕ್ಷೆ: ಅರ್ಜಿ ಸಲ್ಲಿಕೆಗೆ ಜೂನ್ 18 ಕಡೆಯ ದಿನ

author img

By ETV Bharat Karnataka Team

Published : May 23, 2024, 4:29 PM IST

ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ETV Bharat)

ಬೆಂಗಳೂರು: 2024-25ನೇ ಸಾಲಿನ ಸ್ನಾತಕೋತ್ತರ ಕೋರ್ಸುಗಳ (ಎಂಬಿಎ, ಎಂಸಿಎ, ಎಂಟೆಕ್, ಎಂಇ, ಎಂ.ಆರ್ಕಿಟೆಕ್ಚರ್) ಪ್ರವೇಶಕ್ಕೆ ಜುಲೈ 13 ಮತ್ತು 14ರಂದು ಪ್ರವೇಶ ಪರೀಕ್ಷೆ (ಪಿಜಿಸಿಇಟಿ-24) ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತೀರ್ಮಾನಿಸಿದೆ.

ಎಂಇ/ಎಂಟೆಕ್/ ಆರ್ಕಿಟೆಕ್ಚರ್ ಕೋರ್ಸ್​ಗಳಿಗೆ ಜುಲೈ 13 ಹಾಗೂ ಎಂಸಿಎ ಮತ್ತು ಎಂಬಿಎಗೆ ಜುಲೈ 14ರಂದು ಪ್ರವೇಶ ಪರೀಕ್ಷೆಗೆ ನಡೆಸಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಮಾಹಿತಿ ನೀಡಿದ್ದಾರೆ.

ಮೇ 27ರಿಂದ ಜೂನ್ 17ರವರೆಗೆ ಆನ್​​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಜೂನ್ 18ರೊಳಗೆ ಶುಲ್ಕ ಪಾವತಿಸಬೇಕು. ಗೇಟ್ (GATE) ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಪಿಜಿಸಿಇಟಿ-24 ಗೆ ಹಾಜರಾಗುವ ಅಗತ್ಯ ಇಲ್ಲ. ಆದರೆ, ಅಂತಹ ಅಭ್ಯರ್ಥಿಗಳು ಆನ್​​ಲೈನ್​ನಲ್ಲಿ ಅರ್ಜಿ ಸಲ್ಲಿಸಿ, ಪ್ರವೇಶಕ್ಕೆ ಅರ್ಹರಾಗಬೇಕಾಗುತ್ತದೆ. ಗೇಟ್ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಪಿಜಿ ಪ್ರವೇಶ ನೀಡಲಾಗುತ್ತದೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ದ್ವಿತೀಯ ಪಿಯುಸಿ - 2 ಪರೀಕ್ಷೆಯ ಫಲಿತಾಂಶದ ನಂತರವೇ ಸಿಇಟಿ ರಿಸಲ್ಟ್​​​ : ಕೆಇಎ ಸ್ಪಷ್ಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.