ETV Bharat / technology

ಪರಿಸರ ಸ್ನೇಹಿ ಎಲೆಕ್ಟ್ರಿಕ್​ ಗೋ ಕಾರ್ಟಿಂಗ್​ ಆವಿಷ್ಕರಿಸಿದ ಪಾಲಿಟೆಕ್ನಿಕ್​ ವಿದ್ಯಾರ್ಥಿಗಳು

author img

By ETV Bharat Karnataka Team

Published : Feb 12, 2024, 1:37 PM IST

ರೇಸಿಂಗ್​ ಗೋ ಕಾರ್ಟಿಂಗ್​ ಕಾರುಗಳು ಇಂಧನ ಮತ್ತು ಮಾಲಿನ್ಯವನ್ನು ತಗ್ಗಿಸುವ ನಿಟ್ಟಿನಲ್ಲಿ ಈ ಸಂಶೋಧನೆ ನಡೆಸಲಾಗಿದೆ.

Electric Go-Karting
ಎಲೆಕ್ಟ್ರಿಕ್​ ಗೋ ಕಾರ್ಟಿಂಗ್

ಮೆಹಬೂಬ್​​ನಗರ: ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್​ ವಿದ್ಯಾರ್ಥಿಗಳು ಪರಿಸರಸ್ನೇಹಿ ಯೋಜನೆಯೊಂದಿಗೆ ಹೊಸ ಆವಿಷ್ಕಾರ ಮಾಡಿದ್ದಾರೆ. ವಿಶೇಷ ಎಂದರೆ ಅವರು, ಪರಿಸರದ ಸುಸ್ಥಿರತೆ ಕಾಪಾಡುವ ನಿಟ್ಟಿನಲ್ಲಿ ಅವರು ಎಲೆಕ್ಟ್ರಾನಿಕ್​ ಗೋ ಕಾರ್ಟಿಂಗ್​ ಅನ್ನು ಪರಿಚಯಿಸಿದ್ದಾರೆ.

ಸಾಂಪ್ರದಾಯಿಕವಾಗಿ, ರೇಸಿಂಗ್​ ಕಾರ್​​ಗಳು ವಿಶೇಷವಾಗಿ ಗೋ ಕಾರ್ಟಿಂಗ್​​ ಅತಿ ಹೆಚ್ಚು ಇಂಧನ ಬಳಕೆ ಮಾಡುವ ಜೊತೆಗೆ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತವೆ. ಇದನ್ನು ಗುರುತಿಸಿದ ವಿದ್ಯಾರ್ಥಿಗಳು, ಇದಕ್ಕೆ ಪರಿಹಾರವನ್ನು ಹುಡುಕಲು ಮುಂದಾಗಿದ್ದು, ಕೇವಲ ಪರಿಸರ ಮಾಲಿನ್ಯವನ್ನು ಮಾತ್ರ ಕಡಿಮೆ ಮಾಡದೇ ಪರಿಸರ ಸ್ನೇಹಿ ಇಂಜಿನಿಯರಿಂಗ್​ ಸಾಮರ್ಥ್ಯ ಹೊಂದಿರುವ ಅದ್ಭುತ ಪ್ರದರ್ಶನ ತೋರುವ ವಾಹನವನ್ನು ಅವಿಷ್ಕರಿಸಿದ್ದಾರೆ.

ಐದನೇ ಸೆಮಿಸ್ಟರ್​ನ ಆಟೋಮೊಬೈಲ್​ ಇಂಜಿನಿಯರಿಂಗ್​ನಲ್ಲಿ ರೂಪಿಸಿರುವ ಈ ಎಲೆಕ್ಟ್ರಾನಿಕ್​ ಗೋ ಕಾರ್ಟ್​​ ಯೋಜನೆ, ಹೆಚ್ಚು ವೆಚ್ಚದಾಯಕವಲ್ಲದ ಮತ್ತು ಅಭಿವೃದ್ಧಿ ಯೋಚಿತ ವಿನ್ಯಾಸದ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ. ಇದು ಸಾಂಪ್ರದಾಯಿಕ ರೇಸಿಂಗ್​ ಕಾರ್ಟ್​​ಗಿಂತ ಕಡಿಮೆ ವೆಚ್ಚ ಹೊಂದಿದ್ದು, ಕೇವಲ ₹ 32 ಸಾವಿರ ಬಜೆಟ್​ನಲ್ಲಿ ರೂಪಿಸಲಾಗಿದೆ.

