'ಮಠಕ್ಕೆ ಬರುತ್ತಿದ್ದ ಮಗು IAS ಮಾಡಬೇಕೆಂದಿದ್ದಳು': ನೇಹಾ ನೆನೆದು ದಿಂಗಾಲೇಶ್ವರ ಶ್ರೀ ಕಣ್ಣೀರು - Dingaleshwar Swamiji

By ETV Bharat Karnataka Team

Published : Apr 19, 2024, 5:14 PM IST

thumbnail

ಹುಬ್ಬಳ್ಳಿ: ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣ ಮಾನವ ಕುಲವೇ ತಲೆತಗ್ಗಿಸುವಂಥದ್ದು. ಇಂತಹ ಹೇಯ ಕೃತ್ಯವನ್ನು ಖಂಡಿಸುತ್ತೇವೆ. ಯಾವುದೇ ಕಾರಣಕ್ಕೂ ಈ ರೀತಿಯ ಘಟನೆಗಳು ನಡೆಯಬಾರದು ಎಂದು ಶಿರಹಟ್ಟಿಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ‌ ಹೇಳಿದರು.

ನಗರದಲ್ಲಿ ಇಂದು ನೇಹಾ ಮೃತದೇಹದ ಅಂತಿಮ ದರ್ಶನ ಪಡೆದು ಮಾತನಾಡಿದ ಅವರು, ಇಂತಹ ಪಾಪಿಗಳಿಗೆ ಕೂಡಲೇ ಶಿಕ್ಷೆಯಾಗಬೇಕು. ಭವಿಷ್ಯದಲ್ಲಿ ಯೂರೂ ಕೂಡಾ ಈ ರೀತಿಯ ಹೀನ ಕೃತ್ಯಕ್ಕೆ ಕೈ ಹಾಕಬಾರದು. ಪ್ರತಿ ಅಮಾವಾಸ್ಯೆಗೆ ಆ ಹೆಣ್ಣು ಮಗು ಮಠಕ್ಕೆ ಬರುತ್ತಿತ್ತು. ಐಎಎಸ್ ಮಾಡಬೇಕು ಅಂತ ಹೇಳುತ್ತಿದ್ದಳು. ಬೆರಳೆಣಿಕೆಯ ಪ್ರತಿಭಾವಂತರಲ್ಲಿ ಆಕೆಯೂ ಒಬ್ಬಳು. ಹೋದ ಜೀವ ಮರಳಿ ಬರುವುದಿಲ್ಲ‌. ಯಾವುದೇ ಪರಿಸ್ಥಿತಿಯಲ್ಲೂ ಯಾರಿಗೂ ಈ ರೀತಿ ಆಗಬಾರದು ಎಂದು ಕಾನೂನಿಗೆ ಕೈಮುಗಿದು ಬೇಡಿಕೊಳ್ಳುತ್ತೇನೆ ಎಂದು ಕಣ್ಣೀರು ಸುರಿಸಿದರು.

ವೀರಶೈವ ಜಂಗಮ ವಿಧಿ ವಿಧಾನದಂತೆ ಅಂತ್ಯಸಂಸ್ಕಾರ: ಬಿವಿಬಿ ಕಾಲೇಜು ಕ್ಯಾಂಪಸ್​​‌ನಲ್ಲಿ ನಿನ್ನೆ ಫಯಾಜ್ ಎಂಬಾತನಿಂದ ಬರ್ಬರವಾಗಿ ಕೊಲೆಯಾದ ನೇಹಾ ಹಿರೇಮಠ ಮೃತದೇಹದ ಅಂತಿಮ ಸಂಸ್ಕಾರ ಇಂದು ನೆರವೇರಿತು.‌ ನಗರದ ಮಂಟೂರು ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ವೀರಶೈವ ಜಂಗಮ ವಿಧಿವಿಧಾನಗಳಂತೆ ಕುಟುಂಬಸ್ಥರು ಅಂತಿಮ ವಿಧಿಗಳನ್ನು ನೆರವೇರಿಸಿದರು.

ಇದನ್ನೂಓದಿ: ನೇಹಾ ಹಿರೇಮಠ ಕೊಲೆ ಪ್ರಕರಣ: "ಎನ್​ಕೌಂಟರ್ ಕಾನೂನು ಬರಲೇಬೇಕು": ಸಂತೋಷ್​ ಲಾಡ್ - Minister Santosh Lad

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.