ETV Bharat / technology

ರಷ್ಯಾಗೆ ಸ್ಟಾರ್​ಲಿಂಕ್ ಇಂಟರ್​ನೆಟ್​ ಟರ್ಮಿನಲ್ ನೀಡಿಲ್ಲ: ಎಲೋನ್ ಮಸ್ಕ್

author img

By ETV Bharat Karnataka Team

Published : Feb 12, 2024, 12:22 PM IST

ಸ್ಪೇಸ್​ಎಕ್ಸ್​ನ ಯಾವುದೇ ಸ್ಟಾರ್​ಲಿಂಕ್ ಉಪಕರಣಗಳನ್ನು ರಷ್ಯಾಕ್ಕೆ ನೀಡಿಲ್ಲ ಎಂದು ಎಲೋನ್ ಮಸ್ಕ್ ಸ್ಪಷ್ಟ ಪಡಿಸಿದ್ದಾರೆ.

No Starlink terminal sold directly or indirectly to Russia: Musk

ನವದೆಹಲಿ: ಯಾವುದೇ ಸ್ಟಾರ್ ಲಿಂಕ್ ಟರ್ಮಿನಲ್ ಅನ್ನು ರಷ್ಯಾಕ್ಕೆ ನೇರವಾಗಿ ಅಥವಾ ಪರೋಕ್ಷವಾಗಿ ಮಾರಾಟ ಮಾಡಿಲ್ಲ ಎಂದು ಟೆಸ್ಲಾ ಮತ್ತು ಸ್ಪೇಸ್ ಎಕ್ಸ್​ ಸಿಇಒ ಎಲೋನ್ ಮಸ್ಕ್ ಸೋಮವಾರ ಹೇಳಿದ್ದಾರೆ. ಆಕ್ರಮಿತ ಉಕ್ರೇನ್​ನಲ್ಲಿನ ರಷ್ಯಾದ ಪಡೆಗಳು ಸ್ಟಾರ್​ಲಿಂಕ್​ನ ಉಪಗ್ರಹ ಇಂಟರ್​ನೆಟ್​ ಸೌಲಭ್ಯ ಬಳಸುತ್ತಿವೆ ಎಂಬ ಆರೋಪಗಳಿಗೆ ಅವರು ಉತ್ತರಿಸಿದರು.

"ಸ್ಪೇಸ್ಎಕ್ಸ್ ಸ್ಟಾರ್​ಲಿಂಕ್​ ಟರ್ಮಿನಲ್​ಗಳನ್ನು ರಷ್ಯಾಕ್ಕೆ ಮಾರಾಟ ಮಾಡುತ್ತಿದೆ ಎಂದು ಹಲವಾರು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಇದು ಸಂಪೂರ್ಣವಾಗಿ ಸುಳ್ಳು. ನನಗೆ ತಿಳಿದಿರುವಂತೆ, ಯಾವುದೇ ಸ್ಟಾರ್​ಲಿಂಕ್​ಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ರಷ್ಯಾಕ್ಕೆ ಮಾರಾಟ ಮಾಡಿಲ್ಲ" ಎಂದು ಮಸ್ಕ್ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ರಷ್ಯಾ ಸರ್ಕಾರ ಅಥವಾ ಅದರ ಮಿಲಿಟರಿಯೊಂದಿಗೆ ಯಾವುದೇ ರೀತಿಯ ವ್ಯವಹಾರವನ್ನು ಮಾಡುವುದಿಲ್ಲ ಎಂದು ಈ ಹಿಂದೆ ಸ್ಪೇಸ್ಎಕ್ಸ್ ಹೇಳಿತ್ತು. ಸ್ಟಾರ್ ಲಿಂಕ್ ಟರ್ಮಿನಲ್ ಗಳು ಜಿಯೋಫೆನ್ಸಿಂಗ್ ಆಗಿರುವುದರಿಂದ ಅವು ಅನಧಿಕೃತ ಸ್ಥಳಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ ಮತ್ತು ಬಳಕೆದಾರರ ಗುರುತು ಪುರಾವೆಗಳನ್ನು ದೃಢಪಡಿಸಿದ ನಂತರವೇ ಸ್ಟಾರ್ ಲಿಂಕ್ ಸೇವೆಗಳನ್ನು ಒದಗಿಸುತ್ತದೆ ಎಂಬುದು ಗಮನಾರ್ಹ.

