ETV Bharat / state

ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಘಟನೆ: 13 ಜನರ ವಿರುದ್ಧ ಪ್ರಕರಣ

author img

By ETV Bharat Karnataka Team

Published : Mar 2, 2024, 5:13 PM IST

ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದ ಘಟನೆಗೆ ಸಂಬಂಧಿಸಿದಂತೆ ಒಟ್ಟು 13 ಜನರ ಮೇಲೆ ಪ್ರಕರಣ ದಾಖಲಾಗಿದೆ.

stripped and assaulted  land dispute  case registered  ಪ್ರಕರಣ ದಾಖಲು  ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ
ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಘಟನೆ: 13 ಜನರ ಮೇಲೆ ಪ್ರಕರಣ ದಾಖಲು

ಬೆಳಗಾವಿ: ಕಾಗವಾಡ ತಾಲೂಕಿನ ಗ್ರಾಮವೊಂದರ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಪರಿಶೀಲನೆ ನಡೆಸಿದ್ದರು. ಪ್ರಾಥಮಿಕವಾಗಿ ಒಟ್ಟು ಹದಿಮೂರು ಜನರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣ ಕಾಗವಾಡ ಪೊಲೀಸ್​ ಠಾಣೆಯಲ್ಲಿ ದಾಖಲಾಗಿತ್ತು.

2023 ಜುಲೈ 31ರಂದು ಆಸ್ತಿ ವಿವಾದದ ಜಗಳದಲ್ಲಿ ಮಹಿಳೆಯೊಬ್ಬರ ಸೀರೆ ಬಿಚ್ಚಿ ಹಲ್ಲೆ ಮಾಡಲಾಗಿತ್ತು ಎಂದು ಕಳೆದ ತಿಂಗಳು ಫೆಬ್ರುವರಿ 29ರಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿತ್ತು. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಕಾಗವಾಡ ತಹಶೀಲ್ದಾರ್ ಸಂಜಯ್ ಇಂಗಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ನೊಂದ ಕುಟುಂಬಸ್ಥರಿಂದ ಮಾಹಿತಿಯನ್ನು ಕಲೆ ಹಾಕಿದ್ದರು. ನಂತರ ಒತ್ತುವರಿಯಾಗಿರುವ ಜಮೀನನ್ನು ಅಧಿಕಾರಿಗಳ ಸಮ್ಮುಖದಲ್ಲಿ ಸರ್ವೇ ಕಾರ್ಯ ನಡೆಸಲಾಗಿತ್ತು. ನಂತರ ಒತ್ತುವರಿ ಜಮೀನು ತೆರವು ಕಾರ್ಯಾಚರಣೆ ನಡೆಸಿದರು. ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದ ಘಟನೆಗೆ ಸಂಬಂಧಿಸಿದಂತೆ ಫೆಬ್ರವರಿ 29ರಂದು ಸಂತ್ರಸ್ತ ಮಹಿಳೆ ಕಾಗವಾಡ ಪೊಲೀಸ್ ಠಾಣೆಯಲ್ಲಿ 13 ಜನರ ಮೇಲೆ ಪ್ರಕರಣ ದಾಖಲು ಮಾಡಿದ್ದರು.

ಸುಭಾಷ್ ದಶರಥ್ ದಾನೋಳಿ, ಸುರೇಶ್ ತಾತ್ಯಾಸಾಬ್ ದಾನೋಳಿ, ಬೀರಪ್ಪ ಭೀಮಪ್ಪ ನಾಗನೂರ, ಮಾಯಪ್ಪ ಶಿವಪ್ಪ ಹಲ್ಯಾಳ, ಮುರಾರಿ ಮದೇಪ್ಪ ಹಾದಿಮನಿ, ನವಲು ಮದೇಪ್ಪ ಹಾದಿಮನಿ, ನಾಗವ್ವ ಆನಂದ ಹಾದಿಮನಿ, ಅಕ್ಕವ್ವ ಹಾದಿಮನಿ, ರತ್ನವ್ವಾ ಶಂಕರ ಹಾದಿಮನಿ, ರುಕ್ಮವ್ವ ಹಾದಿಮನಿ, ಬಾಗವ್ವ ಸಿದ್ದಪ್ಪಾ ನಾಗನೂರ, ಕಾಮವ್ವ ಶಿದರಾಮ ಹಾದಿಮನಿ, ಭೀಮಪ್ಪ ಬೀರಪ್ಪ ನಾಗನೂರ ಎಂಬುವರ ಮೇಲೆ ಸಂತ್ರಸ್ತ ಮಹಿಳೆ ದೂರು ದಾಖಲಿಸಿದ್ದಾರೆ.

ಇನ್ನು ಆರೋಪಿಗಳ ಮೇಲೆ IPC 1860 (U/s-143,147,323,325,354(B), 341, 447, 427, 504, 431, 506, 149) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದರಲ್ಲಿ ಎ1 ಹಾಗೂ ಎ2 ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಈ ಕುರಿತು ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ: ರಾಮೇಶ್ವರಂ ಕೆಫೆ ಸ್ಫೋಟ : ಶಂಕಿತನ ಚಹರೆ ಪತ್ತೆ, ಪೊಲೀಸ್​ ತನಿಖೆ ಚುರುಕು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.