ETV Bharat / technology

ಡೇಟಾ ಸೆಂಟರ್​ ಸಾಮರ್ಥ್ಯದಲ್ಲಿ ಆಸ್ಟ್ರೇಲಿಯಾ, ಜಪಾನ್​ ಹಿಂದಿಕ್ಕಿದ ಭಾರತ - Data Centre Capacity

author img

By ETV Bharat Karnataka Team

Published : May 15, 2024, 12:48 PM IST

ಡೇಟಾ ಸೆಂಟರ್​ ಆರಂಭಿಸುವಲ್ಲಿ ಭಾರತವು ಆಸ್ಟ್ರೇಲಿಯಾ, ಹಾಂಗ್ ಕಾಂಗ್ ಎಸ್ಎಆರ್, ಜಪಾನ್ ದೇಶಗಳನ್ನು ಹಿಂದಿಕ್ಕಿದೆ.

ಡೇಟಾ ಸೆಂಟರ್​ ಸಾಮರ್ಥ್ಯದಲ್ಲಿ ಆಸ್ಟ್ರೇಲಿಯಾ, ಜಪಾನ್​ ಹಿಂದಿಕ್ಕಿದ ಭಾರತ
ಡೇಟಾ ಸೆಂಟರ್​ ಸಾಮರ್ಥ್ಯದಲ್ಲಿ ಆಸ್ಟ್ರೇಲಿಯಾ, ಜಪಾನ್​ ಹಿಂದಿಕ್ಕಿದ ಭಾರತ (IANS)

ನವದೆಹಲಿ: ಭಾರತವು ಆಸ್ಟ್ರೇಲಿಯಾ, ಹಾಂಗ್ ಕಾಂಗ್ ಎಸ್ಎಆರ್, ಜಪಾನ್, ಸಿಂಗಾಪುರ್ ಮತ್ತು ಕೊರಿಯಾದಂತಹ ಪ್ರಮುಖ ದೇಶಗಳನ್ನು ಹಿಂದಿಕ್ಕಿ ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ (ಚೀನಾವನ್ನು ಹೊರತುಪಡಿಸಿ) 950 ಮೆಗಾವ್ಯಾಟ್​ನಷ್ಟು ಅತ್ಯಧಿಕ ಡೇಟಾ ಸೆಂಟರ್ ಸಾಮರ್ಥ್ಯವನ್ನು ಹೊಂದಿರುವ ದೇಶವಾಗಿದೆ ಎಂದು ಬುಧವಾರ ಬಿಡುಗಡೆಯಾದ ಖಾಸಗಿ ವರದಿ ತಿಳಿಸಿದೆ.

ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ ಸಿಬಿಆರ್​ಇ ಪ್ರಕಟಿಸಿದ ವರದಿಯ ಪ್ರಕಾರ, 2024-2026 ರ ಅವಧಿಯಲ್ಲಿ ಭಾರತವು ಹೆಚ್ಚುವರಿಯಾಗಿ 850 ಮೆಗಾವ್ಯಾಟ್​ನಷ್ಟು ಗರಿಷ್ಠ ಸಾಮರ್ಥ್ಯದ ಡೇಟಾ ಸೆಂಟರ್​ ಸೇರ್ಪಡೆ ಮಾಡುವ ಸಾಧ್ಯತೆಯಿದೆ. ಇದು ಯಾವುದೇ ಪ್ರಮುಖ ಎಪಿಎಸಿ ದೇಶಗಳಿಗಿಂತ ಹೆಚ್ಚಾಗಿದೆ.

ಭಾರತದ ಡೇಟಾ ಸೆಂಟರ್ ವಲಯವು ಅದರ ದೃಢತೆ ಮತ್ತು ಆಕರ್ಷಕ ಆದಾಯದ ಕಾರಣಗಳಿಂದ ಹೂಡಿಕೆದಾರರಿಗೆ ದೊಡ್ಡ ಅವಕಾಶವಾಗಿ ಹೊರಹೊಮ್ಮಿದೆ. 2018-2023 ರ ನಡುವೆ, ಭಾರತವು ಜಾಗತಿಕ ಮತ್ತು ದೇಶೀಯ ಹೂಡಿಕೆದಾರರಿಂದ 40 ಬಿಲಿಯನ್ ಡಾಲರ್​ಗಿಂತ ಹೆಚ್ಚಿನ ಹೂಡಿಕೆ ಬದ್ಧತೆಗಳನ್ನು ಪಡೆದುಕೊಂಡಿದೆ ಎಂಬ ಅಂಶವು ಈ ವಲಯದ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ವರದಿ ಹೇಳಿದೆ.

