ಹೊಸ ಸ್ಯಾಮ್​ಸಂಗ್ ಕ್ರಿಸ್ಟಲ್ 4ಕೆ ಟಿವಿ ಬಿಡುಗಡೆ: ಬೆಲೆ ಎಷ್ಟು ಗೊತ್ತಾ? - SAMSUNG TV

author img

By ETV Bharat Karnataka Team

Published : Apr 12, 2024, 12:28 PM IST

Samsung launches new TV series with variety of features in India

ಸ್ಯಾಮ್​ಸಂಗ್ ತನ್ನ ಹೊಸ ಕ್ರಿಸ್ಟಲ್ 4 ಕೆ ಸರಣಿ ಟಿವಿಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ನವದೆಹಲಿ: ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಸ್ಯಾಮ್​ಸಂಗ್ ಗುರುವಾರ ಭಾರತದಲ್ಲಿ ವಿವಿಧ ವೈಶಿಷ್ಟ್ಯಗಳ ಹೊಸ ಕ್ರಿಸ್ಟಲ್ 4 ಕೆ ಟಿವಿ (Crystal 4K TV) ಸರಣಿಯನ್ನು ಬಿಡುಗಡೆ ಮಾಡಿದೆ. ಕ್ರಿಸ್ಟಲ್ ಸರಣಿಯ ಕ್ರಿಸ್ಟಲ್ 4 ಕೆ ವಿವಿಡ್, ಕ್ರಿಸ್ಟಲ್ 4 ಕೆ ವಿಷನ್ ಪ್ರೊ ಮತ್ತು ಕ್ರಿಸ್ಟಲ್ 4 ಕೆ ವಿವಿಡ್ ಪ್ರೊ ಟಿವಿಗಳು ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿವೆ. ಕಂಪನಿಯ ಅಧಿಕೃತ ವೆಬ್​ಸೈಟ್ ಮತ್ತು ಪ್ರಮುಖ ಆನ್​ಲೈನ್ ಸ್ಟೋರ್​ಗಳಲ್ಲಿ ಹೊಸ ಟಿವಿಗಳನ್ನು 32,990 ರೂ.ಗಳ ಆರಂಭಿಕ ಬೆಲೆಯಲ್ಲಿ ಖರೀದಿಸಬಹುದಾಗಿದೆ.

"2024 ರ ಕ್ರಿಸ್ಟಲ್ 4 ಕೆ ಟಿವಿ ಸರಣಿಯು ಗ್ರಾಹಕರಿಗೆ ಅತ್ಯುನ್ನತ ಟಿವಿ ವೀಕ್ಷಣೆಯ ಅನುಭವವನ್ನು ಒದಗಿಸಲಿದೆ. ಈ ಟಿವಿಗಳು ಸ್ಮಾರ್ಟ್ ಮತ್ತು ಸಂಪರ್ಕಿತ ಜೀವನದ ಅನುಕೂಲತೆಯನ್ನು ಮತ್ತಷ್ಟು ಹೆಚ್ಚಿಸಲಿವೆ" ಎಂದು ಸ್ಯಾಮ್​ಸಂಗ್ ಇಂಡಿಯಾದ ವಿಷುಯಲ್ ಡಿಸ್​ಪ್ಲೇ ವ್ಯವಹಾರದ ಹಿರಿಯ ಉಪಾಧ್ಯಕ್ಷ ಮೋಹನ್ ದೀಪ್ ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹೊಸ ಟಿವಿ ಸರಣಿಯು 43 ಇಂಚು, 50 ಇಂಚು, 55 ಇಂಚು, 65 ಇಂಚು ಮತ್ತು 75 ಇಂಚಿನ ಸ್ಕ್ರೀನ್ ಗಾತ್ರಗಳಲ್ಲಿ ಲಭ್ಯವಿವೆ. ಇವು ಸ್ಯಾಮ್​ಸಂಗ್ ಟಿವಿ ಪ್ಲಸ್ ಮತ್ತು Calm Onboarding ನೊಂದಿಗೆ ಅಂತರ್​ನಿರ್ಮಿತ ಐಒಟಿ ಹಬ್​ನಂಥ ವೈಶಿಷ್ಟ್ಯಗಳನ್ನು ಒಳಗೊಂಡಿವೆ.

