ನೀತಿ ಸಂಹಿತೆ ನಡುವೆಯೂ ಭಾರತ್ ಅಕ್ಕಿ ವಿತರಣೆ ಆರೋಪ: ವಶಕ್ಕೆ ಪಡೆದ ಅಧಿಕಾರಿಗಳು

By ETV Bharat Karnataka Team

Published : Mar 19, 2024, 6:38 PM IST

thumbnail

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆ ದೇಶಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿದೆ. ಇದರ  ನಡುವೆಯೂ ಕೇಂದ್ರ ಸರ್ಕಾರದಿಂದ ಬರುವ ಭಾರತ್ ಅಕ್ಕಿ ಸಾರ್ವಜನಿಕ ವಿತರಣೆಗೆ ಮುಂದಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಮಾಹಿತಿ ಅರಿತು ಚುನಾವಣೆ ಫ್ಲೈಯಿಂಗ್​ ಸ್ಕ್ವಾಡ್​ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿರುವ ಘಟನೆ ನಗರದಲ್ಲಿ ಕಂಡು ಬಂದಿದೆ. 

ಚುನಾವಣೆ ಹಿನ್ನೆಲೆ ಮತದಾರರಿಗೆ ಆಮಿಷವೊಡ್ಡುವ ರೀತಿಯಲ್ಲಿ ಆಹಾರ ಸಾಮಗ್ರಿ ವಿತರಿಸಿಕೂಡದು ಎಂದು ತಿಳಿದಿದ್ದರೂ ರಾಜಕೀಯ ಮುಖಂಡರೊಬ್ಬರು ಭಾರತ್ ಅಕ್ಕಿಯನ್ನ ವಿತರಣೆ ಮಾಡುವುದಕ್ಕೆ ಮುಂದಾಗಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇದರ ಹಿನ್ನೆಲೆ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದಾಗ ಲಾರಿಯಲ್ಲಿ 10 ಕೆ.ಜಿ.ಇರುವ 940 ಮೂಟೆಗಳಿರುವುದನ್ನ ಪತ್ತೆ ಆಗಿದೆ. 

ರಾಜಕೀಯ ಮುಖಂಡರೊಬ್ಬರು ತಮ್ಮ ಕಚೇರಿ ಪಕ್ಕದಲ್ಲೇ ಅಕ್ಕಿ ವಿತರಣೆಗೆ ಮುಂದಾಗಿದ್ದರು ಎಂಬ ಆರೋಪವೂ ಇದೆ. ಸದ್ಯ 10 ಕೆ.ಜಿ.ವಿರುವ 940 ಅಕ್ಕಿ ಚೀಲವನ್ನ ಜಪ್ತಿ ಮಾಡಿಕೊಂಡಿರುವ ಫ್ಲೈಯಿಂಗ್​ ಸ್ಕ್ವಾಡ್​ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಗೋವಿಂದರಾಜನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಓದಿ: ಲೋಕಸಭೆ ಚುನಾವಣೆಗಳಲ್ಲಿ ಗೆದ್ದವರಿಗಿಂತ ಠೇವಣಿ ಕಳೆದುಕೊಂಡವರೇ ಹೆಚ್ಚು: ಹೀಗಿದೆ ಅಂಕಿಅಂಶ 

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.