10 ಬೆಸ್ಟ್​ ಸೆಲ್ಲಿಂಗ್ ಸ್ಮಾರ್ಟ್​ಫೋನ್​ ಪಟ್ಟಿಯ ಅಗ್ರ 7 ಸ್ಥಾನದಲ್ಲಿ ಐಫೋನ್​

author img

By ETV Bharat Karnataka Team

Published : Feb 21, 2024, 4:58 PM IST

Apple grabs top 7 spots in 10 best-selling smartphones globally

ವಿಶ್ವದ 10 ಬೆಸ್ಟ್​ ಸೆಲ್ಲಿಂಗ್ ಸ್ಮಾರ್ಟ್​ಪೋನ್​ಗಳ ಪೈಕಿ 7 ಆ್ಯಪಲ್​ ಐಫೋನ್​ಗಳೇ ಆಗಿವೆ ಎಂದು ವರದಿ ಹೇಳಿದೆ.

ನವದೆಹಲಿ: 2023 ರಲ್ಲಿ ಹೆಚ್ಚು ಮಾರಾಟವಾದ 10 ಸ್ಮಾರ್ಟ್​ಪೋನ್​ಗಳ ಜಾಗತಿಕ ಪಟ್ಟಿಯಲ್ಲಿ ಆ್ಯಪಲ್ ಮೊದಲ ಬಾರಿಗೆ ಅಗ್ರ ಏಳು ಸ್ಥಾನಗಳನ್ನು ಪಡೆದುಕೊಂಡಿದೆ ಎಂದು ವರದಿಯೊಂದು ಬುಧವಾರ ತೋರಿಸಿದೆ. ಹಾಗೆಯೇ ಭಾರತವು ಒಂದೇ ವರ್ಷದಲ್ಲಿ 10 ಮಿಲಿಯನ್ ಐಫೋನ್​ ಮಾರಾಟ ದಾಟಿದ ಐದನೇ ಸ್ಮಾರ್ಟ್​ಫೋನ್ ಮಾರುಕಟ್ಟೆಯಾಗಿದೆ.

ಟಾಪ್ 10 ಸ್ಮಾರ್ಟ್ ಫೋನ್​ಗಳ ಒಟ್ಟಾರೆ ಮಾರುಕಟ್ಟೆ ಪಾಲು 2022 ರಲ್ಲಿ ಇದ್ದ ಶೇಕಡಾ 19 ರಿಂದ 2023 ರಲ್ಲಿ ಶೇಕಡಾ 20 ಕ್ಕೆ ತಲುಪಿದೆ. ಆ್ಯಪಲ್​ನ ಐಫೋನ್ 14 ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್ ಫೋನ್ ಆಗಿದ್ದು, ಈ ಪೈಕಿ ಅರ್ಧದಷ್ಟು ಮಾರಾಟ ಯುಎಸ್ ಮತ್ತು ಚೀನಾದಲ್ಲೇ ಆಗಿದೆ. ಐಫೋನ್ 15 ಸರಣಿಯು 2023 ರ ನಾಲ್ಕನೇ ತ್ರೈಮಾಸಿಕದಲ್ಲಿ ಜಾಗತಿಕ ಬೆಸ್ಟ್ ಸೆಲ್ಲರ್ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿದೆ. ಈ ಸರಣಿಯ ಐಫೋನ್ 15 ಪ್ರೊ ಮ್ಯಾಕ್ಸ್ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್ ಫೋನ್ ಆಗಿದೆ.

ಪಟ್ಟಿಯಲ್ಲಿ ಅತ್ಯಂತ ಹಳೆಯ ಮಾದರಿಯಾಗಿರುವ ಆ್ಯಪಲ್​ನ ಐಫೋನ್ 13 ಜಪಾನ್ ಮತ್ತು ಭಾರತದಲ್ಲಿ ಎರಡಂಕಿ ಬೆಳವಣಿಗೆಯೊಂದಿಗೆ ನಾಲ್ಕನೇ ಸ್ಥಾನವನ್ನು ಉಳಿಸಿಕೊಂಡಿದೆ. ಸ್ಯಾಮ್​​ಸಂಗ್​ನ ಬಜೆಟ್ ಎ ಸರಣಿಯು ವಿವಿಧ ಪ್ರದೇಶಗಳು ಮತ್ತು ಗ್ರಾಹಕ ವಿಭಾಗಗಳಲ್ಲಿ ಟಾಪ್ -10 ಪಟ್ಟಿಯಲ್ಲಿ ಮೂರು ಸ್ಥಾನಗಳನ್ನು ಪಡೆದುಕೊಂಡಿದೆ. ಸ್ಯಾಮ್​ಸಂಗ್ ಗ್ಯಾಲಕ್ಸಿ ಎ 14 5ಜಿ ಯುಎಸ್ ಮತ್ತು ಭಾರತದಲ್ಲಿ ಹೆಚ್ಚಿನ ಮಾರಾಟ ಕಂಡಿದ್ದು, ಏಳನೇ ಸ್ಥಾನ ಪಡೆದುಕೊಂಡಿದೆ.

