ಛತ್ರಪತಿ ಶಿವಾಜಿ 394ನೇ ಜನ್ಮದಿನ: ಮರಾಠ ನಾಯಕನ ಪ್ರತಿಮೆಗೆ ಸಿಎಂ ಏಕನಾಥ್​ ಶಿಂಧೆ ಪುಷ್ಪನಮನ

By ANI

Published : Feb 19, 2024, 12:18 PM IST

thumbnail

ಮುಂಬೈ (ಮಹಾರಾಷ್ಟ್ರ): ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನದ ನಿಮಿತ್ತ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸೋಮವಾರ ಮುಂಬೈನ ಚೆಂಬೂರಿನಲ್ಲಿರುವ ಶಿವಾಜಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ಇಂದು ವೀರ ಮರಾಠ ರಾಜ ಛತ್ರಪತಿ ಶಿವಾಜಿಯ 394ನೇ ಜನ್ಮದಿನವನ್ನು ಆಚರಿಸಲಾಗುತ್ತಿದ್ದು, ಈ ಹಿನ್ನೆಲೆ ಸಿಎಂ ಏಕನಾಥ್​ ಶಿಂಧೆ ಹಾಗೂ ಡಿಸಿಎಂ ದೇವೇಂದ್ರ ಫಡ್ನವೀಸ್​ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.

ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಶಿವಾಜಿ ಮಹಾರಾಜ್​ ಗೌರವ ಸಲ್ಲಿಸಿದರು. "ಅಖಂಡ ಹಿಂದೂಸ್ಥಾನದ ಆರಾಧ್ಯ ದೈವ, ಹಿಂದವಿ ಸ್ವರಾಜ್ಯದ ಸಂಸ್ಥಾಪಕ, ಮಹಾರಾಜಾಧಿರಾಜ್​, ಛತ್ರಪತಿ ಶಿವಾಜಿ ಮಹಾರಾಜ್​ ಅವರಿಗೆ ಜನ್ಮ ವಾರ್ಷಿಕೋತ್ಸವಕ್ಕೆ ನಮನಗಳು" ಎಂದು ಪೋಸ್ಟ್​ ಹಂಚಿಕೊಂಡಿದ್ದಾರೆ.

ಸಿಎಂ ಶಿಂಧೆ ಅವರು ಛತ್ರಪತಿ ಶಿವಾಜಿ ಮಹಾರಾಜ ವೃತ್ತ ಹಾಗೂ ಪ್ರತಿಮೆಯ ಸೌಂದರ್ಯೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಈ ವೇಳೆ ಮುಂಬೈ ಮಹಾನಗರ ಪಾಲಿಕೆ ಆಯುಕ್ತ ಇಕ್ಬಾಲ್​ ಸಿಂಗ್​ ಚಹಾಲ್​, ಸಂಸದ ರಾಹುಲ್​ ಶೆವಾಲೆ ಹಾಗೂ ಇತರ ಶಿವಸೇನೆ ಕಾರ್ಯಕರ್ತರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ನೋಡಿ: ಛತ್ರಪತಿ ಶಿವಾಜಿ ಕುರಿತ ನಾಟಕ ಪ್ರದರ್ಶನ: 17ನೇ ಶತಮಾನದ ಇತಿಹಾಸಕ್ಕೆ ಸಾಕ್ಷಿಯಾದ 10 ಸಾವಿರ ಜನ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.