ETV Bharat / technology

ರಿಯಲ್​ ಮಿ Narzo 70 Pro 5ಜಿ ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ರೂ. 19,999 ನಿಂದ ಆರಂಭ - smartphone

author img

By ETV Bharat Karnataka Team

Published : Apr 7, 2024, 12:15 PM IST

ರಿಯಲ್ ಮಿ ತನ್ನ ಹೊಸ Narzo 70 Pro 5G ಸ್ಮಾರ್ಟ್​ ಫೋನ್ ಅನ್ನು ಬಿಡುಗಡೆ ಮಾಡಿದೆ.

realme Narzo 70 Pro: Stylish mid-range 5G phone with innovative features
realme Narzo 70 Pro: Stylish mid-range 5G phone with innovative features

ನವದೆಹಲಿ: ರಿಯಲ್ ಮಿ ತನ್ನ ಹೊಸ ಮಧ್ಯಮ ಶ್ರೇಣಿಯ ಸ್ಮಾರ್ಟ್ ಫೋನ್ ನಾರ್ಜೋ 70 ಪ್ರೊ 5 ಜಿ (Narzo 70 Pro 5G) ಯನ್ನು ಬಿಡುಗಡೆ ಮಾಡಿದೆ. 10 ಕ್ಕೂ ಹೆಚ್ಚು ರೀತಿಯ ಸನ್ನೆಗಳೊಂದಿಗೆ ದೈಹಿಕ ಸಂಪರ್ಕವಿಲ್ಲದೆ ಸಾಧನವನ್ನು ನಿರ್ವಹಿಸಲು ಅನುವು ಮಾಡಿಕೊಡುವ 'ಏರ್ ಗೆಸ್ಚರ್ಸ್' (air gestures) ಎಂಬ ವೈಶಿಷ್ಟ್ಯವನ್ನು ಈ ಫೋನ್ ಹೊಂದಿದೆ. ವೇಗದ ಸಂಪರ್ಕ, ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ದೃಢವಾದ ವೈಶಿಷ್ಟ್ಯಗಳನ್ನು ಈ ಫೋನ್ ಒಳಗೊಂಡಿದೆ.

ರಿಯಲ್ ಮಿ ನಾರ್ಜೋ 70 ಪ್ರೊ 5 ಜಿ ಸರಣಿಯ 8GB+256GB ಮಾದರಿಯ ಇತರ ವೈಶಿಷ್ಟ್ಯಗಳನ್ನು ನೋಡುವುದಾದರೆ, ಇದು ನಯವಾದ ಮತ್ತು ಆಧುನಿಕ ವಿನ್ಯಾಸವನ್ನು ಹೊಂದಿದೆ. ಸಾಧನವು ವೃತ್ತಾಕಾರದ ಅಂಚುಗಳ ಸ್ಲಿಮ್ ಪ್ರೊಫೈಲ್ ಹೊಂದಿರುವುದರಿಂದ ಕೈಯಲ್ಲಿ ಹಿಡಿದುಕೊಳ್ಳಲು ಆರಾಮದಾಯಕವಾಗಿದೆ. ಹಿಂಭಾಗದಲ್ಲಿ ಗಾಜಿನ ನವಿರು ಮ್ಯಾಟ್ ಫಿನಿಶ್ ನೊಂದಿಗೆ ಸಂಯೋಜಿಸಲ್ಪಟ್ಟಿರುವುದು ಗಮನ ಸೆಳೆಯುತ್ತದೆ. ಇನ್ನು ಕ್ಯಾಮೆರಾ ಮಾಡ್ಯೂಲ್​ನ ಸ್ಥಾನವು ಅತ್ಯಾಧುನಿಕತೆಯ ಸ್ಪರ್ಶವನ್ನು ನೀಡುತ್ತದೆ.