ಮೊಟ್ಟಮೊದಲ ಬಾರಿಗೆ ಐಫೋನ್ ಅನ್ನು ಜನವರಿ 9, 2007 ರಂದು ಮ್ಯಾಕ್ ವರ್ಲ್ಡ್ ಸಮಾವೇಶದಲ್ಲಿ ಆ್ಯಪಲ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಬಿಡುಗಡೆ ಮಾಡಿದ್ದರು. ಇದನ್ನು ಮೊದಲ ಸ್ಮಾರ್ಟ್ ಫೋನ್ ಎಂದು ಪರಿಗಣಿಸಲಾಗಿಲ್ಲವಾದರೂ, ಗ್ರಾಹಕರು ಮತ್ತು ವ್ಯವಹಾರಗಳಲ್ಲಿ ಮೊಬೈಲ್ ಕಂಪ್ಯೂಟಿಂಗ್​ಗೆ ಜಾಗತಿಕ ಬದಲಾವಣೆ ತರಲು ಐಫೋನ್ ಸಹಾಯ ಮಾಡಿದೆ. ಸ್ಯಾಮ್​​ಸಂಗ್​​ ನಂತಹ ಕಂಪನಿಗಳ ಗೂಗಲ್ ಆಂಡ್ರಾಯ್ಡ್ ಆಧಾರಿತ ಸಾಧನಗಳು ಇದರ ಪ್ರಾಥಮಿಕ ಪ್ರತಿಸ್ಪರ್ಧಿಗಳಾಗಿವೆ. ಸ್ಯಾಮ್​ಸಂಗ್ ಸಹ 2007ರಲ್ಲಿಯೇ ತನ್ನ ಮೊಟ್ಟ ಮೊದಲ ಸ್ಮಾರ್ಟ್ ಫೋನ್​ ಅನ್ನು ಬಿಡುಗಡೆ ಮಾಡಿತ್ತು.

ಮೊದಲ ತಲೆಮಾರಿನ ಐಫೋನ್​​ನಲ್ಲಿ ಐಟ್ಯೂನ್ಸ್, ಸಫಾರಿ ವೆಬ್ ಬ್ರೌಸರ್ ಮತ್ತು ಐಫೋಟೋ ಸೇರಿದಂತೆ ಆಪಲ್ ಸಾಫ್ಟ್​ವೇರ್​ ಸೂಟ್​ ಪ್ರಿಲೋಡೆಡ್ ಆಗಿರುತ್ತಿದ್ದವು. ಇಂಟರ್ ನೆಟ್ ಮೆಸೇಜಿಂಗ್ ಪ್ರೋಟೋಕಾಲ್ ಮತ್ತು ಪೋಸ್ಟ್ ಆಫೀಸ್ ಪ್ರೋಟೋಕಾಲ್ 3 ಇಮೇಲ್ ಸೌಲಭ್ಯಗಳು ಕೂಡ ಇದರಲ್ಲಿದ್ದವು. ಎಟಿ ಅಂಡ್ ಟಿ ವೈರ್ ಲೆಸ್ ನೊಂದಿಗೆ ಎರಡು ವರ್ಷಗಳ ವಿಶೇಷ ಸಹಭಾಗಿತ್ವದಲ್ಲಿ ಆ್ಯಪಲ್ ಐಫೋನ್ ಅನ್ನು ಬಿಡುಗಡೆ ಮಾಡಿತ್ತು.

ಇದನ್ನೂ ಓದಿ : 2024ರ 3ನೇ ತ್ರೈಮಾಸಿಕದಲ್ಲಿ ಶೇ 6ರಷ್ಟು ಜಿಡಿಪಿ ಬೆಳವಣಿಗೆ: ಐಸಿಆರ್​ಎ ಅಂದಾಜು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.