"ಸ್ಟಾರ್​ಲಿಂಕ್ ಟರ್ಮಿನಲ್ ಅನ್ನು ಎಲ್ಲಿಯಾದರೂ ಅನಧಿಕೃತವಾಗಿ ಬಳಸುತ್ತಿರುವುದು ನಮಗೆ ತಿಳಿದು ಬಂದರೆ ನಾವು ಆ ಬಗ್ಗೆ ತನಿಖೆ ನಡೆಸುತ್ತೇವೆ ಮತ್ತು ಅದನ್ನು ನಿಷ್ಕ್ರಿಯಗೊಳಿಸುತ್ತೇವೆ" ಎಂದು ಕಂಪನಿ ಎಕ್ಸ್​ನಲ್ಲಿ ಪೋಸ್ಟ್ ಮಾಡಿದೆ. ಆದಾಗ್ಯೂ, ರಷ್ಯಾ ಆಕ್ರಮಿಸಿಕೊಂಡ ಉಕ್ರೇನಿಯನ್ ಪ್ರದೇಶಗಳಲ್ಲಿ ಸ್ಟಾರ್​ಲಿಂಕ್ ತಂತ್ರಜ್ಞಾನವನ್ನು ಬಳಸಬಹುದೇ ಎಂಬ ಬಗ್ಗೆ ಮಸ್ಕ್ ಅಥವಾ ಸ್ಪೇಸ್ ಎಕ್ಸ್ ಇಬ್ಬರೂ ಸ್ಪಷ್ಟಪಡಿಸಿಲ್ಲ.

ರಷ್ಯಾ ವಿರುದ್ಧ ಉಕ್ರೇನ್ ಆರೋಪ: ಆಕ್ರಮಿತ ಉಕ್ರೇನ್​ನಲ್ಲಿರುವ ರಷ್ಯಾದ ಪಡೆಗಳು ಎಲೋನ್ ಮಸ್ಕ್ ಅವರ ಸ್ಪೇಸ್ಎಕ್ಸ್ ಸ್ಟಾರ್​ಲಿಂಕ್ ಟರ್ಮಿನಲ್​ಗಳನ್ನು ಉಪಗ್ರಹ ಇಂಟರ್​ನೆಟ್​ಗಾಗಿ ಬಳಸುತ್ತಿವೆ ಎಂದು ಉಕ್ರೇನ್​ನ ಮಿಲಿಟರಿ ಗುಪ್ತಚರ ಸಂಸ್ಥೆ ಭಾನುವಾರ ಆರೋಪಿಸಿದೆ. ಭಾಗಶಃ ಆಕ್ರಮಿತ ಉಕ್ರೇನ್​ನ ಪೂರ್ವ ಪ್ರದೇಶದ ಡೊನೆಸ್ಕ್​ ಕ್ಲಿಶ್ಚಿವ್ಕಾ ಮತ್ತು ಆಂಡ್ರಿವ್ಕಾ ಪಟ್ಟಣಗಳ ಬಳಿ ಹೋರಾಡುತ್ತಿರುವ ರಷ್ಯಾದ 83 ನೇ ವಾಯು ದಾಳಿ ಬ್ರಿಗೇಡ್​ ಘಟಕಗಳು ಈ ಟರ್ಮಿನಲ್​ಗಳನ್ನು ಬಳಸುತ್ತಿವೆ ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ರಷ್ಯಾದ ಪಡೆಗಳು ಉಕ್ರೇನ್ ಸೈನಿಕರಿಂದ ಸ್ಟಾರ್​ಲಿಂಕ್ ಉಪಕರಣಗಳನ್ನು ವಶಪಡಿಸಿಕೊಂಡಿರುವ ಸಾಧ್ಯತೆಯಿದೆ ಹಾಗೂ ಈ ಮೂಲಕ ಸ್ಟಾರ್​ಲಿಂಕ್ ಟ್ಯಾಪ್ ಮಾಡಿ ರಷ್ಯಾ ಯೋಧರು ಇವನ್ನು ಬಳಸುತ್ತಿರಬಹುದು ಎಂದು ಕೆಲ ಮಾಧ್ಯಮ ವರದಿಗಳು ಶಂಕೆ ವ್ಯಕ್ತಪಡಿಸಿವೆ.

ಇದನ್ನೂ ಓದಿ : ಮಂಗಳನ ಮೇಲೆ 1 ಲಕ್ಷ ಮಾನವರ ವಸಾಹತು: ಎಲೋನ್ ಮಸ್ಕ್​ ಮಹತ್ವಾಕಾಂಕ್ಷಿ ದೃಷ್ಟಿಕೋನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.