ಈ ಸ್ಮಾರ್ಟ್ ಫೋನ್ 6.67 ಇಂಚಿನ ಅಮೋಲೆಡ್ ಡಿಸ್ ಪ್ಲೇ, ನಯವಾದ 120 ಹೆರ್ಟ್ಜ್ ರಿಫ್ರೆಶ್ ರೇಟ್ ಹೊಂದಿದೆ. ಸಾಮಾಜಿಕ ಮಾಧ್ಯಮ ಫೀಡ್ ಗಳ ಮೂಲಕ ಸ್ಕ್ರಾಲ್ ಮಾಡುವಾಗ ಅಥವಾ ವೀಡಿಯೊಗಳನ್ನು ನೋಡುವಾಗ ಈ ಹೆಚ್ಚಿನ ರಿಫ್ರೆಶ್ ರೇಟ್ ಬಳಕೆದಾರರ ಅನುಭವವನ್ನು ಹೆಚ್ಚಿಸುತ್ತದೆ. ಬಣ್ಣಗಳು ಸ್ಪಷ್ಟವಾಗಿವೆ ಮತ್ತು ಪ್ರಕಾಶಮಾನತೆಯ ಮಟ್ಟಗಳು ಒಳಾಂಗಣ ಮತ್ತು ಹೊರಾಂಗಣ ಬಳಕೆಗೆ ಸೂಕ್ತವಾಗಿವೆ. 50MP Sony IMX890 ಕ್ಯಾಮೆರಾ ಜೊತೆಗೆ OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ವೈಶಿಷ್ಟ್ಯ ಇದರಲ್ಲಿದೆ.

ನಾರ್ಜೋ 70 ಪ್ರೊ 5ಜಿ ಮೀಡಿಯಾಟೆಕ್ ಡೈಮೆನ್ಸಿಟಿ 7050 5ಜಿ ಚಿಪ್ ಸೆಟ್ ಹೊಂದಿದೆ. ಇಮೇಲ್ ಕಳುಹಿಸುವುದು, ಫೋನ್ ಕರೆ ಮಾಡುವುದು, ಸರ್ಫಿಂಗ್, ಬ್ರೌಸಿಂಗ್, ವೀಡಿಯೊ ನೋಡುವುದು ಮತ್ತು ಇತರ ವಾಡಿಕೆಯ ಕೆಲಸಗಳ ಸಂದರ್ಭದಲ್ಲಿ ಇದು ಯಾವುದೇ ಅಡೆತಡೆ ಇಲ್ಲದೆ ಕೆಲಸ ಮಾಡುತ್ತದೆ.

ನಾರ್ಜೋ 70 ಪ್ರೊ 5 ಜಿಯ ಅತ್ಯುತ್ತಮ ವೈಶಿಷ್ಟ್ಯವೆಂದರೆ ಏರ್ ಗೆಸ್ಚರ್​ಗಳು. ಇದರಿಂದ ನೀವು ಯಾವುದೇ ದೈಹಿಕ ಸಂಪರ್ಕವಿಲ್ಲದೆ ನಿಮ್ಮ ಕೈಗಳನ್ನು ತೋರಿಸುವ ಅಥವಾ ಆಡಿಸುವ ಮೂಲಕ ಸನ್ನೆಗಳಿಂದಲೇ ಸ್ಮಾರ್ಟ್ ಫೋನ್ ಅನ್ನು ನಿರ್ವಹಿಸಬಹುದು.

67-ವ್ಯಾಟ್​ನ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000 ಎಂಎಎಚ್ ದೊಡ್ಡ ಬ್ಯಾಟರಿ ಇದರಲ್ಲಿದೆ. ಆಂಡ್ರಾಯ್ಡ್ 14 ಆಧಾರಿತ ರಿಯಲ್ ಮಿ ಯುಐ 5.0 ನಲ್ಲಿ ಕೆಲಸ ಮಾಡುವ ನಾರ್ಜೋ 70 ಪ್ರೊ 5 ಜಿ ವೈಶಿಷ್ಟ್ಯ ಸಮೃದ್ಧ ಮತ್ತು ಅರ್ಥಗರ್ಭಿತ ಬಳಕೆದಾರ ಇಂಟರ್ಫೇಸ್ ಅನ್ನು ನೀಡುತ್ತದೆ.

ನಾರ್ಜೋ 70 ಪ್ರೊ 5ಜಿ ಗ್ಲಾಸ್ ಗ್ರೀನ್ ಮತ್ತು ಗ್ಲಾಸ್ ಗೋಲ್ಡ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್ ಫೋನ್ ಅನ್ನು ನೀವು 19,999 ರೂ.ಗಳ ಆರಂಭಿಕ ಬೆಲೆಗೆ ಖರೀದಿಸಬಹುದು.

ಇದನ್ನೂ ಓದಿ : ಆಳ ಸಮುದ್ರ ಗಣಿಗಾರಿಕೆ: ಸಾಧಕ-ಬಾಧಕಗಳ ಬಗ್ಗೆ ನಡೆಯಬೇಕಿದೆ ವ್ಯಾಪಕ ಸಂಶೋಧನೆ - Deep Sea Mining

ETV Bharat Logo

Copyright © 2024 Ushodaya Enterprises Pvt. Ltd., All Rights Reserved.