Watch: ಬೈಕ್​ ಸವಾರನಿಗೆ ಏಕಾಏಕಿ ಗುಮ್ಮಿದ ಕೋಲೆ ಬಸವ: ಸಿಸಿಟಿವಿಯಲ್ಲಿ ದೃಶ್ಯ ಸೆರೆ - Bull Attack

By ETV Bharat Karnataka Team

Published : Apr 5, 2024, 11:42 AM IST

Updated : Apr 5, 2024, 4:29 PM IST

thumbnail

ಬೆಂಗಳೂರು: ಬೈಕ್​ ಸವಾರನ ಮೇಲೆ ರಸ್ತೆಯಲ್ಲಿ ಕರೆದೊಯ್ಯುತ್ತಿದ್ದ ಕೋಲೆ ಬಸವ ಏಕಾಏಕಿ ದಾಳಿ ನಡೆಸಿದೆ. ಘಟನೆಯಲ್ಲಿ ಬೈಕ್ ಸವಾರ ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಘಟನೆ ಕಳೆದ ವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮಹಾಲಕ್ಷ್ಮೀ ಲೇಔಟ್ ಸ್ವಿಮ್ಮಿಂಗ್ ಫೂಲ್ ರಸ್ತೆಯಲ್ಲಿ ರಘು ಎಂಬ ಯುವಕ ತಮ್ಮ ಪಾಡಿಗೆ ತಾನು ದ್ವಿಚಕ್ರದಲ್ಲಿ ಹೋಗುವಾಗ ಎದುರುಗಡೆಯಿಂದ ಮಹಿಳೆ ಕೋಲೆ ಬಸವನನ್ನು ಹಿಡಿದುಕೊಂಡು ಬರುತ್ತಿದ್ದಳು. ಇದ್ದಕ್ಕಿದ್ದಂತೆ ಅದೇನಾಯ್ತೋ ಏನೋ ಬಸವ ಎದುರುಗಡೆ ಬರುತ್ತಿದ್ದ ಬೈಕ್​ ಸವಾರನ ಮೇಲೆ ಎಗರಿ ಗುದ್ದಿದೆ. ಇದರ ರಭಸಕ್ಕೆ ಬೈಕ್ ಸವಾರ ತನ್ನೆದುರು ಬರುತ್ತಿದ್ದ ಲಾರಿಯ ಕೆಳಗೆ ಬಿದ್ದಿದ್ದಾನೆ. ಪುಣ್ಯಕ್ಕೆ ಲಾರಿ ಚಾಲಕ ಕೂಡ ತಕ್ಷಣ ಸೈಡ್​ಗೆ​ ತೆರಳಿ ಬ್ರೇಕ್​ ಹಾಕಿದ್ದಾನೆ. ಪರಿಣಾಮ ಬೈಕ್ ಚಾಲಕ ಲಾರಿಯ ಕೆಳಗೆ ಬಿದ್ದರೂ, ಅಪಾಯದಿಂದ ಬದುಕುಳಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮೈ ಜುಂ ಎನ್ನಿಸುವಂತಿದೆ.

Last Updated : Apr 5, 2024, 4:29 PM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.