ವಿದ್ಯಾರ್ಥಿಗಳು ಬುದ್ಧಿವಂತಿಕೆಯಿಂದ ಕೇವಲ ವೆಚ್ಚವನ್ನು ಕಡಿಮೆ ಮಾಡಿಲ್ಲ, ಬದಲಾಗಿ, ಅವರು ನಿಖರ ಆಯ್ದ ಉತ್ಪನ್ನಗಳನ್ನು ಆರಿಸುವ ಮೂಲಕ ಅದರ ಪ್ರದರ್ಶನ ಮತ್ತು ಸುಸ್ಥಿರತೆಯನ್ನು ಕಾಪಾಡಿಕೊಂಡಿದ್ದಾರೆ. ಅದ್ಭುತ ಪ್ರದರ್ಶನ ನೀಡುವ ಡಿಸಿ ಮೋಟಾರ್​, ಹಗುರವಾದ ಲೀಥಿಯಂ- ಆಯಾನ್​ ಬ್ಯಾಟರಿ ಮತ್ತು ಕ್ರೀಡಾ ಸೈಕಲ್​ ಚಕ್ರಗಳಂತಹ ಹೊಸ ಅವಿಷ್ಕಾರದ ಭಾಗಗಳನ್ನು ಇದರಲ್ಲಿ ಅಳವಡಿಕೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಅದರ ವೇಗ ಮತ್ತು ಸಾಮರ್ಥ್ಯಕ್ಕೆ ಒತ್ತು ನೀಡಿದ್ದಾರೆ.

ಇವರ ಈ ಆವಿಷ್ಕಾರವನ್ನು ಶ್ರೀಜನ ಟೆಕ್​ ಫೆಸ್ಟ್​ನಲ್ಲಿ ಅನಾವರಣ ಮಾಡಲಾಗಿದ್ದು, ಇದರಲ್ಲಿ ಜಿಲ್ಲಾ ಮಟ್ಟ ಬಹುಮಾನ ಗಳಿಸುವ ಮೂಲಕ ರಾಜ್ಯ ಮಟ್ಟದ ಪ್ರದರ್ಶನದಲ್ಲಿ ಅನಾವರಣಗೊಳ್ಳಲಿದೆ. ಎಲೆಕ್ಟ್ರಾನಿಕ್​ ಗೋ ಕಾರ್ಟ್​​ ರೇಸಿಂಗ್​ ಮೀರಿದ ಸಾಮರ್ಥ್ಯವನ್ನು ಹೊಂದಿದೆ. ಇದು 100 ಕೆಜಿ ತೂಕವನ್ನು ಒಯ್ಯಬಲ್ಲ ಶಕ್ತಿ ಹೊಂದಿದ್ದು, ಸಾರಿಗೆ ಮತ್ತು ವಿಶ್ರಾಂತಿ ಚಟುವಟಿಕೆಯಲ್ಲಿ ಇದನ್ನು ಬಳಕೆ ಮಾಡಬಹುದಾಗಿದೆ.

ಇದಕ್ಕಿಂತ ಹೆಚ್ಚಾಗಿ ಮಕ್ಕಳಿಂದ ದೊಡ್ಡವರು ಮತ್ತು ವಿಕಲಚೇತನರು ಈ ಕಾರನ್ನು ಚಲಾಯಿಸುವಂತಹ ಹಲವು ವೈವಿಧ್ಯತೆಯ ಲಭ್ಯತೆಯನ್ನು ಮಾಡಲಾಗಿದೆ.

ಇನ್ನು ವಿದ್ಯಾರ್ಥಿಗಳು ಹೇಳುವಂತೆ ಈ ಎಲೆಕ್ಟ್ರಾನಿಕ್​ ಗೋ ಕಾರ್ಟ್​​, ಸುಸ್ಥಿರ ಅವಿಷ್ಕಾರದತ್ತ ತಮ್ಮ ಪ್ರಯಾಣದ ಆರಂಭವಾಗಿದೆ. ಇದಕ್ಕೆ ಸರಿಯಾದ ಬೆಂಬಲ ಮತ್ತು ಪ್ರೋತ್ಸಾಹ ಸಿಕ್ಕಲ್ಲಿ, ಪರಿಸರ ಸ್ನೇಹಿ ನಿಟ್ಟಿನಲ್ಲಿ ಅಭಿವೃದ್ಧಿಯ ಗುರಿಯನ್ನು ಹೊಂದಿದ್ದು, ರೇಸಿಂಗ್​ ಜಗತ್ತಿನಲ್ಲಿ ಹಸಿರೀಕರಣ ಮತ್ತು ಉಲ್ಲಾಸಕರ ಭವಿಷ್ಯ ಕಾಣುತ್ತಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಮಂಗಳನ ಮೇಲೆ 1 ಲಕ್ಷ ಮಾನವರ ವಸಾಹತು: ಎಲೋನ್ ಮಸ್ಕ್​ ಮಹತ್ವಾಕಾಂಕ್ಷಿ ದೃಷ್ಟಿಕೋನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.