2022 ರಲ್ಲಿ ಇದ್ದ 200 ಮೆಗಾವ್ಯಾಟ್​ ಡೇಟಾ ಸೆಂಟರ್ ಸಾಮರ್ಥ್ಯಕ್ಕೆ ಹೋಲಿಸಿದರೆ 2023 ರಲ್ಲಿ 255 ಮೆಗಾವ್ಯಾಟ್​ ಸಾಮರ್ಥ್ಯದ ಹೊಸ ಡೇಟಾ ಸೆಂಟರ್​ಗಳು ಆರಂಭವಾಗಿವೆ. ಇದರ ಪರಿಣಾಮವಾಗಿ ವರ್ಷದ ಅಂತ್ಯದ ವೇಳೆಗೆ ಡೇಟಾ ಸೆಂಟರ್​ನ ಒಟ್ಟು ಸಾಮರ್ಥ್ಯ 1,030 ಮೆಗಾವ್ಯಾಟ್​ಗೆ ಏರಿಕೆಯಾಗಿದೆ. ಈ ತ್ವರಿತ ಬೆಳವಣಿಗೆಯು 2024 ರಲ್ಲಿಯೂ ಮುಂದುವರಿಯುವ ನಿರೀಕ್ಷೆಯಿದೆ. ವಿವಿಧ ನಗರಗಳಲ್ಲಿ 330 ಮೆಗಾವ್ಯಾಟ್‌ಗಿಂತ ಹೆಚ್ಚು ಯೋಜಿತ ಪೂರೈಕೆಯೊಂದಿಗೆ, ವಾರ್ಷಿಕವಾಗಿ ಶೇಕಡಾ 30 ರಷ್ಟು ಸ್ಟಾಕ್ ಹೆಚ್ಚಾಗುವ ಮೂಲಕ ಡೇಟಾ ಸೆಂಟರ್ ಸಾಮರ್ಥ್ಯ ಸುಮಾರು 1,370 ಮೆಗಾವ್ಯಾಟ್​ಗೆ ತಲುಪಲಿದೆ ಎಂದು ವರದಿ ತಿಳಿಸಿದೆ.

ಡೇಟಾ ಸೆಂಟರ್ ಎಂಬುದು ನೆಟ್​ವರ್ಕ್‌ನಲ್ಲಿ ಜೋಡಿಸಲಾದ ಕಂಪ್ಯೂಟರ್​ಗಳು, ಶೇಖರಣಾ ವ್ಯವಸ್ಥೆಗಳು ಮತ್ತು ಕಂಪ್ಯೂಟಿಂಗ್ ಮೂಲಸೌಕರ್ಯಗಳಿಂದ ಕೂಡಿದ ಸೌಲಭ್ಯವಾಗಿದ್ದು, ಸಂಸ್ಥೆಗಳು ದೊಡ್ಡ ಪ್ರಮಾಣದ ಡೇಟಾವನ್ನು ಒಟ್ಟುಗೂಡಿಸಲು, ಸಂಸ್ಕರಿಸಲು, ಸಂಗ್ರಹಿಸಲು ಮತ್ತು ಪ್ರಸಾರ ಮಾಡಲು ಇದನ್ನು ಬಳಸುತ್ತವೆ.

ಆಧುನಿಕ ಡೇಟಾ ಸೆಂಟರ್​ಗಳು ಸಾಂಪ್ರದಾಯಿಕ ಎಂಟರ್​ಪ್ರೈಸ್ ಅಪ್ಲಿಕೇಶನ್​ಗಳಿಂದ ಹಿಡಿದು ಆಧುನಿಕ ಕ್ಲೌಡ್-ನೇಟಿವ್ ಸೇವೆಗಳವರೆಗೆ ವಿವಿಧ ಕೆಲಸದ ಹೊರೆಗಳನ್ನು ನಿಭಾಯಿಸಬಲ್ಲವು. ಈ ಎಂಟರ್​ಪ್ರೈಸ್ ಡೇಟಾ ಸೆಂಟರ್​ಗಳು ಕ್ಲೌಡ್ ಕಂಪ್ಯೂಟಿಂಗ್, ಇನ್​-ಹೌಸ್ ಮತ್ತು ಆನ್-ಸೈಟ್ ಸಂಪನ್ಮೂಲಗಳನ್ನು ರಕ್ಷಿಸುವ ಸೌಲಭ್ಯಗಳನ್ನು ಸಂಯೋಜಿಸುತ್ತವೆ.

ಇದನ್ನೂ ಓದಿ : ಮಾನವ ಸಾಮರ್ಥ್ಯಕ್ಕೆ ಸರಿಸಾಟಿಯಾದ ಹೊಸ 'ಜಿಪಿಟಿ -4ಒ' ಹೊರತಂದ ಓಪನ್​ಎಐ - OpenAI GPT 4o

ETV Bharat Logo

Copyright © 2024 Ushodaya Enterprises Pvt. Ltd., All Rights Reserved.