ಮೀನು ಹಿಡಿಯಲು ಹೋದ ಯುವಕನ ಮೇಲೆ ಬೃಹತ್​ ಶಾರ್ಕ್​ ದಾಳಿ: ವಿಡಿಯೋ

By ETV Bharat Karnataka Team

Published : Feb 13, 2024, 11:05 PM IST

thumbnail

ಪಾಲ್ಘಾರ್ (ಮಹಾರಾಷ್ಟ್ರ): ಸರೋವರದಲ್ಲಿ ಮೀನು ಹಿಡಿಯಲು ಹೋಗಿದ್ದ ಯುವಕನ ಮೇಲೆ ಬೃಹತ್​ ಶಾರ್ಕ್​ ದಾಳಿ ಮಾಡಿ ಅರ್ಧಕಾಲನ್ನೇ ತಿಂದು ಹಾಕಿರುವ ಘಟನೆ ಮಹಾರಾಷ್ಟ್ರದ ಪಾಲ್ಘಾರ್​ ಜಿಲ್ಲೆಯಲ್ಲಿ ನಡೆದಿದೆ. 32 ವರ್ಷದ ವಿಕ್ಕಿ ಗೌವರಿ ಎಂಬ ಯುವಕನೇ ಮೀನಿನ ದಾಳಿಗೆ ತುತ್ತಾಗಿದ್ದು, ಸದ್ಯ ಈತನ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇಲ್ಲಿನ ಮನೋರ್​ ಎಂಬ ಪ್ರದೇಶದ ಸೈಲೆಂಟ್ ಹೋಟೆಲ್ ಬಳಿಯ ಸರೋವರದಲ್ಲಿ ವಿಕ್ಕಿ ಮೀನುಗಾರಿಕೆಗೆ ತೆರಳಿದ್ದ. ಈ ವೇಳೆ, ಬೃಹತ್ ಗಾತ್ರದ ಮೀನು ದಾಳಿ ಮಾಡಿ, ಕಾಲನ್ನು ಕಡಿದು ಹಾಕಿದೆ. ಇದರಿಂದ ತಪ್ಪಿಸಿಕೊಳ್ಳಲು ಯುವಕ ಸಾಕಷ್ಟು ಪ್ರಯತ್ನಪಟ್ಟಿದ್ದಾನೆ. ಆದರೆ, ಮೀನು ಮೊಣಕಾಲಿನ ಕೆಳ ಭಾಗವನ್ನು ತಿಂದು ಹಾಕಿದೆ. ಈ ವೇಳೆ, ವಿಷಯ ತಿಳಿದು ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಜೊತೆಗೆ ಪೊಲೀಸರು ಸಹ ಸ್ಥಳಕ್ಕೆ ದೌಡಾಯಿಸಿ, ಮೀನಿನ ಬಾಯಿಯಿಂದ ಆತನನ್ನು ರಕ್ಷಣೆ ಮಾಡಿದ್ದಾರೆ. ಮತ್ತೊಂದೆಡೆ, ಈ ಮೀನಿನ ಗಾತ್ರ ಸುಮಾರು 200 ಕೆಜಿ ಇದೆ ಎಂದು ಅಂದಾಜಿಸಲಾಗಿದೆ. ಇದನ್ನು ಸ್ಥಳೀಯರು ಸೆರೆಹಿಡಿದು ಕೊಂದು ಹಾಕಿದ್ದಾರೆ. ಶಾರ್ಕ್​ ದಾಳಿ ಮಾಡಿದ ವಿಡಿಯೋ ಮೊಬೈಲ್​ನಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಗಂಡನೊಂದಿಗೆ ಜಗಳ, ಮೂವರು ಮಕ್ಕಳೊಂದಿಗೆ ನದಿಗೆ ಹಾರಿದ ಮಹಿಳೆ: ಬದುಕುಳಿದ ತಾಯಿ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.