ಇದಲ್ಲದೆ ಹೊಸ ಸರಣಿಯು 4 ಕೆ ಅಪ್ ಸ್ಕೇಲಿಂಗ್ ವೈಶಿಷ್ಟ್ಯದಿಂದ ನಿಯಂತ್ರಿಸಲ್ಪಡುತ್ತದೆ. ಇದು 4 ಕೆ ಡಿಸ್​ಪ್ಲೇಯ ಹೆಚ್ಚಿನ ರೆಸಲ್ಯೂಶನ್​ಗೆ ಸರಿಹೊಂದುವಂತೆ ಕಡಿಮೆ-ರೆಸಲ್ಯೂಶನ್ ಕಂಟೆಂಟ್​ನ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಇದು ನೈಜವಾಗಿ ಕಾಣುವ 4 ಕೆ ಚಿತ್ರದ ಗುಣಮಟ್ಟವನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ. ಈ ಸರಣಿಯು ಸ್ಮಾರ್ಟ್ ಹಬ್ ಅನ್ನು ಸಹ ಒಳಗೊಂಡಿದೆ. ಇದು ಮನರಂಜನೆ, ಆಂಬಿಯೆಂಟ್ ಮತ್ತು ಗೇಮಿಂಗ್ ಆಯ್ಕೆಗಳನ್ನು ಒಟ್ಟಿಗೆ ಜೋಡಿಸುವ ಸ್ಮಾರ್ಟ್ ಹೋಮ್​ ವೈಶಿಷ್ಟ್ಯದ ಕೇಂದ್ರ ಬಿಂದುವಾಗಿದೆ.

ಅಮೆರಿಕದ ಮುಂಚೂಣಿ ಗೃಹೋಪಯೋಗಿ ಎಲೆಕ್ಟ್ರಾನಿಕ್ ಬ್ರಾಂಡ್ ಆದ ಸ್ಯಾಮ್​ಸಂಗ್: ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಕಳೆದ ವರ್ಷ ಅಮೆರಿಕದಲ್ಲಿ ಮಾರುಕಟ್ಟೆ ಪಾಲಿನ ದೃಷ್ಟಿಯಿಂದ ಅತ್ಯಂತ ಜನಪ್ರಿಯ ಗೃಹೋಪಯೋಗಿ ಬ್ರಾಂಡ್ ಆಗಿ ಹೊರಹೊಮ್ಮಿದೆ. ಮಾರುಕಟ್ಟೆ ಸಂಶೋಧಕ ಟ್ರಾಕ್ ಲೈನ್​ನ ಅಂಕಿಅಂಶಗಳ ಪ್ರಕಾರ, ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ 2023 ರಲ್ಲಿ ಯುಎಸ್​ನಲ್ಲಿ ಗೃಹೋಪಯೋಗಿ ವಸ್ತುಗಳ ಮಾರುಕಟ್ಟೆಯ ಶೇಕಡಾ 21 ರಷ್ಟು ಪಾಲು ಪಡೆದುಕೊಂಡಿದೆ. ಕೊರಿಯಾದ ಎಲ್​ಜಿ ಎಲೆಕ್ಟ್ರಾನಿಕ್ಸ್ ಶೇಕಡಾ 19, ಜನರಲ್ ಎಲೆಕ್ಟ್ರಿಕ್ ಶೇಕಡಾ 18 ಮತ್ತು ವರ್ಲ್ ಪೂಲ್ ಶೇಕಡಾ 15 ರಷ್ಟು ಮಾರುಕಟ್ಟೆ ಪಾಲಿನೊಂದಿಗೆ ನಂತರದ ಸ್ಥಾನಗಳಲ್ಲಿವೆ.

ಇದನ್ನೂ ಓದಿ : ಸ್ಯಾಮ್​ಸಂಗ್​ ಗ್ಯಾಲಕ್ಸಿ M ಸರಣಿಯ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ: ₹__ಆರಂಭಿಕ ಬೆಲೆಯಲ್ಲಿ ಲಭ್ಯ - Samsung Smartphones

ETV Bharat Logo

Copyright © 2024 Ushodaya Enterprises Pvt. Ltd., All Rights Reserved.