ಸಂಸದ ಡಿ.ಕೆ ಸುರೇಶ್ ಆಯೋಜಿಸಿದ್ದ ಉದ್ಯೋಗ ಮೇಳಕ್ಕೆ ಸುಂಟರಗಾಳಿ ಅಡ್ಡಿ, ಚೆಲ್ಲಾಪಿಲ್ಲಿಯಾದ ಪೆಂಡಲ್​ - ವಿಡಿಯೋ

By ETV Bharat Karnataka Team

Published : Feb 18, 2024, 5:27 PM IST

thumbnail

ತುಮಕೂರು : ಜಿಲ್ಲೆಯ ಕುಣಿಗಲ್ ಪಟ್ಟಣದ ಜಿಕೆಬಿಎಂಎಸ್ ಮೈದಾನದಲ್ಲಿ ಸಂಸದ ಡಿಕೆ ಸುರೇಶ್ ಅವರು ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಭಾರೀ ಪ್ರಮಾಣದ ಸುಂಟರಗಾಳಿ ಅಡ್ಡಿಯಾಯಿತು. ಸುಂಟರಗಾಳಿ ಬೀಸಿದ ರಭಸಕ್ಕೆ ಚೆಲ್ಲಾಪಿಲ್ಲಿಯಾದ ಪೆಂಡಲ್​ ಭಾನೆತ್ತರಕ್ಕೆ ಹಾರಿತ್ತು. ಇದನ್ನು ಕಂಡ ಜನರು ಕೆಲಕಾಲ ಗಾಬರಿಗೊಂಡರು.

ಡಿಕೆಎಸ್ ಚಾರಿಟೇಬಲ್ ಟ್ರಸ್ಟ್ ಹಾಗೂ ಅಕ್ಷರ ಫೌಂಡೇಶನ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಕಾರದೊಂದಿಗೆ ಸಂಸದ ಡಿಕೆ ಸುರೇಶ್ ನೇತೃತ್ವದಲ್ಲಿ ಉದ್ಯೋಗ ಮೇಳ ನಡೆಯುತ್ತಿತ್ತು. ಈ ಕಾರ್ಯಕ್ರಮಕ್ಕೆ ಡಿ. ಕೆ ಸುರೇಶ್, ಕುಣಿಗಲ್ ಶಾಸಕ ಡಾ. ರಂಗನಾಥ್ ಅವರು ಸೇರಿದಂತೆ, ಸುಮಾರು 2 ಸಾವಿರಕ್ಕಿಂತ ಹೆಚ್ಚು ಉದ್ಯೋಗಾಕಾಂಕ್ಷಿಗಳು ಭಾಗಿಯಾಗಿದ್ದರು. ಅಚ್ಚುಕಟ್ಟಾಗಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಇದ್ದಕ್ಕಿದಂತೆ ಸುಂಟರಗಾಳಿ ಬೀಸಿತು. ಇದರ ಪರಿಣಾಮ ಪೆಂಡಲ್​ ಹಾಕಲು ನೆಟ್ಟಿದ್ದ ಕಂಬಗಳನ್ನು ಹಿಡಿದು ಜನರು ನಿಂತುಕೊಂಡರೆ, ಸುಂಟರಗಾಳಿ ಬೀಸಿದ ರಭಸಕ್ಕೆ ಪೆಂಡಲ್​ ಕಿತ್ತು ಬಂದಿತು. ಅದೃಷ್ಟವಶಾತ್​ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ.  

ಇದನ್ನೂ ಓದಿ : ದಾವಣಗೆರೆ: ಅಡಿಕೆ, ಬಾಳೆ ತೋಟಕ್ಕೆ ಕೊಳ್ಳಿ ಇಟ್ಟ ಕೀಚಕರು; ಸುಟ್ಟು ಕರಕಲಾದ ಫಸಲು ಕಂಡು ರೈತ ಕಂಗಾಲು

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.