ETV Bharat / technology

ಲಾವಾ 'ಬ್ಲೇಜ್ ಕರ್ವ್ 5ಜಿ' ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು ಗೊತ್ತಾ?

author img

By ETV Bharat Karnataka Team

Published : Mar 5, 2024, 2:39 PM IST

ಲಾವಾ ತನ್ನ ಹೊಸ ಬ್ಲೇಜ್ ಕರ್ವ್ 5 ಜಿ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದೆ.

Lava launches new smartphone with 64MP camera, 6.67-inch display
Lava launches new smartphone with 64MP camera, 6.67-inch display

ನವದೆಹಲಿ: ದೇಶೀಯ ಸ್ಮಾರ್ಟ್ ಫೋನ್ ಬ್ರಾಂಡ್ ಲಾವಾ ಮಂಗಳವಾರ ತನ್ನ ಹೊಸ ಸ್ಮಾರ್ಟ್ ಫೋನ್ ಬ್ಲೇಜ್ ಕರ್ವ್ 5 ಜಿ (Blaze Curve 5G) ಬಿಡುಗಡೆ ಮಾಡಿದೆ. ಇದು 64 ಎಂಪಿ ಕ್ಯಾಮೆರಾ ಮತ್ತು 6.67 ಇಂಚಿನ 120 ಹೆರ್ಟ್ಜ್ 3 ಡಿ ಕರ್ವ್ಡ್ ಅಲ್ಮೋಡ್​ ಡಿಸ್ ಪ್ಲೇ ಹೊಂದಿರುವ ಲಾವಾದ ಅತ್ಯಾಧುನಿಕ ಸ್ಮಾರ್ಟ್​ ಫೋನ್ ಇದಾಗಿದೆ.

ಬ್ಲೇಜ್ ಕರ್ವ್ 5 ಜಿ ಇದು 17,999 ರೂ.ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಾಗಲಿದ್ದು, ಐರನ್ ಗ್ಲಾಸ್ ಮತ್ತು ವಿರಿಡಿಯನ್ ಗ್ಲಾಸ್ ಎಂಬ ಎರಡು ಬಣ್ಣಗಳಲ್ಲಿ ಸಿಗಲಿದೆ. ಮಾರ್ಚ್ 11 ರಿಂದ ಅಮೆಜಾನ್ ಡಾಟ್ ಇನ್, ಲಾವಾ ಇ- ಸ್ಟೋ ರ್ ಮತ್ತು ಲಾವಾ ರಿಟೇಲ್ ನೆಟ್ವರ್ಕ್ ಮಳಿಗೆಗಳಲ್ಲಿ ಹೊಸ ಸ್ಮಾರ್ಟ್​ಫೋನ್ ಖರೀದಿಗೆ ಲಭ್ಯ ಇರುತ್ತದೆ.

