ಹೆಗಡೆ, ಕಟೀಲ್‌ರನ್ನು ಮತದಾರರು ಹೀನಾಯವಾಗಿ ಸೋಲಿಸುತ್ತಾರೆ: ಸಚಿವ ಮಧು ಬಂಗಾರಪ್ಪ

By ETV Bharat Karnataka Team

Published : Jan 21, 2024, 9:27 AM IST

thumbnail

ಕಾರವಾರ(ಉತ್ತರ ಕನ್ನಡ): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವರು ಅನಂತ್​ ಕುಮಾರ್​ ಹೆಗಡೆ ಮತ್ತು ನಳಿನ್​ ಕುಮಾರ್ ಕಟೀಲ್‌ ಅವರಿಗೆ ಟಿಕೆಟ್ ಕೊಡಬೇಕು. ಇಂಥವರಿಗೆ ಟಿಕೆಟ್ ಕೊಟ್ಟು ಹೀನಾಯವಾಗಿ ಸೋಲಿಸಬೇಕು ಎಂದು ಸಚಿವ ಮಧು ಬಂಗಾರಪ್ಪ ವಾಕ್ಸಮರ ನಡೆಸಿದರು.

ಅಂಕೋಲಾದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ನಾಲ್ಕು ವರ್ಷ ಸುಮ್ಮನೆ ಕುಳಿತು ಕೊನೆಗೆ ಹೆಬ್ಬಾವಿನಂತೆ ತಲೆ ಎತ್ತಿಕೊಂಡು ಕೆಲವರು ಓಡಾಡುತ್ತಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದ ಸಂವಿಧಾನ ಬದಲಾಯಿಸುವ ಹೇಳಿಕೆ ನೀಡಿದ್ದಾರೆ. ಅಂಥವರಿಗೆ ಟಿಕೆಟ್ ಕೊಡಬೇಕು. ಹೆಗಡೆ ಹೆಸರು ಹೇಳದಿರಲು ನನಗೇನೂ ಭಯವಿಲ್ಲ. ನಳಿನ್​ ಕುಮಾರ್​ ಅಧ್ಯಕ್ಷತೆಯಲ್ಲೇ ಬಿಜೆಪಿಯವರು ಮೂರು ನಾಮ ಹಾಕಿಸಿಕೊಂಡು 67ಕ್ಕೆ ಬಂದು ಕೂತಿದ್ದಾರೆ. ಪ್ರಜಾಪ್ರಭುತ್ವ ಬದುಕಿದೆ ಎಂದಾದರೆ ಇಂಥವರಿಗೆ ಟಿಕೆಟ್ ಕೊಡಿ. ಮತದಾರರೇ ಅವರನ್ನು ಸೋಲಿಸುತ್ತಾರೆ, ನಾವೇನೂ ಮಾಡಬೇಕಾಗಿಲ್ಲ ಎಂದರು.

ನಿಜವಾದ ರಾಮ ಭಕ್ತರು ನಾವು. ರಾಮನ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿಯವರು ಡೂಪ್ಲಿಕೇಟ್. ನಾವು ನನ್ನ ಜೀವನದಲ್ಲಿ ರಾಮನನ್ನು ಮಾದರಿಯಾಗಿ ಇಟ್ಟುಕೊಂಡಿದ್ದೇವೆ. ಬಿಜೆಪಿಯವರು ಬರೀ ರಾಜಕಾರಣಕ್ಕೆ ಮಾತ್ರ ರಾಮನನ್ನು ಬಳಸಿಕೊಳ್ಳುತ್ತಾರೆ. ಬಿಜೆಪಿಯವರು ಯಾರೆಲ್ಲಾ ರಾಮನನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದಾರೋ ಅವರು ರಾಮನ ವಿರೋಧಿಗಳು ಎಂದು ವಾಗ್ದಾಳಿ ನಡೆಸಿದರು.     

ಇದನ್ನೂ ಓದಿ: ಸಂಸ್ಕೃತಿ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಬಹಿರಂಗ ಚರ್ಚೆಗೆ ಬರಲಿ: ಅನಂತ್ ಕುಮಾರ್​ ಹೆಗಡೆ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.