"20 ಸಾವಿರ ರೂಪಾಯಿಗಿಂತ ಕಡಿಮೆ ಬೆಲೆ ಶ್ರೇಣಿಯ ಫೋನ್ ಖರೀದಿಸಬಯಸುವ ಭಾರತೀಯ ಗ್ರಾಹಕರ ಆಕಾಂಕ್ಷೆಗಳನ್ನು ಪೂರೈಸಲು ಈ ಸ್ಮಾರ್ಟ್​​ಫೋನ್​​​ ತಯಾರಿಸಲಾಗಿದೆ. ಬ್ಲೇಜ್ ಸರಣಿಯೊಂದಿಗೆ ಗ್ರಾಹಕರಿಗೆ ವಿಶ್ವದರ್ಜೆಯ ಅನುಭವ ಒದಗಿಸುವುದು ನಮ್ಮ ಗುರಿಯಾಗಿದೆ" ಎಂದು ಲಾವಾ ಇಂಟರ್ ನ್ಯಾಷನಲ್ ವ್ಯವಸ್ಥಾಪಕ ನಿರ್ದೇಶಕ ಸುನಿಲ್ ರೈನಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಸ್ಮಾರ್ಟ್ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 7050 ಪ್ರೊಸೆಸರ್, 8 ಜಿಬಿ ರಾಮ್ ಮತ್ತು 128 / 256 ಜಿಬಿ ರೋಮ್​​ ಹೊಂದಿದೆ. ಕಂಪನಿಯ ಪ್ರಕಾರ, ಇದು ಪ್ರೀಮಿಯಂ ಎಜಿ ಗ್ಲಾಸ್ ಬ್ಯಾಕ್ ವಿನ್ಯಾಸ ಮತ್ತು ಇಐಎಸ್ ಬೆಂಬಲದೊಂದಿಗೆ 64 ಎಂಪಿ ಪ್ರಾಥಮಿಕ ಹಿಂಭಾಗದ ಕ್ಯಾಮೆರಾ (ಸೋನಿ ಸೆನ್ಸಾರ್) ಜೊತೆಗೆ 8 ಎಂಪಿ ಅಲ್ಟ್ರಾವೈಡ್ ಮತ್ತು 2 ಎಂಪಿ ಮ್ಯಾಕ್ರೋ ಎಲ್ಇಡಿ ಫ್ಲ್ಯಾಶ್ ಹೊಂದಿದೆ.

ಈ ಸಾಧನವು 32 ಎಂಪಿ ಮುಂಭಾಗದ ಕ್ಯಾಮೆರಾ ಹೊಂದಿದ್ದು, ಉತ್ತಮ ಗುಣಮಟ್ಟದ ಸೆಲ್ಫಿಗಳನ್ನು ಸೆರೆಹಿಡಿಯಬಹುದಾಗಿದೆ. ಇದು 5000 ಎಂಎಎಚ್ ಬ್ಯಾಟರಿ ಹೊಂದಿದ್ದು, 33 ವ್ಯಾಟ್ ಚಾರ್ಜರ್ ನೊಂದಿಗೆ ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ.

ಲಾವಾ ಇಂಟರ್ ನ್ಯಾಷನಲ್ ಇದು ಮೊಬೈಲ್ ಮತ್ತು ಟ್ಯಾಬ್ಲೆಟ್​ಗಳನ್ನು ಉತ್ಪಾದಿಸುವ ಭಾರತೀಯ ಕಂಪನಿಯಾಗಿದೆ. ಇದನ್ನು 2009 ರಲ್ಲಿ ಆರಂಭವಾಯಿತು. ಕಂಪನಿಯು ಕೈಗೆಟುಕುವ ಬೆಲೆಯ ಹ್ಯಾಂಡ್​ಸೆಟ್​ಗಳು, ಸ್ಮಾರ್ಟ್ ಫೋನ್​ಗಳು ಮತ್ತು ಟ್ಯಾಬ್ಲೆಟ್​ಗಳನ್ನು ತಯಾರಿಸುತ್ತಿದೆ. ಭಾರತದ ಹೊರತಾಗಿ, ಕಂಪನಿಯು ಆಫ್ರಿಕಾದಲ್ಲಿಯೂ ಕಾರ್ಯಾಚರಣೆಗಳನ್ನು ಹೊಂದಿದೆ. ಕಂಪನಿಯು ಝೋಲೊ ಎಂಬ ಪ್ರತ್ಯೇಕ ಬ್ರಾಂಡ್ ಅನ್ನು ಬಿಡುಗಡೆ ಮಾಡಿದೆ. ಇದು ಆಂಡ್ರಾಯ್ಡ್ ಸ್ಮಾರ್ಟ್ ಫೋನ್​ಗಳನ್ನು ಉತ್ಪಾದಿಸುತ್ತದೆ.

ಇದನ್ನೂ ಓದಿ : ಪ್ರಾಬಲ್ಯದ ದುರುಪಯೋಗ: ಆ್ಯಪಲ್​ಗೆ $2 ಬಿಲಿಯನ್ ಡಾಲರ್ ದಂಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.